Advertisement

ಚೀನದಲ್ಲಿ ಗರ್ಭಪಾತ ತಡೆಯಲು ಸರ್ಕಾರ ಸಜ್ಜು

08:59 PM Aug 17, 2022 | Team Udayavani |

ಬೀಜಿಂಗ್‌: ವಿಶ್ವದಲ್ಲೇ ಅತಿ ಕಡಿಮೆ ಜನನ ಪ್ರಮಾಣ ಹೊಂದಿರುವ ಚೀನ, ದೇಶದಲ್ಲಿ ಜನನ ಪ್ರಮಾಣ ಹೆಚ್ಚಿಸಲೆಂದು ಅನೇಕ ಪ್ರಯತ್ನಗಳನ್ನು ಮಾಡಲಾರಂಭಿಸಿದೆ. ಅದೇ ನಿಟ್ಟಿನಲ್ಲಿ ಗರ್ಭಪಾತವನ್ನು ತಡೆದು, ಫ‌ರ್ಟಿಲಿಟಿ (ಫ‌ಲವತ್ತತೆ) ಚಿಕಿತ್ಸೆಯನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ಮುಂದಾಗಿದೆ.

Advertisement

ಚೀನದಲ್ಲಿ 2015ರಿಂದ 2019ರವರೆಗೆ ಒಟ್ಟು 95 ಲಕ್ಷಕ್ಕೂ ಅಧಿಕ ಗರ್ಭಪಾತವಾಗಿದೆ. 2021ರಲ್ಲಿ 1.06 ಕೋಟಿ ಶಿಶುಗಳ ಜನನವಾಗಿದೆ. ಆದರೆ ಈ ವರ್ಷ ಅದು 1 ಕೋಟಿಗಿಂತ ಕೆಳಗಿಳಿಯಲಿದೆ.

ವಿಶ್ವಾದ್ಯಂತ ಶಿಶು ಜನನ ಪ್ರಮಾಣಕ್ಕೆ 2.1 ಒಇಸಿಡಿ ಸ್ಟಾಂಡರ್ಡ್‌ ಇದೆ. ಆದರೆ ಚೀನಾದಲ್ಲಿ 2021ರಲ್ಲಿ ಶಿಶು ಜನನ ಪ್ರಮಾಣ 1.1.6ರಷ್ಟಿತ್ತು. ಇದೇ ರೀತಿಯಾದರೆ ಮುಂದೆ ದೇಶದಲ್ಲಿ ಯುವ ಜನತೆ ಸಂಖ್ಯೆ ಗಣನೀಯವಾಗಿ ಕುಗ್ಗಿ, ವಯೋವೃದ್ಧರ ಸಂಖ್ಯೆ ಹೆಚ್ಚಿರಲಿದೆ. ಇದು ದೇಶಕ್ಕೆ ಅತಿದೊಡ್ಡ ತಲೆನೋವಾಗಿದೆ.

ಈ ಸಮಸ್ಯೆಯಿಂದ ಪಾರಾಗಲೆಂದು 2021ರಿಂದಲೇ ದಂಪತಿಗೆ ಮೂರು ಮಕ್ಕಳನ್ನು ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಜತೆಗೆ ವಿಶೇಷ ವೈದ್ಯಕೀಯ ಸೌಲಭ್ಯ, ವಿಮೆಗಳು, ತೆರಿಗೆ ರಿಯಾಯಿತಿಯನ್ನೂ ಕೊಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next