Advertisement

ಕವಿತೆ ಬರೆದಂತೆ ಬದುಕಿದವರು ವಾಜಪೇಯಿ

10:44 AM Sep 30, 2018 | |

ಶಹಾಬಾದ: ಕವಿತೆ ಬರೆದಂತೆ ಬದುಕಿದ ಅತಿ ವಿರಳ ಕವಿಗಳ ಸಾಲಿನಲ್ಲಿ ವಾಜಪೇಯಿ ಕೂಡಾ ಒಬ್ಬರು ಎಂದು ಕಲಬುರಗಿ
ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಹೇಳಿದರು.

Advertisement

ನಗರದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಅಟಲ್‌ ಜೀ ಕುರಿತು ಆಯೋಜಿಸಲಾಗಿದ್ದ ಕಾವ್ಯಾಂಜಲಿ ಕಾರ್ಯಕ್ರಮದ ಉದ್ಘಾಟಕರಾಗಿ ಅವರು ಮಾತನಾಡಿದರು. ವಾಜಪೇಯಿ ಅವರು ತಮ್ಮ ಕವಿತೆಗಳಲ್ಲಿ ನಾವು ಬದುಕುವುದಾದರೆ ಭಾರತಕ್ಕಾಗಿ, ನಾವು ಸಾಯುವುದಾದರೆ ಭಾರತಕ್ಕಾಗಿ ಎಂದು ರಾಷ್ಟ್ರಪ್ರೇಮ ಮೆರೆದಿದ್ದದೇ ನಮ್ಮ ಸಂಸ್ಕೃತಿಯನ್ನು ಹೇಳಿಕೊಂಡವರು. ಅಲ್ಲದೇ ಜನರ
ಸ್ವಾರ್ಥವನ್ನು ಕಟುವಾಗಿ ಟೀಕಿಸಿದ ಒಬ್ಬ ಮೇಧಾವಿ ಕವಿಯಾಗಿದ್ದರು ಎಂದರು.

ಸಾಹಿತಿ ಮಂಡಲಗಿರಿ ಪ್ರಸನ್ನ ಮಾತನಾಡಿ, ರಾಜಕೀಯದಲ್ಲಿ ಅಟಲಜೀ ಸರ್ವೋತ್ತಮ ನಾಯಕನಾಗಿ ಎಲ್ಲರಿಂದ ಮೆಚ್ಚುಗೆ ಗಳಿಸಲು ಅವರೊಳಗಿದ್ದ ಒಬ್ಬ ಸಂವೇದನಾಶೀಲ ಕವಿ ಕೂಡ ಕಾರಣ. ದೇಶದ ಪ್ರಧಾನಮಂತ್ರಿ ಹುದ್ದೆವರೆಗೆ ಏರಿದರೂ, ಅವರೊಬ್ಬ ಸ್ವತ್ಛ ಮನಸ್ಸಿನ ಕವಿಯಾಗಿದ್ದರು. ಸ್ಪಟಿಕದಂತೆ ಪುಟಿಯುವ ಅವರ ಸಾಲುಗಳು ಎಂಥವರನ್ನು ಪ್ರಭಾವಿತಗೊಳಿಸುತ್ತಿದ್ದವು. ಭಾಷಣಕ್ಕೆ ನಿಂತರೆ ಅವರಿಂದ ಸಿಡಿಯುವ ಸಾಲುಗಳನ್ನು ಯಾರೂ ಮರೆಯುವುದಕ್ಕೂ ಸಾಧ್ಯವಿಲ್ಲ ಎಂದರು. ನಿವೃತ್ತ ಪ್ರಾಧ್ಯಾಪಕ ಶಂಕರ
ಸೋಮಯಾಜಿ, ಮಾಜಿ ಸಚಿವ ಬಾಬುರಾವ್‌ ಚವ್ಹಾಣ, ಸಂಜಯ ಮಿಸ್ಕಿನ್‌ ಅತಿಥಿಗಳಾಗಿದ್ದರು. ಸುಭಾಷ ಜಾಪೂರ ಅಧ್ಯಕ್ಷತೆ ವಹಿಸಿದ್ದರು. ದೇವದಾಸ ಜಾಧವ ನಿರೂಪಿಸಿದರು, ರಾಜು ಕೋಬಾಳ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಬಸವರಾಜ ಬಿರಾದಾರ ಸ್ವಾಗತಿಸಿದರು, ನಾಗಣ್ಣ ರಾಂಪೂರೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next