Advertisement

ಮೈಸೂರಿನ ಮಹನೀಯರ ಮೆಲುಕು

09:01 AM Nov 25, 2017 | Team Udayavani |

ನಾಡೋಜ ಡಾ.ದೇ.ಜವರೇಗೌಡ ವೇದಿಕೆ: ಮೈಸೂರನ್ನು ಜಗತ್ತಿನ ನಕಾಶೆಯಲ್ಲಿ ಛಾಪಿಸಿದ ಸಂಗತಿಗಳು ನೂರಾರು. ಅದಕ್ಕೆ ಕಾರಣರಾದವರಲ್ಲಿ ಹಲವಾರು ಮಹನೀಯರಿದ್ದಾರೆ. ಅವರಲ್ಲಿ ಪ್ರಮುಖ ಕಾಣಿಕೆ ಸಲ್ಲಿಸಿದ್ದು ಒಡೆಯರೊ, ದಿವಾನರೋ? ಹೈದರಾಲಿಯೋ, ಟಿಪ್ಪು ಸುಲ್ತಾನೋ? ಸಮ್ಮೇಳನದ ಮೊದಲ ದಿನ ನಡೆದ ಗೋಷ್ಠಿಯಲ್ಲಿ ಈ ಕುರಿತು ಬೆಳಕು ಚೆಲ್ಲುವ ಪ್ರಯತ್ನವಾಯಿತು.

Advertisement

ಸುಮಾರು ಒಂದೂವರೆ ಗಂಟೆಯಷ್ಟು ತಡವಾಗಿ ಕಾರ್ಯಕ್ರಮ ಶುರುವಾಗಿದ್ದು ಸಭಿಕರಲ್ಲಿ ಅಸಮಾಧಾನಕ್ಕೆ ಕಾರಣವಾಯಿತು. ಇದರ ಪರಿಣಾಮ ಭಾಷಣಕಾರರು ಸಿದ್ಧಪಡಿಸಿಟ್ಟುಕೊಂಡಿದ್ದ ವಿಷಯಗಳು ಪೂರ್ತಿಯಾಗಿ ಮಂಡನೆಗೊಳ್ಳಲೇ ಇಲ್ಲ. ಅರ್ಧಕ್ಕರ್ಧ ಭಾಗ
ಮೊಟಕುಗೊಂಡವು. ಇದರ ಹೊರತಾಗಿಯೂ ಹಿರಿಯ ಸಂಶೋಧಕ ಟಿ.ವಿ. ವೆಂಕಟಾಚಲ ಶಾಸ್ತ್ರಿಯವರ ಅಧ್ಯಕ್ಷತೆಯಲ್ಲಿ ಗೋಷ್ಠಿ ಸೊಗಸಾಗಿ ಮೂಡಿಬಂತು. ಮೈಸೂರಿನ ಅಭಿವೃದ್ಧಿ ಕುರಿತು ಒಡೆಯರ್‌ ವಂಶಸ್ಥರಿಗಿದ್ದ ದೂರದೃಷ್ಟಿ ಮತ್ತು ದಿವಾನರ ಕಾರ್ಯಕ್ಷಮತೆಯ ಕುರಿತು ಡಾ. ಎನ್‌.ಎಸ್‌. ತಾರಾನಾಥ, ಪ್ರೊ. ಡಿ.ಎಸ್‌. ಜಯಪ್ಪಗೌಡ ಮುಂತಾದವರು ಗೋಷ್ಠಿಯಲ್ಲಿ ವಿಷಯ ಮಂಡಿಸಿದರು.

ವಿಶ್ವ ಮಹಾಯುದ್ಧದಲ್ಲಿ ಮೈಸೂರು ರೇಷ್ಮೆ!: ಸಾಮಾನ್ಯವಾಗಿ ನಮ್ಮಲ್ಲಿ ವಿದೇಶಿ ವಸ್ತುಗಳು ಸ್ವದೇಶಿ ವಸ್ತುಗಳಿಗಿಂತ ಉತ್ತಮವೆಂಬ ಭಾವನೆ ಕೆಲವರಲ್ಲಿದೆ. ಅದಕ್ಕೇ ನಮ್ಮವರು ವಿದೇಶಗಳಿಂದ ತಮಗೆ ಬೇಕಾದುದನ್ನು ಆಮದು ಮಾಡಿಕೊಂಡು ಬೀಗುತ್ತಾರೆ. ಅಂಥದ್ದರಲ್ಲಿ ಆ ಕಾಲದಲ್ಲೇ ಬ್ರಿಟಿಷರು ನಮ್ಮ ವಸ್ತುವೊಂದನ್ನು ವಿಶ್ವ ಮಹಾಯುದ್ಧದಲ್ಲಿ ಶತ್ರು ವಿರುದ್ಧ ಹೋರಾಡಲು ಬಳಸಿಕೊಂಡ ವಿಷಯ ಗೊತ್ತೇ? ಅದು ಮೈಸೂರು ರೇಷ್ಮೆ. ಯುದ್ಧರಂಗದಲ್ಲಿ ಮೈಸೂರು ರೇಷ್ಮೆಗೇನು ಕೆಲಸ ಎಂಬ ಪ್ರಶ್ನೆ ಮೂಡುವುದು
ಸಹಜ. ನಮ್ಮ ಮೈಸೂರು ರೇಷ್ಮೆಯನ್ನವರು ಬಳಸಿಕೊಂಡಿದ್ದು ಪ್ಯಾರಾಚೂಟಿನಲ್ಲಿ! ಇದರ ಶ್ರೇಯ ಸಲ್ಲಬೇಕಾಗಿದ್ದು ರೇಷ್ಮೆ 
ಉದ್ಯಮವನ್ನು ಪುನಶ್ಚೇತನಗಳಿಸಿದ ಸರ್‌ ಎಂ.ವಿ. ವಿಶ್ವೇಶ್ವರಯ್ಯನವರಿಗೆ.

ಮೈಸೂರು ವಿವಿ, ಮಗಳು: ಶುರುವಿನಲ್ಲಿ ಮೈಸೂರು ವಿಶ್ವವಿದ್ಯಾಲಯ ಮದ್ರಾಸ್‌ ವಿಶ್ವವಿದ್ಯಾಲಯದ ಅಧೀನದಲ್ಲಿತ್ತು. ಆ ಸಂದರ್ಭದಲ್ಲಿ ಅದನ್ನು ಹೇಗಾದರೂ ತಪ್ಪಿಸಿ, ಸ್ವಾಯತ್ತೆಯನ್ನು ದೊರಕಿಸಬೇಕೆಂಬುದು ಆಗಿನ ಮೈಸೂರು ದಿವಾನರಾಗಿದ್ದ ಸರ್‌ ಎಂ.ವಿ.ವಿಶ್ವೇಶ್ವರಯ್ಯನವರ ಅಪೇಕ್ಷೆಯಾಗಿತ್ತು. ಆ ಕುರಿತು ಸರ್‌ ಎಂ.ವಿ. ಮತ್ತು ಮದ್ರಾಸ್‌ ವಿವಿ ಪ್ರಾಂಶುಪಾಲರ ಮಧ್ಯೆ ನಡೆದ ಪತ್ರ ವ್ಯವಹಾರವನ್ನು ಎಸ್‌.ಆರ್‌. ವಿಜಯಶಂಕರ್‌ ಗೋಷ್ಠಿಯಲ್ಲಿ ಹಂಚಿಕೊಂಡು ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರ

ಹರ್ಷವರ್ಧನ್‌ ಸುಳ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next