Advertisement

Thalapathy Vijay: ಅಬ್ಬಾ.! ‘ಗೋಟ್‌ʼ ಚಿತ್ರಕ್ಕಾಗಿ ವಿಜಯ್‌ ಪಡೆದ ಸಂಭಾವನೆ ಇಷ್ಟೊಂದಾ?

02:03 PM Sep 02, 2024 | Team Udayavani |

ಚೆನ್ನೈ: ಕಾಲಿವುಡ್‌ ಸೂಪರ್‌ ಸ್ಟಾರ್‌ ದಳಪತಿ ವಿಜಯ್(Thalapathy Vijay)‌ ಅವರ ʼಗೋಟ್‌ʼ (GOAT) ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ.

Advertisement

ದಕ್ಷಿಣ ಭಾರತದ ದೊಡ್ಡ ಸ್ಟಾರ್‌ಗಳಲ್ಲಿ ಒಬ್ಬರಾಗಿರುವ ವಿಜಯ್‌ ಅವರ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಕೋಟಿ ಕೋಟಿ ಗಳಿಕೆ ಕಾಣುತ್ತವೆ. 100 ಕೋಟಿಯಂತೂ ಆರಾಮವಾಗಿ ಕಲೆಕ್ಷನ್‌ ಮಾಡುತ್ತದೆ. ಹಾಗಾಗಿ ವಿಜಯ್‌ ಅವರ ಸಿನಿಮಾಗಳಿಗೆ ಹಣ ಸುರಿಯಲು ನಿರ್ಮಾಪಕರು ಹಿಂದೇಟು ಹಾಕುವುದಿಲ್ಲ.

ವೆಂಕಟ್‌ ಪ್ರಭು (Venkat prabhu) ನಿರ್ದೇಶನದ ʼಗೋಟ್‌ʼ ಈಗಾಗಲೇ ತನ್ನ ಹಾಡು, ಟ್ರೇಲರ್‌ನಿಂದ ಗಮನ ಸೆಳೆದಿದೆ. ದ್ವಿಪಾತ್ರದಲ್ಲಿ ವಿಜಯ್‌ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Kangana Ranaut: ಸಿಗದ ಸೆನ್ಸಾರ್ ಪ್ರಮಾಣ ಪತ್ರ; ಕಂಗನಾ ʼಎಮರ್ಜೆನ್ಸಿʼ ರಿಲೀಸ್‌ ಮುಂದೂಡಿಕೆ

ವಿಜಯ್‌ ಸಾಮಾನ್ಯವಾಗಿ ಒಂದು ಸಿನಿಮಾಕ್ಕೆ 100 ಕೋಟಿಗೂ ಹೆಚ್ಚಿನ ಸಂಭಾವನೆಯನ್ನು ಪಡೆಯುತ್ತಾರೆ. ʼಗೋಟ್‌ʼ ಸಿನಿಮಾಕ್ಕಾಗಿ ಅವರು 150 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು.

Advertisement

ಆದರೆ ಇದೀಗ ಈ ಬಗ್ಗೆ ಸಿನಿಮಾದ ನಿರ್ಮಾಪಕಿ ಅರ್ಚನಾ ಕಲ್ಪಾತಿ(Archana Kalpathi) ಸಂದರ್ಶನವೊಂದರಲ್ಲಿ ಮಾತನಾಡಿದ್ದು, ʼಗೋಟ್‌ʼ ಸಿನಿಮಾಕ್ಕೆ ವಿಜಯ್‌ ಪಡೆದ ಸಂಭಾವನೆ ಬಗ್ಗೆ ಹೇಳಿದ್ದಾರೆ.

ʼಗಲ್ಲಾಟ್ಟಾʼ ಕ್ಕೆ ಕೊಟ್ಟ ಸಂದರ್ಶನದಲ್ಲಿ ಮಾತನಾಡಿದ ಅವರು, “ಈ ಚಿತ್ರದಲ್ಲಿನ ಅವರ ಪಾತ್ರಕ್ಕಾಗಿ ವಿಜಯ್ ಅವರಿಗೆ 200 ಕೋಟಿ ರೂಪಾಯಿಗಳನ್ನು ಸಂಭಾವನೆ ನೀಡಲಾಗಿದೆ. ಇದು ಅವರನ್ನು ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರನ್ನಾಗಿ ಮಾಡಿದೆ” ಎಂದು ಅವರು ಹೇಳಿದ್ದಾರೆ.

ಯಾಕೆ ಇಷ್ಟು ದೊಡ್ಡ ಸಂಭಾವನೆ ನೀಡಲಾಗಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು,  “ಕಳೆದ ಕೆಲ ವರ್ಷಗಳಿಂದ ವಿಜಯ್‌ ಅವರ ಮಾರುಕಟ್ಟೆ ಮೌಲ್ಯ ಹೆಚ್ಚಾಗಿದೆ. ಅವರ ಸಿನಿಮಾದ ಬಾಕ್ಸ್‌ ಆಫೀಸ್‌ ಗಳಿಕೆ ಕೂಡ ಹೆಚ್ಚಾಗುತ್ತಿದೆ. ‘ಗೋಟ್’ ಈಗಾಗಲೇ ತಯಾರಕರಿಗೆ ಲಾಭ ತಂದುಕೊಟ್ಟಿದೆ. ಕೇವಲ ಪ್ರೀ-ರಿಲೀಸ್ ವ್ಯವಹಾರದ ಮೂಲಕವೇ ತನ್ನ ಬಜೆಟ್‌ಗಿಂತ ಹೆಚ್ಚಿನದನ್ನು ಗಳಿಸಿದೆ. ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಹಿಟ್ ಆಗಲು ಸಿನಿಮಾ ಸಿದ್ಧವಾಗಿದೆ” ಎಂದು ಅವರು ಹೇಳಿದ್ದಾರೆ.

ʼಗೋಟ್‌ʼ ಅಂದಾಜು 340 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದೆ. ಸಿನಿಮಾದಲ್ಲಿ ವಿಜಯ್‌ ಜೊತೆ ಮೀನಾಕ್ಷಿ ಚೌಧರಿ, ಯೋಗಿ ಬಾಬು, ಜಯರಾಮ್, ಪ್ರಭುದೇವ, ಲೈಲಾ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ. ಬಹುನಿರೀಕ್ಷಿತ ʼಗ್ರೇಟೆಸ್ಟ್‌ ಆಫ್‌ ಆಲ್‌ ಟೈಮ್‌ʼ ಚಿತ್ರ ಸೆ.5 ರಂದು ವರ್ಲ್ಡ್‌ ವೈಡ್‌ ತೆರೆ ಕಾಣಲಿದೆ.

Advertisement

Udayavani is now on Telegram. Click here to join our channel and stay updated with the latest news.