ಉಡುಪಿ: ಆಜಾನ್ ವಿಷಯವಾಗಿ ಎಲ್ಲವನ್ನು ಸರಕಾರ ಗಮನಿಸುತ್ತಿದೆ ಮತ್ತು ನ್ಯಾಯಾಲಯದ ಆದೇಶವನ್ನು ಪಾಲಿಸ ಲಿದೆ. ಎಲ್ಲವನ್ನು ಏಕಕಾಲದಲ್ಲಿ ಮಾಡಲು ಸಾಧ್ಯವಿಲ್ಲ. ಹಂತ ಹಂತವಾಗಿ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದು ಜಿಲ್ಲಾ ಉಸ್ತು ವಾರಿ ಸಚಿವ ಎಸ್. ಅಂಗಾರ ಹೇಳಿದರು.
ಸೋಮವಾರ ಉಡುಪಿಯಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಯಾರು ಏನೇ ಹೇಳಲಿ, ಬಿಜೆಪಿಯ ಮೂಲ ಉದ್ದೇಶದಲ್ಲಿ ಬದಲಾವಣೆ ಇಲ್ಲ. ಯಾವ ಉದ್ದೇಶದೊಂದಿಗೆ ಜನಸಂಘ ಆರಂಭವಾಗಿದೆಯೋ ಅದೇ ಉದ್ದೇಶದೊಂದಿಗೆ ಬಿಜೆಪಿ ಮುನ್ನಡೆ ಯುತ್ತಿದೆ. ಈ ದೇಶವನ್ನು ಪರಮ ವೈಭವ ಸ್ಥಿತಿಗೆ ಮತ್ತೂಮ್ಮೆ ಕೊಂಡೊಯ್ಯುವುದು ನಮ್ಮ ಉದ್ದೇಶ ಎಂದರು.
ಪ್ರಮೋದ್ ಮಧ್ವರಾಜರ ಬಿಜೆಪಿ ಸೇರ್ಪಡೆ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ದೇಶದ ಅಭಿವೃದ್ಧಿ ಪಕ್ಷದ ಸಿದ್ಧಾಂತ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿ ಮೆಚ್ಚಿ ಅನೇಕ ನಾಯಕರು ಬಿಜೆಪಿ ಸೇರುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿದ್ದರೆ ಭವಿಷ್ಯ ಇಲ್ಲ ಎಂಬ ಕಾರಣಕ್ಕೂ ಹಲವರು ಬರುತ್ತಿದ್ದಾರೆ. ಸ್ಥಳೀಯ ಕಾರ್ಯಕರ್ತರೊಂದಿಗೆ ಚರ್ಚಿಸಿ ಸೇರಿಸಿಕೊಳ್ಳಲಾಗುತ್ತದೆ ಎಂದರು.
ಮೀನುಗಾರಿಕೆಗೆ 2,472 ಕಿ.ಲೀ. ಸೀಮೆ ಎಣ್ಣೆ ಬಿಡುಗಡೆ
ಕೇಂದ್ರ ಸರಕಾರವು ರಾಜ್ಯ ಕರಾವಳಿಯ ಮೀನುಗಾರಿಕೆಗೆ ಅನುಕೂಲವಾಗುವಂತೆ 2,472 ಕಿ.ಲೀ. ಸೀಮೆಎಣ್ಣೆ ಬಿಡುಗಡೆ ಮಾಡಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವ ಎಸ್. ಅಂಗಾರ ಸೋಮವಾರ ಉಡುಪಿಯಲ್ಲಿ ತಿಳಿಸಿದ್ದಾರೆ.