Advertisement

ಸರ್ಕಾರ ವಕೀಲರ ನೆರವಿಗೆ ನಿಲ್ಲಬೇಕು

06:51 AM Jun 23, 2020 | Lakshmi GovindaRaj |

ಮಧುಗಿರಿ: ಕೋವಿಡ್‌ 19 ಹಿನ್ನೆಲೆಯಲ್ಲಿ ನ್ಯಾಯಾಲಯದ ಕಲಾಪಗಳು ಬಂದ್‌ ಆಗಿದ್ದು, ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ವಕೀಲರ ನೆರವಿಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿ ತಾಲೂಕು ವಕೀಲರ ಸಂಘದಿಂದ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

Advertisement

ಪಟ್ಟಣದ ನ್ಯಾಯಾಲಯ ಸಂಕೀರ್ಣ ದಲ್ಲಿ ಮೌನ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿ ಸಂಘದ ಅಧ್ಯಕ್ಷ ಕೃಷ್ಣಾರೆಡ್ಡಿ ಮಾತನಾಡಿ, ಇಡೀ ರಾಜ್ಯಾದ್ಯಂತ 1.35 ಲಕ್ಷ  ವಕೀಲರಿದ್ದು, ವೃತ್ತಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಈಗ ಸರ್ಕಾರ ಹಾಗೂ ಉಚ್ಚನ್ಯಾಯಾಲಯದ ಆದೇಶ ದಂತೆ ನ್ಯಾಯಾಲಯದ ಕಲಾಪಗಳು ಸ್ಥಗಿತ ಗೊಂಡ ಕಾರಣ ಅಪಾರ ಸಂಕಷ್ಟದಲ್ಲಿ ಬದುಕಬೇಕಿದೆ ಎಂದರು.

ಸರ್ಕಾರಕ್ಕೆ ರಾಜ್ಯ ವಕೀಲರ ಪರಿಷತ್‌ ನಿಂದ ಮನವಿ ಸಲ್ಲಿಸಿದ್ದು, 5 ಕೋಟಿ ಪ್ಯಾಕೇಜ್‌ ಘೋಷಿಸಿದ್ದು, ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ 45 ಕೋಟಿ ಪರಿಹಾರದ ಪ್ಯಾಕೇಜ್‌ ನೀಡಬೇಕು. ಮಧುಗಿರಿ ಉಪವಿಭಾಗದಲ್ಲಿ ಶೇ.85 ರಷ್ಟು  ವಕೀಲರಿಗೆ ಸ್ವಂತ ಮನೆಯಿಲ್ಲ. ಜೀವನ, ಮಕ್ಕಳ ವಿದ್ಯಾಭ್ಯಾಸ ಮನೆ ಬಾಡಿಗೆ ಇತ್ಯಾದಿ ಸಮಸ್ಯೆಗಳಿಂದ ಬಸವಳಿದಿದ್ದು, ಕೋವಿಡ್‌ 19 ಭೀತಿಯಲ್ಲಿ ಮುಂಜಾಗ್ರತೆ ವಹಿಸದ ಕಾರಣ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ ಎಂದು ತಿಳಿಸಿದರು.  ಸರ್ಕಾರ ವಕೀಲರಿಗೆ ನೀಡಿರುವ ಈ 5 ಕೋಟಿ ಪ್ಯಾಕೇಜ್‌ ಸಾಕಾಗುವುದಿಲ್ಲ.

ತೆಲಂಗಾಣದಲ್ಲಿ 25 ಕೋಟಿ ಘೋಷಿಸಿದ್ದು, ರಾಜ್ಯ ಸರ್ಕಾರವೂ ಸಹ ಹೆಚ್ಚಿನ ಸಂಖ್ಯೆಯಲ್ಲಿರುವ ರಾಜ್ಯದ ವಕೀಲರಿಗೆ 45 ಕೋಟಿ ಹೆಚ್ಚುವರಿ ಪರಿಹಾರ ಧನವನ್ನು  ಘೋಷಿಸುವಂತೆ ಮನವಿ ಮಾಡಿದರು. ಸಂಘದ ಉಪಾಧ್ಯಕ್ಷ ಮಹೇಶ್‌, ಕಾರ್ಯದರ್ಶಿ ದಯಾನಂದಸಾಗರ್‌, ಖಜಾಂಚಿ ರಂಗನಾಥ್‌, ವಕೀಲರಾದ ಕೇಶವರೆಡ್ಡಿ, ದೇವರಾಜು, ಆನಂದ್‌, ಪಂಚಾಕ್ಷರಯ್ಯ, ಪುಷ್ಪಲತಾ, ದೀಪ, ಪುಟ್ಟಮ್ಮ,  ಪಾಂಡುರಂಗಯ್ಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.