Advertisement

Taxpayers: ಶಾರುಖ್‌ ಟು ಕೊಹ್ಲಿ- ಇಲ್ಲಿದೆ ಗರಿಷ್ಠ ತೆರಿಗೆ ಪಾವತಿಸಿದ ಸೆಲೆಬ್ರಿಟಿಗಳ ಪಟ್ಟಿ

01:36 PM Sep 05, 2024 | Team Udayavani |

ಮುಂಬಯಿ: 2024ನೇ ಆರ್ಥಿಕ ವರ್ಷದಲ್ಲಿ ಗರಿಷ್ಠ ತೆರಿಗೆ ಪಾವತಿಸಿದ ವಿವಿಧ ಕ್ಷೇತ್ರದ ಸೆಲೆಬ್ರಿಟಿಗಳ(Celebrity taxpayer) ಪಟ್ಟಿಯನ್ನು ಫಾರ್ಚ್ಯೂನ್‌ ಇಂಡಿಯಾ ಇತ್ತೀಚೆಗೆ ಬಿಡುಗಡೆ ಮಾಡಿದೆ.

Advertisement

ಬಾಲಿವುಡ್‌ ಶಾರುಖ್‌ ಖಾನ್‌(Shah Rukh Khan), ಸಲ್ಮಾನ್‌ ಖಾನ್‌(Salman Khan) , ಅಮಿತಾಬ್‌ ಬಚ್ಚನ್‌(Amitabh Bachchan) ಹಾಗೂ ಕ್ರಿಕೆಟಿಗ ವಿರಾಟ್‌ ಕೊಹ್ಲಿ (Virat Kohli) 2024ನೇ ಆರ್ಥಿಕ ವರ್ಷದಲ್ಲಿ ಎಷ್ಟು ತೆರಿಗೆ (Tax) ಪಾವತಿಸಿದ್ದಾರೆ ಎನ್ನುವುದನ್ನು ಈ ಪಟ್ಟಿ ರಿವೀಲ್‌ ಮಾಡಿದೆ.

ಗರಿಷ್ಠ ತೆರಿಗೆ ಪಾವತಿಸಿದ ಪಟ್ಟಿಯಲ್ಲಿ ಶಾರುಖ್‌ ಖಾನ್‌ ಅವರು ಮೊದಲ ಸ್ಥಾನದಲ್ಲಿದ್ದರೆ, ಮೊದಲ 4 ಸ್ಥಾನದಲ್ಲಿ ಸಿನಿಮಾ ಸೆಲೆಬ್ರಿಟಿಗಳೇ ಕಾಣಿಸಿಕೊಂಡಿದ್ದಾರೆ. ಕ್ರೀಡಾ ಕ್ಷೇತ್ರದಿಂದ ವಿರಾಟ್‌ ಕೊಹ್ಲಿ ಅವರು 5ನೇ ಸ್ಥಾನದಲ್ಲಿದ್ದಾರೆ.

content-img

ಗರಿಷ್ಠ ತೆರಿಗೆ ಪಾವತಿಸಿದ ಟಾಪ್‌ ಸೆಲೆಬ್ರಿಟಿಗಳು:  

Advertisement

ಶಾರುಖ್‌ ಖಾನ್‌  – 92 ಕೋಟಿ ರೂ.

ದಳಪತಿ ವಿಜಯ್‌  – 80 ಕೋಟಿ ರೂ.

ಸಲ್ಮಾನ್‌ ಖಾನ್‌  – 75 ಕೋಟಿ ರೂ.

ಅಮಿತಾಬ್‌ ಬಚ್ಚನ್‌  – 71 ಕೋಟಿ ರೂ.

ವಿರಾಟ್‌ ಕೊಹ್ಲಿ – 66 ಕೋಟಿ ರೂ.

ಅಜಯ್‌ ದೇವಗನ್‌ –  42 ಕೋಟಿ ರೂ.

ಎಂ.ಎಸ್.‌ ಧೋನಿ – 38 ಕೋಟಿ ರೂ.

ರಣ್ಬೀರ್‌ ಕಪೂರ್‌ –  36 ಕೋಟಿ ರೂ.

ಕೃತಿಕ್‌ ರೋಷನ್‌  – 28 ಕೋಟಿ ರೂ.

ಸಚಿನ್ ತೆಂಡೂಲ್ಕರ್ – 28 ಕೋಟಿ ರೂ.

ಕಪಿಲ್‌ ಶರ್ಮಾ – 26 ಕೋಟಿ ರೂ.

ಇತರೆ ಸೆಲೆಬ್ರಿಟಿಗಳು:  

ಸೌರವ್ ಗಂಗೂಲಿ  – 23 ಕೋಟಿ ರೂ.

ಕರೀನಾ ಕಪೂರ್ –  20 ಕೋಟಿ ರೂ.

ಶಾಹಿದ್ ಕಪೂರ್ – 14 ಕೋಟಿ ರೂ.

ಹಾರ್ದಿಕ್ ಪಾಂಡ್ಯ –  13 ಕೋಟಿ ರೂ.

ಕಿಯಾರಾ ಅಡ್ವಾಣಿ – 12 ಕೋಟಿ ರೂ.

ಮೋಹನ್ ಲಾಲ್  – 14 ಕೋಟಿ ರೂ.

ಅಲ್ಲು ಅರ್ಜುನ್  – 14 ಕೋಟಿ ರೂ.

ಪಂಕಜ್ ತ್ರಿಪಾಠಿ – 11 ಕೋಟಿ ರೂ.

ಕತ್ರಿನಾ ಕೈಫ್ – 11 ಕೋಟಿ ರೂ.

2023ರಲ್ಲಿ ಶಾರುಖ್‌ ಖಾನ್‌  3 ದೊಡ್ಡ ಹಿಟ್‌ ಗಳನ್ನು ನೀಡಿದ್ದರು. ಅವರ ‘ಪಠಾಣ್’ ಸಿನಿಮಾ 543.05 ಕೋಟಿ ರೂ. ಗಳಿಸಿತ್ತು. ʼಜವಾನ್‌ʼ 643.87 ಕೋಟಿ ರೂ. ಗಳಿಸಿತ್ತು. ಇನ್ನು ʼಡಂಕಿʼ 212.42 ಕೋಟಿ ರೂ. ಗಳಿಸಿತ್ತು.

ಇತ್ತ ಗರಿಷ್ಠ ತೆರಿಗೆ ಪಾವತಿಸಿದ ಸೆಲೆಬ್ರಿಟಿಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ದಳಪತಿ ವಿಜಯ್‌ ʼಲಿಯೋʼ ಸಿನಿಮಾದ ಮೂಲಕ ದೊಡ್ಡ ಹಿಟ್‌ ನೀಡಿದ್ದರು. ಈ ಸಿನಿಮಾ  600 ಕೋಟಿಗೂ ಹೆಚ್ಚಿನ ಗಳಿಕೆಯನ್ನು ಗಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.