Advertisement

ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆಯೇ ಶಿಕ್ಷಣದ ಗುರಿ: ಪ್ರೊ|ದಿನಕರ ರಾವ್

02:20 AM Jul 13, 2017 | Team Udayavani |

ದರ್ಬೆ : ವ್ಯಕ್ತಿಯ ಶಾರೀರಿಕ, ಮಾನಸಿಕ, ನೈತಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆಯೇ ಸಂಪೂರ್ಣ ಶಿಕ್ಷಣದ ಏಕಮೇವ ಗುರಿ ಎಂದು ಸಂತ ಫಿಲೋಮಿನಾ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ| ದಿನಕರ ರಾವ್‌ ಅಭಿಪ್ರಾಯಪಟ್ಟರು.

Advertisement

ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಕ್ರೆಡಿಟ್‌ ಆಧಾರಿತ ಸೆಮಿಸ್ಟರ್‌ ಸ್ಕೀಮ್‌ ಕುರಿತು ಏರ್ಪಡಿಸಲಾದ ಓರಿಯೆಂಟೇಶನ್‌ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನ ವಿಧಾನಗಳಲ್ಲಿ ಸುಧಾರಣೆಯೊಂದಿಗೆ ಪದವಿ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಯೂ ಜಾಗತಿಕ ಮಟ್ಟದಲ್ಲಿಯೂ ಸಹ ಸೂಕ್ತ ಸ್ಥಾನಮಾನವನ್ನು ಪಡೆಯುವಂತಾಗಬೇಕು ಎಂಬ ಉದ್ದೇಶದಿಂದ ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗದ ಶಿಫಾರಸಿನಂತೆ ಮಂಗಳೂರು ವಿಶ್ವವಿದ್ಯಾನಿಲಯು ಕ್ರೆಡಿಟ್‌ ಆಧಾರಿತ ಸೆಮಿಸ್ಟರ್‌ ಸ್ಕೀಮ್‌ ಅಳವಡಿಸಿದೆ ಎಂದು ಹೇಳಿದರು.

ಸಮಗ್ರ ವ್ಯಕ್ತಿತ್ವ
ಶಿಕ್ಷಣ ಸಂಸ್ಥೆಯು ಒದಗಿಸುವ ಎಲ್ಲ  ರೀತಿಯ ಅವಕಾಶಗಳನ್ನು ಉಪಯೋಗಿಸಿಕೊಂಡು ಸಮಗ್ರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಪ್ರತಿಯೊಬ್ಬ ವಿದ್ಯಾರ್ಥಿಯೂ ಬದ್ಧರಾಗಿರಬೇಕು. ಆಗ ಮಾತ್ರ ಸಮಾಜದಲ್ಲಿ ಗುರುತಿಸಿಕೊಳ್ಳುವ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.

ಸಕ್ರಿಯವಾಗಿ ಭಾಗವಹಿಸಿ
ಪ್ರತಿಯೊಂದು ಶಿಕ್ಷಣ ಸಂಸ್ಥೆಯೂ ತನ್ನದೇ ಆದ ರೀತಿಯಲ್ಲಿ ವೈಶಿಷ್ಟ Âಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ತೊಡಗಿಕೊಳ್ಳುತ್ತವೆ. ಇಂದಿನ ಕ್ರೆಡಿಟ್‌ ಆಧಾರಿತ ಸೆಮಿಸ್ಟರ್‌ ಪದ್ಧತಿಯಲ್ಲಿ ಉತ್ತಮ ಫಲಿತಾಂಶ ಪಡೆಯುವ ಉದ್ದೇಶದಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಅನಿವಾರ್ಯ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಒದಗಿಸಲಾದ ವಿವಿಧ ಸಹ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಾದ ಎನ್‌ಸಿಸಿ, ಎನ್‌ಎಸ್‌ಎಸ್‌, ರೋವರ್-ರೇಂಜರ್, ಕ್ರೀಡಾ ಚಟುವಟಿಕೆಗಳು, ಪತ್ರಿಕೋದ್ಯಮ, ಲಲಿತ ಕಲೆಗಳು, ರಂಗ ಕಲೆಗಳು, ಸಾಹಿತ್ಯ ಚಟುವಟಿಕೆಗಳು, ಮಾನವ ಸಂಪನ್ಮೂಲ ಅಭಿವೃದ್ಧಿ, ಗ್ರಾಹಕ ಶಿಕ್ಷಣ, ಪರಿಸರ ಶಿಕ್ಷಣ, ರೆಡ್‌ ಕ್ರಾಸ್‌ ಮೊದಲಾದವುಗಳ ಕುರಿತು ಸಂಬಂಧಪಟ್ಟ ಸಂಯೋಜಕರು ಮಾಹಿತಿ ನೀಡಿದರು. ಅನಂತರ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಭಾಗ ವಹಿಸಿದರು.

Advertisement

ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕ ಪ್ರೊ| ಎ. ಪಿ. ರಾಧಾಕೃಷ್ಣ ಸ್ವಾಗತಿಸಿ, ಕಾಲೇಜಿನಲ್ಲಿ ನಡೆಸಲಾಗುವ ವಿವಿಧ ಸರ್ಟಿಫಿಕೇಟ್‌ ಕೋರ್ಸ್‌ಗಳ ಕುರಿತು ಮಾಹಿತಿ ನೀಡಿದರು. ಸಹ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಘಟಕದ ಸಂಯೋಜಕ ಪ್ರೊ| ಉದಯ ಕೆ. ಉಪಸ್ಥಿತರಿದ್ದರು.ಉಪನ್ಯಾಸಕ ಪ್ರಶಾಂತ್‌ ರೈ ಕಾರ್ಯಕ್ರಮ ನಿರ್ವ ಹಿಸಿದರು.

ಜ್ಞಾನ ಮತ್ತು ಅನುಭವಗಳಿಕೆಗೆ ಶಿಕ್ಷಣ
ಕಾಲೇಜಿನ ಪ್ರಾಂಶುಪಾಲ ಪ್ರೊ| ಲಿಯೊ ನೊರೊನ್ಹ  ಮಾತನಾಡಿ, ಶಿಕ್ಷಣವೆಂದರೆ ಕೇವಲ ವಿದ್ಯಾಲಯದಲ್ಲಿ ನಡೆಸುವಂತಹ ಪರೀಕ್ಷೆ, ದೊರೆಯುವ ಪ್ರಮಾಣಪತ್ರಗಳಿಗೆ ಮಾತ್ರವೇ ಸೀಮಿತವಾಗಿರದೇ, ಹತ್ತು ಹಲವು ಉತ್ತಮ ವಿಷಯಗಳ ಬಗ್ಗೆಯೂ ಜ್ಞಾನ ಮತ್ತು ಅನುಭವವನ್ನು ಗಳಿಸುವುದಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next