Advertisement

ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಬೇಕು

05:09 PM Oct 04, 2022 | Team Udayavani |

ಅರಸೀಕೆರೆ: ಭಾರತದ ಬೆನ್ನೆಲುಬು ರೈತ ಸಮುದಾಯವಾಗಿರುವ ಕಾರಣ ಕೃಷಿ ಕ್ಷೇತ್ರ ಸೇರಿದಂತೆ ಅದಕ್ಕೆ ಪೂರಕವಾದ ಹೈನುಗಾರಿಕೆ ಹಾಗೂ ಸಣ್ಣಗುಡಿ ಕೈಗಾರಿಕೆಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುವ ಮೂಲಕ ಗ್ರಾಮ ಸ್ವರಾಜ್ಯ ಸ್ಥಾಪನೆಗೆ ಮುಂದಾಗಬೇಕೆಂಬು ವುದು ಮಹಾತ್ಮ ಗಾಂಧೀಜಿಯವರ ಕನಸಾಗಿತ್ತು ಎಂದು ರಾಜ್ಯ ರೈತ ಸಂಘದ ಸಂಚಾಲಕ ಕನಕೆಂಚೇನಹಳ್ಳಿ ಪ್ರಸನ್ನಕುಮಾರ್‌ ತಿಳಿಸಿದರು.

Advertisement

ನಗರದ ಪಿಪಿ ವೃತ್ತದಲ್ಲಿ ಪ್ರೊ,ನಂಜುಂಡಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಮಹಾತ್ಮ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತ ನಾಡಿದರು. ಮಹಾತ್ಮ ಗಾಂಧೀಜಿಯವರು ಸತ್ಯ ಮತ್ತು ಅಹಿಂಸೆ ಹಾಗೂ ತ್ಯಾಗದ ಸಂದೇಶದ ಮೂಲಕ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ, ದೇಶಕ್ಕೆ ಸ್ವಾತಂತ್ರ್ಯ ತರುವಲ್ಲಿ ಯಶಸ್ವಿಯಾದರು. ಸ್ವಾತಂತ್ರ ಭಾರತದ ಅಭಿವೃದ್ಧಿ ನಿಟ್ಟಿನಲ್ಲಿ ದೇಶದ ಬೆನ್ನೆಲುಬು ರೈತ ಸಮುದಾಯ ವನ್ನು ಅಭಿವೃದ್ಧಿ ಪಡಿಸುವ ನಿಟ್ಟಿ ನಲ್ಲಿ ಕೃಷಿಗೆ ಪೂರಕವಾದ ಹೈನುಗಾರಿಕೆ ಹಾಗೂ ಗ್ರಾಮೀಣಾ ಗುಡಿ ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು. ಆಗ ಮಾತ್ರ ಗ್ರಾಮ ಸ್ವರಾಜ್ಯ ದೇಶದಲ್ಲಿ ಸ್ಥಾಪನೆಯಾಗಲು ಸಾಧ್ಯವಾಗುತ್ತದೆ ಎಂಬ ಕನಸು ಕಂಡಿದ್ದರು.

ಆದರ್ಶ ಪಾಲಿಸಿ: ಸ್ವಾತಂತ್ರ ಬಂದು 75 ವರ್ಷಗಳು ಕಳೆದರೂ ನಮ್ಮ ನ್ನಾಳುತ್ತಿರುವ ಪ್ರಬುದ್ದ ನಾಯಕರು ಮಹಾತ್ಮ ಗಾಂಧೀಜಿಯವರು ಕಂಡ ಕನಸು ನನಸು ಮಾಡುವಲ್ಲಿ ಸಂಪೂರ್ಣ ವಿಫ‌ಲರಾಗಿರುವ ಕಾರಣ ನಿರುದ್ಯೋಗ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳು ಸಮಾ ಜವನ್ನ ನಿರಂತರವಾಗಿ ಕಾಡುತ್ತಿದೆ. ಆದ್ದರಿಂದ ಇಂದಿನ ಯುವ ಜನಾಂಗ ಗಾಂಧೀಜಿಯವರ ಜೀವನ ಆದರ್ಶಗಳನ್ನು ಮೈಗೂಡಿಸಿ ಕೊಂಡು ಹೋರಾಟ ಮಾಡುವ ಮೂಲಕ ಪ್ರತಿಯೊಬ್ಬ ಪ್ರಜೆಯಲ್ಲಿ ದೇಶಭಕ್ತಿಯನ್ನ ಜಾಗೃತಗೊಳಿಸುವ ಕಾರ್ಯವನ್ನು ನಿರಂತರವಾಗಿ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ರೈತಸಂಘದ ಗೌರವ ಅಧ್ಯಕ್ಷ ಜವ ನಹಳ್ಳಿ ನಿಂಗಪ್ಪ, ಸೋಮಶೇಖರ್‌ ಮಾತನಾಡಿದರು. ಜಿಲ್ಲಾ ಕಾರ್ಯ ದರ್ಶಿ ಅಯೂಬ್‌ ಪಾಷ ಹಾಗೂ ಸಂಘದ ಪದಾಧಿಕಾರಿಗಳಾದ ಲಕ್ಷ್ಮೀಶ್‌,ರಂಗಸ್ವಾಮಿ ಏಜಾಜ್‌ ಅಹಮ್ಮದ್‌ ದಸ್ತಗೀರ್‌, ಕಾಂತರಾಜ್‌ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next