ಕಟಪಾಡಿ: ಮಾರ್ಜಾಲ ಕಿಶೋರ ಮತ್ತು ಮರ್ಕಟ ಕಿಶೋರ ನ್ಯಾಯದಂತೆ ದೇವರು ಮತ್ತು ಭಕ್ತರ ಬಾಂಧವ್ಯ ಇರಬೇಕು. ದೇವಾಲಯಗಳ ಜೀರ್ಣೋದ್ಧಾರದಿಂದ ಗ್ರಾಮದ ಉದ್ಧಾರ ಸಾಧ್ಯ ಎಂದು ಉಡುಪಿ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಹೇಳಿದರು.
ಗುರುವಾರ ಉದ್ಯಾವರ ಕೇದಾರ್ ಶ್ರೀ ಬ್ರಹೆ¾àಶ್ವರ ಮಹಾಲಿಂಗೇಶ್ವರ ಮತ್ತು ಶ್ರೀ ವಿಷ್ಣುಮೂರ್ತಿ ದೇವರ ನೂತನ ಗರ್ಭಗುಡಿಯ ನಿಧಿಕುಂಭ ಷಢಾಧಾರ ಪ್ರತಿಷ್ಠೆ ಗರ್ಭಾನ್ಯಾಸದ ಸಂದರ್ಭ ನಡೆದ ಧಾರ್ಮಿಕ ಸಭೆಯನ್ನುದ್ದೇಶಿಸಿ ಅವರು ಆಶೀರ್ವಚನ ನೀಡಿದರು.
ಜಾನಪದ ವಿದ್ವಾಂಸ ಕೆ.ಎಲ್. ಕುಂಡಂತಾಯ ಮಾತನಾಡಿ, ಹರಿಹರರನ್ನು ಪೂಜಿಸುವ ಪುಣ್ಯ ಕ್ಷೇತ್ರವಾದ ಕೇದಾರ್ ಎಂಬ ಸ್ಥಳನಾಮವೇ ಪುರಾತನವಾಗಿದ್ದು ಭೌಗೋಳಿಕ ಸ್ವರೂಪದ ಜತೆಗೆ ಈ ಕ್ಷೇತ್ರದಲ್ಲಿ ಇತಿಹಾಸ, ಜಾನಪದ, ಪುರಾಣ ಮೂರರ ಸಮಾಗಮ ಹೊಂದಿರುವ ಅಪೂರ್ವ ಪುಣ್ಯಕ್ಷೇತ್ರ ಎಂದರು. ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉದ್ಯಾವರ ಗ್ರಾ.ಪಂ. ಅಧ್ಯಕ್ಷೆ ಸುಗಂಧಿಶೇಖರ್ ಕೋಟ್ಯಾನ್, ತಾ.ಪಂ.ಸದಸ್ಯೆ ರಜನಿ ಆರ್. ಅಂಚನ್, ಉದ್ಯಮಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಕಾರ್ಕಳ, ದ.ಕ.ಜಿಲ್ಲಾ ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಎ. ಸುವರ್ಣ, ಹಾಲಿಮಾ ಸಾಬುj ಅಡಿಟೋರಿಯಂ ಟ್ರಸ್ಟ್ ಆಡಳಿತ ನಿರ್ದೇಶಕ ಹಾಜಿ ಅಬ್ದುಲ್ ಜಲೀಲ್ ಸಾಹೇಬ್, ವಿ-ಫೋರ್ ಡೆವಲಪರ್ನ ಸಖಾರಾಮ ಶೆಟ್ಟಿ ದೆಂದೂರುಕಟ್ಟೆ, ಸಾಯಿರಾದಾ ಡೆವಲಪರ್ ಮನೋಹರ್ ಶೆಟ್ಟಿ, ಬಡಗುಬೆಟ್ಟು ಕೋ ಆಪ್. ಸೊಸೈಟಿ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಆಸ್ಕರ್ ಫೆರ್ನಾಂಡೀಸ್ ಆಪ್ತ ಸಹಾಯಕ ಉದ್ಯಾವರ ನಾಗೇಶ್ ಕುಮಾರ್ ಹಾಗೂ ಪ್ರಮುಖರಾದ ಗಣಪತಿ ಆಚಾರ್ಯ, ಯು. ನಾಗೇಶ್ ಕಾಮತ್, ಪ್ರಕಾಶ್ ಟಿ. ಕೋಟ್ಯಾನ್, ಉಲ್ಲಾಸ್ ಆರ್. ಶೆಟ್ಟಿ, ಕೆ.ಎಸ್. ಕೃಷ್ಣಮೂರ್ತಿ ತಂತ್ರಿ, ಸುಧೀಂದ್ರ ಉಪಾಧ್ಯಾಯ, ತ್ರಿವಿಕ್ರಮ ಭಟ್, ಯತಿರಾಜ್ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಪುರಂದರ ಪೂಜಾರಿ, ಸುದೇಶ್ ಕುಮಾರ್ ವೇದಿಕೆಯಲ್ಲಿದ್ದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಶೇಖರ್ ಕೆ. ಕೋಟ್ಯಾನ್ ಸ್ವಾಗತಿಸಿದರು. ಗೌರವಾಧ್ಯಕ್ಷ ವಾದಿರಾಜ ತಂತ್ರಿ ಪ್ರಸ್ತಾವನೆಗೈದರು. ಜತೆ ಕಾರ್ಯದರ್ಶಿ ಸುರೇಶ್ ಸಿ. ಸಾಲ್ಯಾನ್ ವಂದಿಸಿದರು. ದಾಮೋದರ ಶರ್ಮಾ ಬಾಕೂìರು ನಿರೂಪಿಸಿದರು.