Advertisement

ಕೃಷಿಕರ ಸಮಗ್ರ ಅಭಿವೃದ್ಧಿ ಸರಕಾರದ ಗುರಿ: ಡಿ. ವಿ. ಸದಾನಂದ ಗೌಡ

11:33 AM Jan 09, 2018 | Team Udayavani |

ಕಾಸರಗೋಡು: ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕೇಂದ್ರ ಸರಕಾರದ ಗುರಿಯಾಗಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು. ಕಾಸರಗೋಡಿನ ಐಸಿಎಆರ್‌ – ಸಿಪಿಸಿಆರ್‌ಐಯಲ್ಲಿ ಜ. 5ರಿಂದ 10ರ ತನಕ ನಡೆಯುತ್ತಿರುವ ಎಗ್ರಿ ಎಕ್ಸ್‌ಪೋ – 2018ರ ಅಂಗವಾಗಿ ಸೋಮವಾರ ಆಯೋಜಿಸಿದ ಕೃಷಿ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಕೃಷಿ ಅಭಿವೃದ್ಧಿಗೆ ಹಲವು ಯೋಜನೆ
ಕೃಷಿಕರ ಸಮಗ್ರ ಅಭಿವೃದ್ಧಿಗಾಗಿ ಹಲವು ಯೋಜನೆ ಜಾರಿಗೊಳಿಸಲಾಗಿದೆ. ಶೀಘ್ರವೇ ದೇಶದ 648 ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಮಿನಿಲ್ಯಾಬ್‌ ಆರಂಭಿಸಲಾಗುವುದು ಎಂದು ಅವರು ಹೇಳಿದರು. ಈ ಸಂದರ್ಭ ದಲ್ಲಿ ಸಚಿವರು ಕೇಂದ್ರೀಯ ವಿದ್ಯಾಲಯ ಸಿ.ಪಿ.ಸಿ. ಆರ್‌.ಐ.ಯ ನೂತನ ಕಟ್ಟಡವನ್ನು ಲೋಕಾರ್ಪಣೆಗೈದರು.

ಸಮ್ಮಾನ
ಅತ್ಯುತ್ತಮ ಕೃಷಿಕರಾದ ಸಿಬಿ ಜೋಸೆಫ್‌, ರಾಮಕೃಷ್ಣ, ವಿಶ್ವನಾಥ ರಾವ್‌ ಅವರನ್ನು ಸಚಿವರು ಸಮ್ಮಾನಿಸಿದರು. ಸಂಸದ ಪಿ. ಕರುಣಾಕರನ್‌ ಅಧ್ಯಕ್ಷತೆ ವಹಿಸಿದ್ದರು. ಎನ್‌. ಎ. ನೆಲ್ಲಿಕ್ಕುನ್ನು, ಎ.ಜಿ.ಸಿ. ಬಶೀರ್‌, ಎ.ಎ. ಜಲೀಲ್‌, ಉಷಾದೇವಿ, ಡಾ| ಮನೋಜ್‌ ಕುಮಾರ್‌ ಉಪಸ್ಥಿತರಿದ್ದರು. ಐ.ಸಿ.ಎ. ಆರ್‌ ಉಪ ನಿರ್ದೇಶಕ ಡಾ| ಎ. ಕೆ. ಸಿಂಗ್‌ ಪ್ರಸ್ತಾವನೆಗೈದರು.

ಅಂಚೆ ಚೀಟಿ ಬಿಡುಗಡೆ
ಸಂಸ್ಥೆಯ ಶತಮಾನೋತ್ಸವದ ಸವಿನೆನಪಿಗೆ ಹೊರತಂದ ಅಂಚೆ ಚೀಟಿಯನ್ನು ಉತ್ತರ ವಲಯದ ಪೋಸ್ಟ್‌ ಮಾಸ್ಟರ್‌ ಜನರಲ್‌ ಎಸ್‌. ಎಫ್‌.ಎಚ್‌. ರಿಜ್ವಿ ಬಿಡುಗಡೆಗೊಳಿಸಿದರು. 25 ವರ್ಷದ ಕೃಷಿಕರೊಂದಿಗಿನ ಪಯಣ, ಉದ್ಯಮಶೀಲ ಹಾಗೂ ಕೃಷಿಕ ಸ್ನೇಹಿ ತಂತ್ರಜ್ಞಾನಗಳು, ಮಲಯಾಳ ಹಾಗೂ ಕನ್ನಡದಲ್ಲಿ ತೆಂಗು ಎಂಬ ಶೀರ್ಷಿಕೆಯ ಪುಸ್ತಕಗಳ ಬಿಡುಗಡೆ, ಕಲ್ಪ ವರ್ಧಿನಿ ಹಾಗೂ ಕಲ್ಪ ಪೋಷಕ ಎಂಬ ಎರಡು ತೆಂಗಿಗಾಗಿ ಇರುವ ಲಘು ಪೋಷಕಾಂಶ ಗಳ ಬಿಡುಗಡೆ, ಅಂಗಾಂಶ ಕಸಿ ತಂತ್ರಜ್ಞಾನ ಹಸ್ತಾಂತರ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next