Advertisement
ಶೈಕ್ಷಣಿಕವಾಗಿ ಮಕ್ಕಳ ಭವಿಷ್ಯದ ಬಗ್ಗೆ ಹೆತ್ತವರು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ಇದು ಅನಿವಾರ್ಯ. ಜೀವಕ್ಕಿಂತ ಮಿಗಿಲಾದ ಆದ್ಯತೆ ಮತ್ತೂಂದು ಇಲ್ಲ. ನಮ್ಮ ಪ್ರಾಥಮಿಕ- ಪ್ರೌಢ ಶಿಕ್ಷಣ ಸಚಿವರು ಸಮರ್ಥರು. ಅವರು ಸೂಕ್ತ, ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳುವ ಭರವಸೆ ನನಗಿದೆ. ಹೆತ್ತವರು ಆತಂಕಕ್ಕೆ ಒಳಗಾಗುವುದು ಬೇಡ. ನಿಮ್ಮ ಮಕ್ಕಳ ಶಿಕ್ಷಣ ಮತ್ತು ಅವರ ಸುರಕ್ಷೆ ಈ ನಾಗರಿಕ ಜಗತ್ತಿನ ಹೊಣೆಯಾಗಿದೆ.
Related Articles
ಆನ್‌ಲೈನ್ ಮೂಲಕ ಹೇಳಿಕೊಡುತ್ತೇನೆ ಎನ್ನುವುದು ಸರಿಯಲ್ಲ. ಹಲವೆಡೆ ಪಟ್ಟಣ ಬಿಟ್ಟು ಎರಡು ಕಿ.ಮೀ. ಹೊರಹೋದರೆ ನೆಟ್‌ವರ್ಕ್ ಸಿಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆನ್‌ಲೈನ್ ಶಿಕ್ಷಣ ಸರಿಯಲ್ಲ. ನಗರ ಪ್ರದೇಶದ ಕೆಲವರಿಗೆ ಇದರಿಂದ ಅನುಕೂಲ ನಿಜ, ಆದರೆ ಗ್ರಾಮೀಣ ಮಕ್ಕಳ ಪಾಡೇನು? ಅಮೆರಿಕದಲ್ಲೇ ಸೆಪ್ಟೆಂಬರ್‌ನಿಂದ ಶಾಲೆ ಆರಂಭ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಸರಕಾರ ಯೋಚನೆ ಮಾಡುವಾಗ ಕಟ್ಟಕಡೆಯ ವ್ಯಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮಾಡಬೇಕು. ತಡವಾಗಿ ಶಾಲೆ ಆರಂಭಿಸಿದರೆ ಮುಂದಿನ ಬೇಸಗೆ ರಜೆ ಅವ ಧಿ ಕಡಿಮೆ ಮಾಡಬಹುದು. ಪಾಠ ಕಡಿಮೆ ಮಾಡಬಹುದು.
Advertisement
ಸಮಾನ ಸಾಮರ್ಥ್ಯ ಒದಗಿಸುವ ಶಿಕ್ಷಣಎಲ್ಲ ಮಕ್ಕಳ ಜ್ಞಾನದ ಮಟ್ಟ ಸಮಾನ ವಾಗಿರು ವಂತೆ ನೋಡಿಕೊಳ್ಳಬೇಕು ಎಂಬುದು ನನ್ನ ಆಲೋಚನೆ.ಸಮಾನ ಶಿಕ್ಷಣ ದೊರೆಯುವಂತಾಗಬೇಕು. ಇಡೀ ದೇಶದಲ್ಲಿ ಎಲ್ಲ ರಿಗೂ ಒಂದೇ ರೀತಿ ಸಿಲೆಬಸ್ ಇರ ಬೇಕು ಎಂಬುದು ನನ್ನ ಆಲೋಚನೆ. ಶಾಲೆಗಳ ಅಭಿವೃದ್ಧಿಗೆ ಇದು ಸೂಕ್ತ ಸಮಯ. ಒಂದು ಗ್ರಾ.ಪಂ.ನಲ್ಲಿ ಐದಾರು ಶಾಲೆಗಳಿವೆ. ಇಂಥ ಕಡೆ ವಾಹನ ವ್ಯವಸ್ಥೆ ಮಾಡಿ ಒಂದೇ ಕಡೆ ಶಿಕ್ಷಣ ಕೊಡಬಹುದು. ಸರಕಾರ ಬಿಸಿಯೂಟ, ಹಾಲು, ಪುಸ್ತಕ, ಬಟ್ಟೆ ಕೊಡುತ್ತಿದೆ. ಅದರ ಜತೆಗೆ ವಾಹನ ವ್ಯವಸ್ಥೆ ಮಾಡಬಹುದು. - ಕಿಮ್ಮನೆ ರತ್ನಾಕರ್, ಮಾಜಿ ಶಿಕ್ಷಣ ಸಚಿವರು