Advertisement

ತೈಲಾಂಶ ತೆಗೆವ ಕಾರ್ಯ ಶೇ.90 ಮುಗಿದಿದೆ ಎಂದ ಕೇಂದ್ರ ಸರ್ಕಾರ

03:45 AM Feb 05, 2017 | Team Udayavani |

ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈ ಕರಾವಳಿಯಲ್ಲಿ ಉಂಟಾಗಿರುವ ತೈಲ ಸೋರಿಕೆಯನ್ನು ಶೇ.90ರಷ್ಟು ಶುಚಿಗೊಳಿಸಲಾಗಿದೆ. 65 ಟನ್‌ಗಳಷ್ಟು ತೈಲಾಂಶ ಹೊರ ತೆಗೆಯಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಶುಚಿತ್ವ ಕಾರ್ಯ ಮುಕ್ತಾಯವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 

Advertisement

ಈ ನಡುವೆ ಘಟನೆಗೆ ಸಂಬಂಧಿಸಿದಂತೆ ನೌಕಾಯಾನ ಖಾತೆಯ ಮಹಾನಿರ್ದೇಶಕರಿಂದ ತನಿಖೆ ನಡೆಸಲು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಆದೇಶಿಸಿದ್ದಾರೆ. 

ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ವತಿಯಿಂದ ಹೊರತೆಗೆದ ತೈಲಾಂಶ ಮತ್ತು ಇತರ ಕೊಳಚೆ ವಸ್ತುಗಳನ್ನು ವಿಲೇವಾರಿ ಮಾಡಲು ತಾಂತ್ರಿಕ ನೆರವು ನೀಡುತ್ತಿದೆ. ಸ್ಥಳದಲ್ಲಿನ ಪರಿಸ್ಥಿತಿಯ ಬಗ್ಗೆ ನಿಗಾ ಇರಿಸಲಾಗಿದೆ. ಪರಿಹಾರ ನೀಡುವ ಬಗ್ಗೆ ಹಡಗುಗಳ ಮಾಲೀಕರು ಮತ್ತು ಬಂದರು ಮಂಡಳಿ ಜತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಹಡಗು ಯಾನ ಖಾತೆ ಅಧಿಕಾರಿಗಳು ನವದೆಹಲಿಯಲ್ಲಿ ತಿಳಿಸಿದ್ದಾರೆ. ಈ ನಡುವೆ ಹೊಸತಾಗಿ ತೈಲ ಸೋರಿಕೆಯಾಗಿಲ್ಲ ಎಂದು ಕಾಮರಾಜ ಬಂದರು ಮಂಡಳಿ ಶನಿವಾರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next