Advertisement

ಸಮಾಜ ತಿದ್ದುವುದೇ ವಚನ ಸಾಹಿತ್ಯದ ಗುರಿ

07:31 AM Mar 09, 2019 | |

ಬಂಗಾರಪೇಟೆ: ಪದ್ಯವೂ ಅಲ್ಲದ ಗದ್ಯವೂ ಅಲ್ಲದ ಸುಲಭವಾದ ಸರಳವಾಗಿ ಜನರಿಗೆ ಅರ್ಥವಾಗುವ ರೀತಿಯಲ್ಲಿ ಸಮಾಜದ ಅಂಕುಡೊಂಕುಗಳನ್ನು ತಿಳಿಹೇಳುವ ಪದಗಳನ್ನೇ ವಚನ ಸಾಹಿತ್ಯವೆಂದು ಕರೆಯಲಾಗುತ್ತದೆಂದು ಎಸ್‌.ಮಾದಮಂಗಲ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ ಎಲ್‌.ರಾಜಪ್ಪ ಹೇಳಿದರು.

Advertisement

ಪಟ್ಟಣದ‌ ಜೈನ್‌ ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ತಾಲೂಕು ಕನ್ನಡ ಸಾತ್ಯ ಪರಿಷತ್ತು ಏರ್ಪಡಿಸಿದ್ದ ಭಾರತಿ ನಂಜುಂಡಪ್ಪ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. 12ನೇ ಶತಮಾನದಲ್ಲಿ ಬಸವಣ್ಣನವರಿಂದ ವಚನ ಸಾಹಿತ್ಯ ಪ್ರಾರಂಭವಾಗಿ ನಂತರದ ದಿನಗಳಲ್ಲಿ ಇದೊಂದು ರೀತಿಯಲ್ಲಿ ಮನೆಮನೆಗೂ ಹರಡಿ ಹಲವಾರು ಮಹಿಳೆಯರೂ ವಚನಗಳನ್ನು ರಚಿಸಲಾರಂಭಿಸಿದರೆಂದರು.   

ಪ್ರಭಾವ: ಅಕ್ಕಮಹಾದೇವಿ ಸೇರಿದಂತೆ ನೂರಾರು ಮಹಿಳೆಯರು ಬಸವಣ್ಣನವರ ವಚನಗಳಿಂದ ಪ್ರಭಾವಿತರಾಗಿ ವಚನ ಸಾಹಿತ್ಯ ಪೋಷಿಸಿಕೊಂಡು ಬಂದಿದ್ದಾರೆ. ಮುಂದೆ ಅದು ಎಲ್ಲಾ ಶತಮಾನಗಳಲ್ಲೂ ಪ್ರಭಾವಿತವಾಗಿ ಬೆಳೆಯುತ್ತಿದೆ ಎಂದು ಹೇಳಿದರು. 

ಭಾಷೆ ಉಳಿವು: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಆರ್‌.ಅಶ್ವತ್ಥ, ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರದ ಅನುದಾನಗಳನ್ನು ಬಳಸಿಕೊಂಡು ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಭಾಷೆಯನ್ನು ಪೋಷಿಸುತ್ತಿದೆ ಎಂದರು.

ಪ್ರಥಮ ಸಮ್ಮೇಳನಾಧ್ಯಕ್ಷರಾಗಿದ್ದ ದಿವಂಗತ ಎಚ್‌.ಕೆ.ನಂಜುಂಡಯ್ಯ ಅವರಿಂದ ಪ್ರಾರಂಭಿಸಿ ಇತ್ತೀಚೆಗೆ ನಡೆದ 84ನೇ ಅಖೀಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಡಾ.ಚಂದ್ರಶೇಖರ ಕಂಬಾರ ಅವರೆಗೆ ಹಲವಾರು ಕನ್ನಡ ಸಾಹಿತ್ಯ ಲೋಕದ ದಿಗ್ಗಜರನ್ನು ಸಮ್ಮೇಳನಾಧ್ಯಕ್ಷರನ್ನಾಗಿಸಿದೆ ಎಂದೂ ಹೇಳಿದರು.

Advertisement

ಪುರಸ್ಕಾರ: ಆಶಯ ನುಡಿಗಳನ್ನಾಡಿದ ಬಂಗಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ತೇ.ಸೀ.ಬದರೀನಾಥ್‌, ರಾಜ್ಯಾಧ್ಯಕ್ಷರಾದ ಡಾ.ಮನುಬಳಿಗಾರ್‌ ಮತ್ತು ಜಿಲ್ಲಾಧ್ಯಕ್ಷರಾದ ನಾಗಾನಂದ ಕೆಂಪರಾಜ್‌ ನೇತೃತ್ವದಲ್ಲಿ ಉತ್ತಮ ಕೆಲಸಗಳನ್ನು ಮಾಡಗುತ್ತಿದೆ. ಅಲ್ಲದೆ ಪ್ರತಿಭಾ ಪುರಸ್ಕಾರದ ಮೂಲಕ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುತ್ತಿದೆ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಜೈನ್‌ ಶಾಲೆ ಪ್ರಾಂಶುಪಾಲೆ ಅನ್ನಪೂರ್ಣ, ಜಿಲ್ಲೆಯಲ್ಲಿ ಕನ್ನಡ ಪರ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯುತ್ತಲೇ ಇರುವುದು ಸಂತಸದ ವಿಚಾರ. ವಿವಿಧ ಕನ್ನಡ ಪರ ಸಂಘಟನೆಗಳು ಇಂತಹ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುತ್ತಿರುವುದೂ ಗಡಿಜಿಲ್ಲೆಯಾಗಿರುವ ಕೋಲಾರಕ್ಕೆ ಹೆಚ್ಚಿನ ಗೌರವ ತಂದಿದೆ ಎಂದರು.

ಶಾಲಾ ಮಕ್ಕಳಿಂದ ಪ್ರಾರ್ಥನೆ ಮತ್ತು ನಾಡಗೀತೆ ಮೂಡಿಬಂತು. ಶಿಕ್ಷಕಿ ಆರತಿ, ಮೈ.ಸತೀಶ್‌ ಕುಮಾರ್‌, ನಿವೃತ್ತ ಶಿಕ್ಷಕ .ಎಲ್‌.ಪ್ರಹ್ಲಾದರಾವ್‌, ಶಿಕ್ಷಕ ಪ್ರದೀಪ್‌, ಕಸಾಪ ಕಾರ್ಯಕಾರಿ ಸಮಿತಿ ಸದಸ್ಯರಾದ ಲಯನ್‌ ನಂದ, ರು.ವಿಜಯಕುಮಾರ್‌, ಶಿವಕುಮಾರ್‌, ಬಸವರಾಜು, ಅಕ್ಕನ ಬಳಗ, ಶರಣ ಸಾಹಿತ್ಯ ಪರಿಷತ್‌ ಪದಾಧಿಕಾರಿಗಳು, ಜೈನ್‌ ಶಾಲೆ ಶಿಕ್ಷಕ ವೃಂದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next