Advertisement

ಸತ್ಪರುಷರು ಅಳಿದರೂ ಕೀರ್ತಿ ಅಳಿಯದು

05:27 PM Aug 01, 2018 | |

ಕಲಬುರಗಿ: ಸಮಾಜದ ಏಳ್ಗೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸತ್ಪರುಷರ ಕಾಯ ಅಳಿದರೂ ಕೀರ್ತಿ ಅಳಿಯದು, ಪರೋಪಕಾರ ಮಾಡಿದವರ ಕೀರ್ತಿ ಸಾವಿರ ವರ್ಷ ಉಳಿಯುವುದು ಎಂದು ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ಮಹಾಸ್ವಾಮೀಜಿ ನುಡಿದರು.

Advertisement

ಮಂಗಳವಾರ ನಗರದಲ್ಲಿ ನಡೆದ ಬೆಳ್ಳಿ ಸಾರೋಟಿನ ಮೆರವಣಿಗೆಯಲ್ಲಿ ಪಾಲ್ಗೊಂಡ ನಂತರ ಗುರುಶಾಂತಲಿಂಗೇಶ್ವರ ಕಲ್ಯಾಣ ಮಂಪಟದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಸಿದ್ಧಾಂತ ಶಿಖಾಮಣಿ ವಚನ ಸಾಹಿತ್ಯ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸತ್ಪರುಷರು ತಾವು ಮಾಡಿದ ತಪ್ಪನ್ನು ತಾವೇ ತಿದ್ದಿಕೊಳ್ಳುತ್ತ ಪಶ್ಚಾತ್ತಾಪ ಪಡುತ್ತಾರೆ. ತಮ್ಮನ್ನು ತಾವೇ ಶಿಕ್ಷಿಸಿಕೊಳ್ಳುತ್ತಾರೆ. ಬಹುಮುಖ್ಯವಾಗಿ ಆಡುವ ಮಾತಿನಲ್ಲಿ ಸತ್ಯವಿರಲಿ ನುಡಿದಂತೆ ನಡೆ ಇದೇ ಜನ್ಮಕಡೆ ಎಂದು ಸತ್ಪರುಷರು ಎಚ್ಚರಿಸಿದ್ದಾರೆ ಎಂದರು. ಕಾಯ ಮತ್ತು ಕಾಲ ಎರಡು ಮಹತ್ವದ ವಸ್ತುಗಳು.  ಪುಣ್ಯಕ್ಕೆ ಇವು ಎರಡೂ ನಮ್ಮಲ್ಲಿ ಇವೆ. ಅವುಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಬಾಳಬೇಕು. ರೂಪಕ್ಕಿಂತ ಗುಣಶ್ರೇಷ್ಠ, ಗುಣಕ್ಕಿಂತ ಜ್ಞಾನಶ್ರೇಷ್ಠ, ಜ್ಞಾನಕ್ಕಿಂತ ವಿನಯಶ್ರೇಷ್ಠ ಎಂದ ಸತುರುಷರು ಸಾರಿ ಹೇಳಿದ್ದಾರೆ. ಕಳುವಾಗದ ವಸ್ತು ವಿದ್ಯೆ, ಅದನ್ನು ಸರಿಯಾದ ಸಮಯಕ್ಕೆ ಜ್ಞಾನದಿಂದ ಉಪಯೋಗಿಸಿ ನಡೆದರೆ ನಿಮ್ಮ ಜೀವನ ಪಾವನವಾಗುತ್ತದೆ ಎಂದು ನುಡಿದರು. 

ಕಡಗಂಚಿಯ ವೀರಭದ್ರ ಶಿವಾಚಾರ್ಯರು ನೇತೃತ್ವ ವಹಿಸಿದರು. ಜೈನಾಪುರ ರೇಣುಕ ಶಿವಾಚಾರ್ಯರು, ಶಾರದಾಮಣಿ ಎಮ್‌. ಪಾಟೀಲ ನುಡಿ ಸೇವೆ ಕೈಗೊಂಡರು. ರಾಯಚೂರು, ನೀಲೂರು, ಎಲಗೋಡ, ಆಳಂದ, ಸುಲೇಪೇಟ್‌, ಟೆಂಗಳಿ, ಹೊಸಹಳ್ಳಿ, ಮಾನದಹಿಪ್ಪರಗಾ, ಮೈಂದರ್ಗಿ, ಜನ್ನಿಕೇರಿ ಶ್ರೀಗಳು ಇದ್ದರು.

ಗುಂಡೇರಾವ ಮದಗುಂಡ, ಬಸವರಾಜ ಬಿರೇದಾರ, ಶರಣಪ್ಪ ಬೆಣ್ಣೂರ, ಹರ್ಷಾನಂದ ಗುತ್ತೇದಾರ, ಸಿದ್ರಾಮಪ್ಪ ಪಾಟೀಲ ಧಂಗಾಪುರ, ಸೋಮಶೇಖರ ಮೂಲಗೆ, ವೀರಣ್ಣ ಹೊನಚಟ್ಟಿ ದುತ್ತರಗಾಂವ, ಮಚಿಂದ್ರನಾಥ ಮೂಲಗೆ, ಬಸವರಾಜ ಡಾಂಗೆ, ಪರಿಸರ ಪ್ರೇಮಿ ಶೈಲೇಂದ್ರ ಕವಡಿ ಇದ್ದರು.

Advertisement

ಗುರುಲಿಂಗಯ್ಯ ಹಿತ್ತಲಶಿರೂರ, ಮಹಾಂತಯ್ಯ ಲಿಂಗದಳ್ಳಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಶಿವಶರಣಪ್ಪ ಸರಸಂಬಾ ನಿರೂಪಿಸಿದರು. ಇದಕ್ಕೂ ಮುನ್ನ ನೆಹರು ಗಂಜ್‌ ಹನುಮಾನ ಮಂದಿರದಿಂದ ಆನೆಯ ಮೇಲೆ ಶ್ರೀ ಸಿದ್ಧಾಂತ ಶಿಖಾಮಣಿ ವಚನ ಸಾಹಿತ್ಯ ಗ್ರಂಥ, ಕುದುರೆ, ಒಂಟೆ, ಅಂಬಾರಿ, 108 ಪುರವಂತರು, ಸುಮಂಗಲೆಯರೊಂದಿಗೆ ಮೆರವಣಿಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next