Advertisement
“ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ವಿಶ್ವೇಶ್ವರಯ್ಯ ಅವರ ಕಾಲದಿಂದಲೂ ಕರ್ನಾಟಕ ಕೈಗಾರಿಕೆಯಲ್ಲಿ ಮುಂದಿದೆ. 1913ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಆರ್ಟ್ ಮತ್ತು ಕ್ರಾಫ್ಟ್ ಸಂಸ್ಥೆ ಆರಂಭಿಸಿದ್ದರು. 1964ರಲ್ಲಿ ಆರ್ಟ್ ಮತ್ತು ಕ್ರಾಫ್ಟ್ ಸಂಸ್ಥೆ ರಾಜ್ಯ ಕರಕುಲಶ ಅಭಿವೃದ್ಧಿ ನಿಗಮವಾಗಿ ಮರುನಾಮಕರಣಗೊಂಡಿದೆ. ಕರಕುಶಲ ಕಲೆಯನ್ನು ಉಳಿಸಿ, ಬೆಳಸಲು ಬೇಕಾದ ಪ್ರೋತ್ಸಾಹ ಹಾಗೂ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ಸಿದ್ಧವಿದೆ,’ಎಂದರು.
Related Articles
Advertisement
“ನಿಗಮದಲ್ಲಿ ಖಾಲಿ ಇರುವ 164 ಹುದ್ದೆಭರ್ತಿಗೆ ಅನುಮತಿ ನೀಡುವುದು, ವಿದೇಶಗಳಲ್ಲಿ ಆಯೋಜಿಸುವ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ, ನಿಗಮದ ಉತ್ಪನ್ನ ಪ್ರಚಾರಕ್ಕೆ ಅನುಮತಿ ನೀಡುವುದು ಮತ್ತು ಸರ್ಕಾರಿ ಕಚೇರಿಯ ನಿರ್ಮಾಣದ ಸಂದರ್ಭದಲ್ಲಿ ಕೆತ್ತನೆ ಮತ್ತು ಮರಗೆಲಸದ ಸಾಮಗ್ರಿಗಳನ್ನು ನಿಗಮದಿಂದಲೇ ಪಡೆಯುವಂತೆ ಮಾಡಬೇಕು,’ ಎಂಬ ಮನವಿಯನ್ನು ಸಿಎಂಗೆ ಸಲ್ಲಿಸಿದರು.
ಪೀಣ್ಯ ಬಳಿ ಕ್ರಾಫ್ಟ್ ವಿಲೇಜ್ಬೆಂಗಳೂರು: ಕರಕುಶಲ ಕಲೆಯ ಅಭಿವೃದ್ಧಿಗಾಗಿ ಪೀಣ್ಯಾ ಸಮೀಪದ ದೊಡ್ಡ ಬಿದರಕಲ್ಲಿನ 20 ಎಕರೆ ಪ್ರದೇಶದಲ್ಲಿ “ಕ್ರಾಫ್ಟ್ ವಿಲೇಜ್’ ನಿರ್ಮಿಸಲಾಗುತ್ತಿದೆ ಎಂದು ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಗಡಿ ಕಮಲಮ್ಮ ತಿಳಿಸಿದ್ದಾರೆ. ನಿಗಮದ ಸುವರ್ಣ ಮಹೋತ್ಸವ ಶಂಕುಸ್ಥಾಪನಾ ಕಾರ್ಯಕ್ರಮದ ನಂತರ ಸುದ್ದಿಗಾರಧಿರೊಂದಿಗೆ ಮಾತನಾಡಿದ ಅವರು, “ದೊಡ್ಡಬಿದಧಿರಕಲ್ಲಿನಲ್ಲಿ ಲಭ್ಯವಾಗಿರುವ ಜಾಗದಲ್ಲಿ ಈಗಾಗಲೇ ಶ್ರೀಗಂಧದ ಸಸಿಗಳನ್ನು ನೆಟ್ಟಿದ್ದೇವೆ. ಕರಕುಶಲ ಕಲೆ ಮತ್ತು ಸಂಸ್ಕೃತಿಯ ಪುನಶ್ಚೇತನ ಮಾಡುವ ಕಾಯಕ ಇದಾಗಿದೆ,’ ಎಂದು ತಿಳಿಸಿದರು. “ಕರಕುಶಲ ಕಲೆಯಲ್ಲಿ ಸಾಧನೆ ಮಾಡಿದಧಿವರಿಗೆ ಶಿಲ್ಪಕಲಾ ರಾಷ್ಟ್ರಪ್ರಶಸ್ತಿ ನೀಡುತ್ತಿದ್ದೇವೆ. ಶಿಲ್ಪಗುರು ಪ್ರಶಸ್ತಿಯನ್ನು ಈ ವರ್ಷದಿಂದ ಆರಂಭಿಸಲಿದ್ದೇವೆ. ಬೆಂಗಳೂರಿನಲ್ಲಿ 3, ಮೈಸೂರಿನಲ್ಲಿ 2 ಹಾಗೂ ಮಡಿಕೇರಿ, ಹುಬ್ಬಳ್ಳಿ, ಮಂಗಳೂರು, ಚೆನ್ನೈ ಹಾಗೂ ಸಿಖಂದರಬಾದ್‌ನಲ್ಲಿ ತಲಾ ಒಂದೊಂದು ಕಾವೇರಿ ಕರಕುಶಲ ವ್ಯಾಪಾರ ಮಳಿಗೆ ಇದೆ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಕರಕುಶಲ ಕಲಾವಿದರಿಗೆ 2 ವರ್ಷದ ಉಚಿತ ತರಬೇತಿ ನೀಡಲು ಶ್ರೀಗಂಧ ಕಲಾ ಸಂಕೀರ್ಣ ಗುರುಕುಲ ಆರಂಭಿಸಿದ್ದೇವೆ,’ ಎಂದು ಮಾಹಿತಿ ನೀಡಿದರು.