Advertisement

ರಾಜ್ಯಸಭೆ ಕಲಾಪದಲ್ಲೂ ಸರಕಾರಕ್ಕೆ ನೋಟಿನೇಟು

08:25 AM Aug 09, 2017 | Harsha Rao |

ಹೊಸದಿಲ್ಲಿ: ಅಪನಗದೀಕರಣ ಬಳಿಕ ರಿಸರ್ವ್‌ ಬ್ಯಾಂಕ್‌ ಹೊರತಂದ 500 ರೂ., 2000ರೂ ನೋಟುಗಳನ್ನು ಎರಡು ರೀತಿಯಲ್ಲಿ ಮುದ್ರಿಸಲಾಗಿದೆ. ಈ ಮೂಲಕ ಕೇಂದ್ರ ಸರಕಾರ ಅತಿ ದೊಡ್ಡ ಹಗರಣ ನಡೆಸಿದೆ ಎಂದು ಪ್ರತಿಪಕ್ಷಗಳು ರಾಜ್ಯಸಭೆಯಲ್ಲಿ ಮಂಗಳವಾರ ಕೋಲಾಹಲ ಎಬ್ಬಿಸಿವೆ. 

Advertisement

ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‌ ಸಂಸದ ಕಪಿಲ್‌ ಸಿಬಲ್‌ ಈ ವಿಚಾರ ಪ್ರಸ್ತಾವಿಸಿದ್ದು, “500 ಮತ್ತು 2 ಸಾವಿರ ರೂ. ನೋಟುಗಳಲ್ಲಿ ಗಾತ್ರ ಮತ್ತು ವಿನ್ಯಾಸಗಳು ಭಿನ್ನ ಭಿನ್ನವಾಗಿವೆ. ಇದು ಶತಮಾನದಲ್ಲೇ ಅತಿ ದೊಡ್ಡ ಹಗರಣ. ಹೀಗೆ ಆರ್‌ಬಿಐ ಎರಡು ರೀತಿ ಮುದ್ರಿಸಲು ಹೇಗೆ ಸಾಧ್ಯ’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಆದರೆ ಇದನ್ನು ತಳ್ಳಿ ಹಾಕಿದ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟಿÉ, “ಒಂದು ತುಂಡು ಪೇಪರ್‌ ಹಿಡಿದು, ಇದು ಸರಕಾರದ ಆದೇಶ ಎಂದು ಹೇಳಲು ಸಾಧ್ಯವಿಲ್ಲ. ಇನ್ನು, ಸದನದ ಶೂನ್ಯವೇಳೆಯಲ್ಲಿ ನೋಟಿಸ್‌ ನೀಡದೇ, ಕಾಂಗ್ರೆಸ್‌ ನಿಷ್ಪ್ರಯೋಜಕ ಪ್ರಶ್ನೆಗಳನ್ನು ಎತ್ತಿ ಸಮಯ ಹಾಳುಮಾಡುತ್ತಿದೆ’ ಎಂದು ಹರಿಹಾಯ್ದರು.

ಆದರೆ ಕಾಂಗ್ರೆಸ್‌ ಆರೋಪಕ್ಕೆ ದನಿಗೂಡಿಸಿರುವ ತೃಣಮೂಲ ಕಾಂಗ್ರೆಸ್‌ ಸಂಸದ ಡೆರೆಕ್‌ ಓಬ್ರಿಯಾನ್‌, ಎರಡು ರೀತಿಯ 500 ರೂ. ನೋಟುಗಳನ್ನು ಪ್ರದರ್ಶಿಸಿ, ಎರಡು ವಿನ್ಯಾಸ, ಗಾತ್ರ ಹೊಂದಿದೆ ಎಂದು ಆರೋಪಿಸಿದರು. ಅಲ್ಲದೇ, ಜೇಟಿÉ ಬಳಿ ತೆರಳಿ, ಇದನ್ನು ಪರಿಶೀಲಿಸಿ ಎಂದು ನೋಟುಗಳನ್ನು ತೋರಿಸಿ, ವಿವರಿಸತೊಡಗಿದರು. 
ಇದೇ ವೇಳೆ ಸರಕಾರವನ್ನು ಟೀಕಿಸಿದ ಸಿಬಲ್‌ “ಅಪನಗದೀಕರಣ ಯಾಕೆ ನಡೆಸಲಾಗಿದೆ ಎಂಬುದು ನಮಗೀಗ ಗೊತ್ತಾಗಿದೆ. ಒಂದು ನೋಟು ಆಡಳಿತ ಪಕ್ಷಕ್ಕೆ, ಇನ್ನೊಂದು ವಿಪಕ್ಷಗಳಿಗೆಂದು ಮುದ್ರಿಸಲಾಗಿದೆ’ ಎಂದರು. ಜೆಡಿಯುವಿನ ಶರದ್‌ ಯಾದವ್‌ ಅವರೂ ದನಿಗೂಡಿಸಿ, “ಒಂದು ನೋಟು ದೊಡ್ಡದಿದೆ, ಇನ್ನೊಂದು ಸಣ್ಣದಿದೆ. ವಿಶ್ವದ ಎಲ್ಲೂ ಹೀಗೆ ನಡೆಯಲು ಸಾಧ್ಯವಿಲ್ಲ’ ಎಂದರು. 

ಆರೋಪಕ್ಕೆ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಮುಖಾ¤ರ್‌ ಅಬ್ಟಾಸ್‌ ನಖೀÌ ಅವರು, ನೋಟಿನ ಮೂಲದ ಬಗ್ಗೆ ಪ್ರಶ್ನೆ ಎತ್ತಿದರು. ಈ ವೇಳೆ ಗದ್ದಲ ತೀವ್ರಗೊಂಡ ಹಿನ್ನೆಲೆಯಲ್ಲಿ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. 

ಪ್ರಧಾನಿ ಸ್ಪಷ್ಟನೆ ನೀಡಲಿ: ಹೊಸ ನೋಟು ಎರಡು ರೀತಿಯಲ್ಲಿ ಮುದ್ರಿಸಿದ ಬಗ್ಗೆ ಪ್ರಧಾನಿ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ. ಅಲ್ಲದೇ ಸರಕಾರದ ಈ ನಡೆಯಿಂದ ಭಾರತೀಯ ಕರೆನ್ಸಿ ಬಗ್ಗೆ ನಂಬಿಕೆಯೇ ಹೋಗುವಂತಾಗಿದೆ ಎಂದಿದೆ. 

Advertisement

ವಿಶಿಷ್ಟ ವಿನ್ಯಾಸ ಹೊಂದಿವೆ: ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿರುವ ಹಣಕಾಸು ಸಚಿವಾಲಯ ಎರಡೂ ನೋಟುಗಳು ವಿಶಿಷ್ಟ ವಿನ್ಯಾಸ, ಭಿನ್ನ ಅಳತೆಗಳನ್ನು ಹೊಂದಿವೆ ಎಂದಿದೆ.  ಬಗ್ಗೆ ಪ್ರತಿಕ್ರಿಯಿಸಿದ ಹಣಕಾಸು ಇಲಾಖೆ ಸಹಾಯಕ ಸಚಿವ ಅರ್ಜುನ್‌ ರಾಂ ಮೇಘವಲ್‌, 500 ರೂ. ನೋಟು 66 ಎಂ.ಎಂx150 ಎಂ.ಎಂ. ಹೊಂದಿದ್ದರೆ, 2 ಸಾವಿರ ರೂ. ನೋಟು 66 ಎಂ.ಎಂx166 ಎಂ.ಎಂ. ಅಳತೆ ಹೊಂದಿದೆ ಎಂದು ರಾಜ್ಯಸಭೆಗೆ ಲಿಖೀತ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next