Advertisement

ಸಿದ್ಧಾಂತ ಶಿಖಾಮಣಿ-ವಚನ ಸಾಹಿತ್ಯ; ಉಪನ್ಯಾಸ

11:00 AM Sep 08, 2018 | |

ಬಸವಕಲ್ಯಾಣ: ಸಿದ್ಧಾಂತ ಶಿಖಾಮಣಿ ಹಾಗೂ ವಚನಗಳು ಧರ್ಮದ ಮಾರ್ಗ ತೋರುವ ಶ್ರೇಷ್ಠ ಸಾಹಿತ್ಯವಾಗಿವೆ ಎಂದು ಕಾಂಗ್ರೆಸ್‌ ಮುಖಂಡ ಅರ್ಜುನ ಕನಕ ಹೇಳಿದರು.

Advertisement

ನಗರದ ಗವಿಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗವಿ ಮಠವು ಜಾತಿ ಮತ ಭೇದ ಮಾಡದೆ ಸಮಾನತೆ ಪಾಲಿಸುವ ಮಠವಾಗಿದೆ. ಅಭಿನವ ಶ್ರೀಗಳು ಚಿಕ್ಕವರಿದ್ದರೂ ಮಠವನ್ನು ಬಹಳ ಅಭಿವೃದ್ಧಿಪಡಿಸಿರುವುದು ಹೆಮ್ಮಯ ಸಂಗತಿಯಾಗಿದೆ ಎಂದು ನುಡಿದರು. 

ಎರೋನಾಟಿಕ್‌ ಇಂಜಿನಿಯರ್‌ ವಿಶ್ವನಾಥ ಎಸ್‌. ಚನ್ಮಲ್ಲೆ ಮಾತನಾಡಿ, ನಾನು ತ್ರಿಪುರಾಂತದವನು. ಚಿಕ್ಕವನಾಗಿದ್ದಾಗ ಸ್ನೇಹಿತರಾದ ಶರಣಪ್ಪ ಬಿರಾದಾರ ಜೊತೆ ಗವಿಮಠಕ್ಕೆ ಬಂದು, ಜಗದ್ಗುರು ಘನಲಿಂಗರಲ್ಲಿ ಶ್ರದ್ಧೆ ಭಕ್ತಿಯಿಟ್ಟು
ಗುಹೆಯಲ್ಲಿ ಕುಳಿತು ಅಭ್ಯಾಸ ಮಾಡಿದ್ದಕ್ಕೆ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ಬಾಲ್ಯದ ಜೀವನ ಸ್ಮರಿಸಿದರು. ಸಾನ್ನಿಧ್ಯ ವಹಿಸಿದ್ದ ಮಠದ ಶ್ರೀಗಳು ಆಶೀರ್ವಚನ ನೀಡಿ, ಸಿದ್ಧಾಂತ ಶಿಖಾಮಣಿ ಹಾಗೂ ವಚನ
ಸಾಗಿತ್ಯವನ್ನು ಎಲ್ಲರೂ ಓದಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದರು ಭಕ್ತಾದಿಗಳಿಗೆ ಸಂದೇಶ ನೀಡಿದರು. 

ಬಸವರಾಜ ಬಿರಾದಾರ್‌, ಶರಣಬಸಪ್ಪಾ ಬಿರಾದಾರ, ಸಂಸ್ಥೆಯ ಮಹಿಳಾ ಘಟಕದ ಅಧ್ಯಕ್ಷೆ ಸವೀತಾ ರಮೇಶ, ವೀರಣ್ಣಾ ಶೀಲವಂತ ಸೇರಿದಂತೆ ಮತ್ತಿತರರು ಇದ್ದರು. ಜಗದ್ಗುರು ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯ
ಟ್ರಸ್ಟ್‌, ಶ್ರೀ ಮದ್ವೀರಶೈವ ಸದೊಧನ ಸಂಸ್ಥೆ ಮತ್ತು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next