Advertisement

GOAT Trailer: ‘ಗೋಟ್‌ʼ ಟ್ರೇಲರ್‌ನಲ್ಲಿ ʼಗಾಂಧಿʼಯಾಗಿ ಸಖತ್‌ ಸ್ಟಂಟ್‌ ಮಾಡಿದ ದಳಪತಿ ವಿಜಯ್

05:54 PM Aug 17, 2024 | Team Udayavani |

ಚೆನ್ನೈ: ಚೆನ್ನೈ: ಕಾಲಿವುಡ್‌ ಸ್ಟಾರ್ ದಳಪತಿ ವಿಜಯ್‌ (Thalapathy Vijay) ಅವರ ಬಹುನಿರೀಕ್ಷಿತ ಸಿನಿಮಾ ʼದಿ ಗ್ರೇಟೆಸ್ಟ್‌ ಆಫ್‌ ಆಲ್‌ ಟೈಮ್‌ʼ (The Greatest of All Time)‌ ಸಿನಿಮಾದ ಟ್ರೇಲರ್‌ ಶನಿವಾರ(ಆ.17ರಂದು) ರಿಲೀಸ್‌ ಆಗಿದೆ.

Advertisement

ದಳಪತಿ ಸಿನಿಮಾ ವೃತ್ತಿ ಬದುಕಿಗೆ ಇನ್ನೇನು ಕೆಲವೇ ವರ್ಷಗಳಲ್ಲಿ ವಿದಾಯ ಹೇಳುತ್ತಾರೆ ಎನ್ನುವ ಮಾತಿನ ನಡುವೆ ಅನೌನ್ಸ್‌ ಆದ ʼಗೋಟ್‌ʼ ಸಿನಿಮಾ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಹೆಚ್ಚಿಸಿದೆ.

ಸಿನಿಮಾದಲ್ಲಿ ವಿಜಯ್‌ ಎರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ವಿಭಿನ್ನ ಪೋಸ್ಟರ್‌ಗಳಿಂದ ಸದ್ದು ಮಾಡಿರುವ ʼಗೋಟ್‌ʼ ಟ್ರೇಲರ್‌ ರಿಲೀಸ್‌ ಮಾಡಿ ಪ್ರೇಕ್ಷಕರ ಗಮನ ಸೆಳೆದಿದೆ.

ಇದನ್ನೂ ಓದಿ: Fauji Movie: ಪ್ರಭಾಸ್‌ ʼಫೌಜಿʼ ಮುಹೂರ್ತಕ್ಕೆ ಸಾಥ್‌ ಕೊಟ್ಟ ನೀಲ್;‌ ಫಸ್ಟ್‌ ಲುಕ್‌ ಔಟ್

ಟ್ರೇಲರ್‌ ನಲ್ಲಿ ಏನಿದೆ?: ʼಗಾಂಧಿʼ ಎನ್ನುವಾತ‌ (ದಳಪತಿ ವಿಜಯ್) ವಿಧ್ವಂಸಕ ಕೃತ್ಯಗಳನ್ನು ತಡೆಯುವ ಸ್ಪೈ ಏಜೆಂಟ್‌ ಆಗಿ ಕಾಣಿಸಿಕೊಂಡಿದ್ದಾನೆ. ನಿವೃತ್ತಿಯಾದ ತನ್ನ ತಂದೆಯ ಜತೆ ಸೇರಿಕೊಂಡು, ಕುಟುಂಬಕ್ಕೆ ಬರುವ ಅಪಾಯವನ್ನು ತಪ್ಪಿಸಿ, ಕೊಟ್ಟ ಟಾಸ್ಕ್‌ ಪೂರ್ತಿ ಮಾಡುವ ಸಾಹಸಕ್ಕೆ ಮುಂದಾಗುವುದನ್ನು ತೋರಿಸಲಾಗಿದೆ.

Advertisement

ʼಗಾಂಧಿʼ ಇಲ್ಲಿ ಅಪಾಯವನ್ನು ತಡೆಯುವ ಹೀರೋ ಆಗುವುದರ ಜತೆಗೆ ಕುಟುಂಬವನ್ನು ರಕ್ಷಿಸುವ ಧೀರನಾಗಿಯೂ ಕಾಣಿಸಿಕೊಂಡಿದ್ದಾರೆ. ವಿದೇಶದಲ್ಲಿ ಸಿನಿಮಾ ಶೂಟ್‌ ಆಗಿದ್ದು, ಆ್ಯಕ್ಷನ್ ದೃಶ್ಯಾವಳಿಗಳು ಅದ್ಧೂರಿಯಾಗಿ ಮೂಡಿಬಂದಿದೆ.

ಮೇಲ್ನೋಟಕ್ಕೆ ಇದೊಂದು ಸ್ಪೈ ಏಜೆಂಟ್‌ ಸಾಹಸದ ಕಥೆಯ ಸಿನಿಮಾವಾಗಿ ಕಾಣುತ್ತದೆ. ವಿಜಯ್‌ ಹೊರತುಪಡಿಸಿದರೆ ಜಯರಾಮ್ ಅವರು ಟ್ರೇಲರ್‌ನಲ್ಲಿ ಮಿಂಚಿದ್ದಾರೆ.

ವೆಂಕಟ್‌ ಪ್ರಭು ನಿರ್ದೇಶನದ ಈ ಸಿನಿಮಾದಲ್ಲಿ ವಿಜಯ್‌ ಜೊತೆ ಮೀನಾಕ್ಷಿ ಚೌಧರಿ, ಯೋಗಿ ಬಾಬು, ಜಯರಾಮ್, ಪ್ರಭುದೇವ, ಲೈಲಾ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ. ಬಹುನಿರೀಕ್ಷಿತ ʼಗ್ರೇಟೆಸ್ಟ್‌ ಆಫ್‌ ಆಲ್‌ ಟೈಮ್‌ʼ ಚಿತ್ರ ಸೆ.5 ರಂದು ವರ್ಲ್ಡ್‌ ವೈಡ್‌ ತೆರೆ ಕಾಣಲಿದೆ.

Advertisement

Udayavani is now on Telegram. Click here to join our channel and stay updated with the latest news.

Next