Advertisement

ಸರ್ಕಾರಕ್ಕೆ ಲಕ್ಷಾಂತರ ರೂ. ಉಳಿತಾಯ

05:30 PM Jun 17, 2021 | Girisha |

ವಿಜಯಪುರ: ರಾಜ್ಯದಲ್ಲಿ ಟ್ಯಾಂಕರ್‌ ಜಿಲ್ಲೆ ಎಂದೇ ಗುರುತಿಸಲ್ಪಡುವ ವಿಜಯಪುರ ಜಿಲ್ಲೆಯಲ್ಲಿ ಪ್ರಸಕ್ತ ಬೇಸಿಗೆಯಲ್ಲಿ ಟ್ಯಾಂಕರ್‌ ಬಳಸದೇ ನೀರಿನ ನಿರ್ವಹಣೆ ಮಾಡಲಾಗಿದೆ. ಯಾವುದೇ ಖಾಸಗಿ ಬೋರ್‌ ವೆಲ್‌ ಬಾಡಿಗೆ ಪಡೆಯದೇ ಕುಡಿಯುವ ನೀರಿನ ನಿರ್ವಹಣೆಯಲ್ಲಿ ಯಶಸ್ಸು ಸಾ ಧಿಸಿದ್ದೇವೆ.

Advertisement

ಇದರಿಂದ ಸರ್ಕಾರಕ್ಕೆ ಲಕ್ಷಾಂತರ ರೂ. ಉಳಿತಾಯವಾಗಿದೆ ಎಂದು ಜಿಪಂ ಸಿಇಒ ಗೋವಿಂದ ರೆಡ್ಡಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಳೆದ ವರ್ಷ ಉತ್ತಮ ಮಳೆ ಆಗಿದ್ದರಿಂದ ಅಂರ್ತಜಲ ಮಟ್ಟ ಏರಿಕೆಯಾಗಿದೆ. ಪ್ರಾದೇಶಿಕ ಆಯುಕ್ತರ ಅನುಮತಿ ಮೇರೆಗೆ ಕುಡಿಯುವ ನೀರಿನ ಕೆರೆಗಳಿಗೆ ಕಾಲ ಕಾಲಕ್ಕೆ ನೀರು ತುಂಬಿಸಿಕೊಂಡಿದ್ದು. ಗ್ರಾಪಂ ಮಟ್ಟದಲ್ಲಿ ಕುಡಿಯುವ ನೀರು ನಿರ್ವಹಣೆ ಮಾಡುವಲ್ಲಿ ಸಹಕಾರಿ ಆಗಿದ್ದು, ಎಲ್ಲಿಯೂ ಟ್ಯಾಂಕರ್‌ ಗೆ ಬೇಡಿಕೆ ಬರಲೇ ಇಲ್ಲ.

ಜನಪ್ರತಿನಿ ಧಿಗಳು, ಮೇಲಧಿ  ಕಾರಿಗಳ ಸಹಕಾರ, ಮಾರ್ಗದರ್ಶನ, ಗ್ರಾಮೀಣ ಕುಡಿಯುವ ನೀರು ಇಲಾಖೆಯ ಅಧಿಕಾರಿಗಳು, ಕೆಳ ಹಂತ ಸಿಬ್ಬಂದಿ ಸಕಾಲದಲ್ಲಿ ಸಮಸ್ಯೆಗಳಿಗೆ ಸ್ಪಂದಿಸಿ, ಸೇವಾ ಬದ್ಧತೆ ತೋರಿದ್ದೇ ಈ ಸಾಧನೆ ಸಾಧ್ಯವಾಗಿಸಿದೆ ಎಂದು ವಿವರಿಸಿದ್ದಾರೆ. ಈ ಹಿಂದಿನ ಬಹುತೇಕ ಎಲ್ಲ ವರ್ಷಗಳಲ್ಲೂ ಬೇಸಿಗೆ ಅವ ಧಿಯಲ್ಲಿ ಫೆಬ್ರುವರಿ ತಿಂಗಳಿಂದಲೇ ಟ್ಯಾಂಕರ್‌ ನೀರಿಗೆ ಬೇಡಿಕೆ ಬರುತ್ತಿತ್ತು. ಟ್ಯಾಂಕರ್‌ ನೀರು ಸರಬರಾಜು ಆಗುತ್ತಿದ್ದ ಗ್ರಾಮಗಳನ್ನು ಪಟ್ಟಿ ಮಾಡಿ, ವಿಶೇಷ ಕಾಳಜಿ ಮೂಲಕ ಸಮಸ್ಯೆಗೆ ಮೂಲ ಕಾರಣ ಪತ್ತೆ ಹಚ್ಚಲಾಯಿತು. ಅಲ್ಲದೇ ಪರಿಹಾರ ಅನುಷ್ಠಾನಕ್ಕಾಗಿ ಪೂರ್ವಸಿದ್ಧತೆ ಮಾಡಿಕೊಂಡ ಕಾರಣ ಈ ಬಾರಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಂಡು ಬರಲಿಲ್ಲ ಎಂದು ವಿವರಿಸಿದ್ದಾರೆ.

ಕುಡಿಯುವ ನೀರಿನ ಎಲ್ಲ ಕೆರೆಗಳಿಗೆ ಸಕಾಲದಲ್ಲಿ ನೀರು ತುಂಬಿಸಿಕೊಂಡು, ವಿಶೇಷ ಅಭಿವೃದ್ಧಿ ಯೋಜನೆ, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಕಾರ್ಯಕ್ರಮ, ಕಾರ್ಯಪಡೆ, ತುರ್ತು ಕಾಮಗಾರಿ, ವಿಪತ್ತು ಪರಿಹಾರ ನಿಧಿ  ಹೀಗೆ ವಿವಿಧ ಯೋಜನೆಗಳಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು. ಅಗತ್ಯ ಇರುವೆಡೆ ಕೊಳವೆ ಬಾವಿ ಕೊರೆಸಿ, ಪೈಪ್‌ ಲೈನ್‌ ಅಳವಡಿಸಿ ಹೊಸದಾಗಿ ಜಲಮೂಲ ಕಂಡು ಕೊಳ್ಳುವಿಕೆ, ಫÉಶಿಂಗ್‌ ಹೀಗೆ ವಿವಿಧ ಅನುಷ್ಠಾನ ಕ್ರಮಗಳು ಫಲ ನೀಡಿದ್ದರಿಂದ ಈ ಬಾರಿ ಎಲ್ಲೂ ಟ್ಯಾಂಕರ್‌ ನೀರಿಗೆ ಬೇಡಿಕೆ ಬರಲೇ ಇಲ್ಲ ಎಂದು ವಿಶ್ಲೇಷಿಸಿದ್ದಾರೆ. ಜಿಲ್ಲೆಯಲ್ಲಿ 1035 ಜನ ವಸತಿಗಳಿದ್ದು 41 ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಗಳಲ್ಲಿ 39 ಮುಗಿಸಲಾಗಿದೆ.

17 ಯೋಜನೆಗಳಿಗೆ ಕೆರೆಗಳಿಂದ 296 ಜನ ವಸತಿಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. 22 ಯೋಜನೆಗಳು ಆಲಮಟ್ಟಿಯ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯ ಹಾಗೂ ನಾರಾಯಣಪುರ ಬಸವಸಾಗರದ ಹಿನ್ನೀರಿನಿಂದ, ಭೀಮಾ ನದಿಯಿಂದ ನೀರು ಪಡೆದು ಶುದ್ಧೀಕರಿಸಿ 319 ಜನ ವಸತಿಗೆ ನೀರು ಪೂರೈಸಲಾಗಿದೆ. ಜಿಲ್ಲೆಯಲ್ಲಿ 1496 ಏಕ ಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಗ್ರಾಪಂ ಯಶಸ್ವಿಯಾಗಿ ನಿರ್ವಸಿವೆ. ಗ್ರಾಪಂ ಮಟ್ಟದಲ್ಲಿ ಗ್ರಾಮೀಣ ಕುಡಿಯುವ ನೀರಿನ ಇಲಾಖೆಯ ಸಮನ್ವಯದಿಂದ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೂ ಟ್ಯಾಂಕರ್‌ ನೀರಿಗೆ ಬದಲಾಗಿ ಗ್ರಾಮ ಮಟ್ಟದಲ್ಲೇ ಪರಿಹರಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next