ಮಾದನ ಹಿಪ್ಪರಗಿ: ರಾಜಕೀಯ ಕಿತ್ತಾಟದಿಂದಲೇ ಆಳಂದ ತಾಲೂಕು ಹಿಂದುಳಿಯಲು ಕಾರಣವಾಗಿದೆ ಎಂದು ಹೈದ್ರಾಬಾದ ಕರ್ನಾಟಕ ಪ್ರದೇಶ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ದಯಾನಂದ ಪಾಟೀಲ ಹೇಳಿದರು.
ಕಳೆದ ಒಂಭತ್ತು ದಿನಗಳಿಂದ ಗ್ರಾಮದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಗ್ರಾಪಂ ಪದಾಧಿಕಾರಿಗಳ ಬೇಟಿ ಮಾಡಿ ಧರಣಿ ಸತ್ಯಾಹಕ್ಕೆ ತಮ್ಮ ಬೆಂಬಲ ಸೂಚಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿಯೇ ಹೆಚ್ಚು ಜನಸಂಖ್ಯೆಯುಳ್ಳ ಗ್ರಾಮ ಮತ್ತು ಹೋಬಳಿ ಮಾದನ ಹಿಪ್ಪರಗಿ. ಇದರ ಅಭಿವೃದ್ಧಿಗೆ ರಾಜಕೀಯ ಕಿತ್ತಾಟವೇ ಮುಳ್ಳಾಗಿದೆ. ಅಲ್ಲದೆ ತಾಲೂಕಿನ ಹಾಲಿ ಮತ್ತು ಮಾಜಿ ಶಾಸಕರ ರಾಜಕೀಯ ಕಿತ್ತಾಟದಿಂದ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನಾವು ಸ್ವಹಿತಕ್ಕಾಗಿ ಧರಣಿ ಸತ್ಯಾಗ್ರಹ ನಡೆಸುತ್ತಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ರಸ್ತೆ ಅಗಲೀಕರಣಕ್ಕಾಗಿ ಧರಣಿ ಕುಳಿತಿದ್ದೇವೆ. ಶಾಸಕರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ರಸ್ತೆ ಅಗಲೀಕರಣಕ್ಕೆ ಅಡ್ಡಿಯಾದ ಸಮಸ್ಯೆ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದರು.
ರೈತ ಸಂಘದ ಮುಖಂಡರಾದ ಸಿದ್ದರಾಮಪ್ಪ ಪಾಟೀಲ, ಮಹಾಂತಯ್ಯ ಸ್ವಾಮಿ, ದಿಲಿಪಕುಮಾರ, ಪುಟ್ಟರಾಜ, ಗ್ರಾಪಂ ಉಪಾಧ್ಯಕ್ಷ ಶಿವಲಿಂಗಪ್ಪ ಜಮಾದಾರ, ಮಹಾದೇವಯ್ಯ ಸ್ವಾಮಿ, ಗಣೇಶ ಓನಮಶೆಟ್ಟಿ, ಸಿದ್ದರೂಢ ಸಿಂಗಶೆಟ್ಟಿ, ದೇವಿಂದ್ರ ಶವರೆ, ಅರ್ಜುನ ಇಂಗಳೆ, ಮಹಾಂತೇಶ ಶಿರೂರ, ಮಲ್ಲು ಭಕರೆ ಮುಂತಾದವರಿದ್ದರು.