ಬೆಳ್ತಂಗಡಿ : ಶಿಕ್ಷಣ ಪಡೆಯುವ ವ್ಯಕ್ತಿ ಸಮಾಜದ ಆಸ್ತಿ. ಹೆತ್ತವರು ತಮ್ಮ ಮಕ್ಕಳಿಗೆ ಕೊಡುವ ಶ್ರೇಷ್ಠ ಕೊಡುಗೆ ಶಿಕ್ಷಣವಾಗಿದೆ. ಅಂತಹ ಶಿಕ್ಷಣ ಪಡೆಯುವ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ತನ್ನ ಶಿಕ್ಷಣದ ಗುರಿಯನ್ನು ಮುಟ್ಟುವ ಸಂಕಲ್ಪವಿರಲಿ ಎಂದು ಬೆಳ್ತಂಗಡಿ ಶಾಸಕ, ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಹೇಳಿದರು.
ಅವರು ಬೆಳ್ತಂಗಡಿಯ ಶ್ರೀ ಗುರುದೇವ ಪ.ಪೂ. ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯೂ ಕುಟುಂಬ ಹಾಗೂ ದೇಶಕ್ಕೆ ಗೌರವ ತರುವ ಕೆಲಸವನ್ನು ಮಾಡಬೇಕು. ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡುವಲ್ಲಿ ಪ್ರಯತ್ನಿಸಬೇಕು.ಪ್ರಾಮಾಣಿಕತೆ, ಇತರರಿಗೆ ಗೌರವ ನೀಡುವ ಜವಾಬ್ದಾರಿಯನ್ನು ತನ್ನೊಳಗೆ ಬೆಳೆಸಿಕೊಂಡು ಸಮಾಜದ ಯೋಗ್ಯ ನಾಗರಿಕನಾಗಿ ಬಾಳಿ ಎಂದರು.
ಕಾಲೇಜಿನ ಪ್ರಾಂಶುಪಾಲ ಎ. ಕೃಷ್ಣಪ್ಪ ಪೂಜಾರಿ , ಉಪನ್ಯಾಸಕಿ ಸವಿತಾ ಶುಭ ಹಾರೈಸಿದರು. ಪ್ರಥಮ ವಾಣಿಜ್ಯ ವಿಭಾಗದ ಯಶಸ್ವಿನಿ, ಪ್ರಥಮ ಪಿಯು ವಿಜ್ಞಾನ ವಿಭಾಗದ ಅನುಮೋಲ್ ಜೋಸೆಫ್, ದ್ವಿತೀಯ ಪಿಯು ವಾಣಿಜ್ಯ ವಿಭಾಗದ ಫಾತಿಮಾ ,ಸತೀಶ; ದ್ವಿತೀಯ ಪಿಯು ಕಲಾ ವಿಭಾಗದ ಜೋಯೆಲ್, ವಾಣಿಶ್ರೀ; ದ್ವಿತೀಯ ಪಿಯು ವಿಜ್ಞಾನ ವಿಭಾಗದ ಆಯಿಷತುಲ್ ಮುನೀರಾ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಕನ್ನಡ ಉಪನ್ಯಾಸಕ ಡಾ| ಮೋಹನ್ ಗೌಡ ಸ್ವಾಗತಿಸಿ, ಸಮಾಜಶಾಸ್ತ್ರ ಉಪನ್ಯಾಸಕ ಬಿ. ಎ. ಶಮೀವುಲ್ಲಾ ವಂದಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಹೇಮಾವತಿ ಕೆ. ನಿರೂಪಿಸಿದರು.