Advertisement

ಉಗ್ರ ಭೀತಿ, ಆತಂಕ ನಿವಾರಣೆಯೇ ಗುರಿ

11:08 PM Sep 02, 2021 | Team Udayavani |

ಕಾಬೂಲ್‌/ಹೊಸದಿಲ್ಲಿ: ಅಫ್ಘಾನಿಸ್ಥಾನದ ನೆಲವನ್ನು ಭಾರತ ವಿರೋಧಿ ಕೃತ್ಯಗಳಿಗೆ ಬಳಕೆಯಾಗದಂತೆ ತಡೆಯುವುದೇ ಕೇಂದ್ರದ ಮೊದಲ ಆದ್ಯತೆಯಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಗಚಿ ಹೇಳಿದ್ದಾರೆ.

Advertisement

ಹೊಸದಿಲ್ಲಿಯಲ್ಲಿ ಗುರುವಾರ ಮಾತನಾಡಿದ ಅವರು, ತಾಲಿಬಾನ್‌ ಸರಕಾರಕ್ಕೆ ಮಾನ್ಯತೆ ನೀಡುವ ಬಗ್ಗೆ ಈಗಿನ ಹಂತದಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ  ಎಂದರು. ದೋಹಾ ದಲ್ಲಿ ತಾಲಿಬಾನ್‌ಗಳ ರಾಜಕೀಯ ನಿಯೋಗದ ಜತೆಗೆ ಮಾತನಾಡಿದ್ದ ಸಂದರ್ಭದಲ್ಲಿ ಭಾರತದ ವಿರುದ್ಧ ಅಫ್ಘಾನಿಸ್ಥಾನದ ನೆಲವನ್ನು ದುರ್ಬಳಕೆ ಮಾಡಿ, ಭಯೋತ್ಪಾ  ದನ ಕೃತ್ಯಗಳಿಗೆ ಕುಮ್ಮಕ್ಕು ನೀಡುವ ಅವಕಾಶ ಸೃಷ್ಟಿಗೆ ಬಿಡಬಾರದು ಎಂಬುದನ್ನು ಮನವರಿಕೆ ಮಾಡ ಲಾಗಿತ್ತು.  ದೋಹಾ ಮಾತುಕತೆ ಯಲ್ಲಿ ಭಾರತೀಯರ ಸುರ ಕ್ಷತೆಯ ಬಗ್ಗೆ ಕೂಡ ಚರ್ಚಿಸಲಾ ಗಿದೆ ಎಂದರು. ತಾಲಿಬಾನ್‌ ಮುಖಂಡರು ಯಾವ ರೀತಿ ಸರಕಾರ ರಚಿಸಲಿದ್ದಾರೆ ಎಂಬ ಅಂಶ ಹೊಸದಿಲ್ಲಿಗೆ ಗೊತ್ತಾಗಿಲ್ಲ ಎಂದರು ಬಗಚಿ. ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ಸದ್ಯಕ್ಕೆ ನಡೆಯುತ್ತಿಲ್ಲ. ಹೀಗಾಗಿ ಭಾರತೀ ಯರನ್ನು ಸ್ವದೇಶಕ್ಕೆ ಕರೆತರುವುದು ಸಾಧ್ಯವಾಗುತ್ತಿಲ್ಲ ಎಂದರು.

ಲೆಕ್ಕ ಹಾಕುತ್ತಿದೆ ತಾಲಿಬಾನ್‌: ಅಫ್ಘಾನಿಸ್ಥಾನದಲ್ಲಿ ಸರಕಾರ ರಚನೆಗೆ ತಾಲಿಬಾನ್‌ ಮುಂದಡಿಯಿಟ್ಟಿರುವಂತೆಯೇ, ತಾಲಿ ಬಾನ್‌ ಆಡಳಿತದ ಕುರಿತು ಭಾರತ ಸರಕಾರದ ನಿಲುವು ಏನಿರಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ. ತಾಲಿಬಾ ನ್‌ನ ಪ್ರಮುಖ ನಾಯಕರಾದ ಶೇರ್‌ ಮೊಹಮ್ಮದ್‌ ಅಬ್ಟಾಸ್‌ ಸ್ಟಾನಿಕ್‌ಝೈ ಮತ್ತು ಅನಸ್‌ ಹಕ್ಕಾನಿ ಈ ಕುರಿತು ಪರಿಶೀಲನೆ ನಡೆಸಲಾರಂಭಿಸಿದ್ದಾರೆ.

ಹಕ್ಕಾನಿ ಜಾಲದ ಸ್ಥಾಪಕ ಜಲಾಲುದ್ದೀನ್‌ ಹಕ್ಕಾನಿಯ ಪುತ್ರನಾದ ಅನಸ್‌ ಹಕ್ಕಾನಿ, ಕಾಬೂಲ್‌ ಮತ್ತು ಹೊಸದಿಲ್ಲಿ ಯಲ್ಲಿ ರುವ ಮಧ್ಯಸ್ಥಿಕೆದಾರರೊಂದಿಗೆ ನಿರಂತರ ಸಂಪರ್ಕದಲ್ಲಿ ದ್ದಾನೆ. ತಾಲಿಬಾನ್‌ ಕುರಿತು ಭಾರತ ಸರಕಾರದ ಯೋಚನೆ ಗಳೇನು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾನೆ. ಆ ಮಾಹಿತಿಯ ಅನ್ವಯ, ಭಾರತ ಮತ್ತು ತಾಲಿಬಾನ್‌ ನಡುವೆ ಅಧಿಕೃತ ಮಾತುಕತೆಯೇನಾದರೂ ನಡೆಯುವುದಿದ್ದರೆ ಅದು ಸೆಪ್ಟಂಬರ್‌ ಅಂತ್ಯದಲ್ಲಿ ಎಂದು ಹೇಳಲಾಗಿದೆ. ಬಾಂಧವ್ಯ ಬೆಳೆಸಲು ಭಾರತ ಸರಕಾರವೇನಾದರೂ ಷರತ್ತುಗಳನ್ನು ಹಾಕಿದಲ್ಲಿ, ನಾವೂ ಕೂಡ ಭಾರತಕ್ಕೆ ಕೆಲವು ಷರತ್ತುಗಳನ್ನು ಹಾಕಲಿದ್ದೇವೆ ಎಂದು ಹಕ್ಕಾನಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಚೀನ ಕುತಂತ್ರ: ನಿಕ್ಕಿ ಹ್ಯಾಲೆ ಎಚ್ಚರಿಕೆ: ಅಫ್ಘಾನಿಸ್ಥಾನದಿಂದ ವಾಪಸಾದರೂ ಅಮೆರಿಕವು ಚೀನದ ಮೇಲೆ ಒಂದು ಕಣ್ಣಿಡಲೇಬೇಕು. ಏಕೆಂದರೆ, ಅಫ್ಘಾನ್‌ನ ಬಾಗ್ರಾಮ್‌ ವಾಯು ನೆಲೆ ಯಲ್ಲಿ ನಿಯಂತ್ರಣ ಸಾಧಿಸಲು ಚೀನ ಯತ್ನಿಸಬಹುದು. ಬಳಿಕ ಭಾರತದ ವಿರುದ್ಧ ಕುಕೃತ್ಯಗಳನ್ನು ನಡೆಸಲು ಪಾಕಿಸ್ಥಾನಕ್ಕೆ ಬೆಂಬಲ ನೀಡಬಹುದು ಎಂದು ನಿಕ್ಕಿ ಹ್ಯಾಲೆ ಎಚ್ಚರಿಸಿದ್ದಾರೆ. ವಿಶ್ವಸಂಸ್ಥೆಯಲ್ಲಿ  ಅಮೆರಿಕದ ಮಾಜಿ ರಾಯಭಾರಿಯಾಗಿರುವ ಹ್ಯಾಲೆ, “ಅಫ್ಘಾನ್‌ನಿಂದ ಅಮೆರಿಕದ ಸೇನೆಯನ್ನು ಹಿಂಪಡೆಯಲು ಅಧ್ಯಕ್ಷ  ಬೈಡೆನ್‌ ಕೈಗೊಂಡ ನಿರ್ಧಾರದಿಂದಾಗಿ ಅಮೆರಿಕದ ಮಿತ್ರರಾಷ್ಟ್ರಗಳು ಕೂಡ ನಮ್ಮ ಮೇಲಿನ ನಂಬಿಕೆ ಕಳೆದುಕೊಂಡವು.  ಈಗ ಅಮೆರಿಕಕ್ಕೆ ಹಲವು ಸವಾಲುಗಳಿವೆ. ದೇಶವಾಸಿಗಳನ್ನು ರಕ್ಷಿಸವುದು ಮತ್ತು ದೇಶದ ಸೈಬರ್‌ ಭದ್ರತೆ ಬಲಿಷ್ಠ ವಾಗಿರುವಂತೆ ನೋಡಿಕೊಳ್ಳ ಬೇಕಾದ್ದು ಸರಕಾರದ ಕರ್ತವ್ಯ ವಾಗಿದೆ’ ಎಂದರು.

Advertisement

ಸುದ್ದಿವಾಚಕಿಯರು ವಾಪಸ್‌: ಅಫ್ಘಾನಿಸ್ಥಾನದ ಟೋಲೋ ಟಿವಿಯಲ್ಲಿ ಮಹಿಳಾ ಸುದ್ದಿವಾಚಕಿಯರು ಕರ್ತವ್ಯ ನಿರ್ವಹಿಸಲು ಮರಳಿದ್ದಾರೆ. ಈ ಬಗ್ಗೆ ಟಿವಿ ಚಾನೆಲ್‌ನ ಆಡಳಿತ ಮಂಡಳಿಯ ನಿರ್ದೇಶಕ ಸಾದ್‌ ಮೊಹ್ಸೇನಿ ದೃಢಪಡಿಸಿದ್ದಾರೆ.

ಅತಿಕ್ರಮಣ ಸರಿ: ಬುಷ್‌ :

9/11ರ ದಾಳಿ ಬಳಿಕ ಅಫ್ಘಾನಿಸ್ಥಾನವನ್ನು ಅತಿಕ್ರಮಣ ಮಾಡುವ ತಮ್ಮ ನಿರ್ಧಾರವನ್ನು  ಅಂದಿನ ಅಧ್ಯಕ್ಷರಾಗಿದ್ದ ಜಾರ್ಜ್‌ ಡಬ್ಲ್ಯು. ಬುಷ್‌ ಸಮರ್ಥಿಸಿದ್ದಾರೆ. ಈ ಮೂಲಕ “ಅಮೆರಿಕನ್ನರನ್ನು ರಕ್ಷಿಸುವುದೇ’ ನಮ್ಮ ಆದ್ಯತೆ ಯಾಗಿತ್ತು ಎಂದಿದ್ದಾರೆ.  ಅಮೆರಿಕದ ಅವಳಿ ಕಟ್ಟಡಗಳ ಮೇಲೆ ಅಲ್‌ಕಾಯಿದಾ ನಡೆಸಿದ ದಾಳಿಯಲ್ಲಿ 2,996 ಮಂದಿ ಮೃತ ಪಟ್ಟಿ ದ್ದರು. ಈ ದಾಳಿಗೆ 20 ವರ್ಷ ತುಂಬುತ್ತಿರುವ ಹಿನ್ನೆಲೆ ಯಲ್ಲಿ “9/11: ಇನ್‌ಸೈಡ್‌ ದಿ ಪ್ರಸಿಡೆಂಟ್ಸ್‌ ವಾರ್‌ ರೂಂ’ ಎಂಬ ಹೊಸ ಸಾಕ್ಷ್ಯಚಿತ್ರದಲ್ಲಿ ಮಾತನಾಡಿ ರುವ ಬುಷ್‌, “ನಾನು ಆಗ ಕೆಲವೊಂದು ಪ್ರಮುಖ ನಿರ್ಧಾರ ಗಳನ್ನು ಕೈಗೊಳ್ಳಬೇಕಾ ಯಿತು. ಅಮೆರಿಕನ್ನ ರನ್ನು ರಕ್ಷಿಸುವ ಏಕೈಕ ಗುರಿ ನನ್ನದಾಗಿತ್ತು. ಹಾಗಾಗಿ ನಾನು ಮಾಡಿದ್ದು ಸರಿ. ನಾನು ಕೈಗೊಂಡ ನಿರ್ಧಾರಗಳಿಗೆ ಬದ್ಧ ನಾಗಿದ್ದೇನೆ. ಆ ನಿರ್ಧಾರದ ಬಳಿಕ ಅಮೆರಿಕದ ಮೇಲೆ ಬೇರೆ ದಾಳಿ ನಡೆದಿಲ್ಲ’ ಎಂದಿದ್ದಾರೆ.

ವಿಕಿರಣ ವ್ಯವಸ್ಥೆ ಮೂಲಕ ತಪಾಸಣೆ :

ಅಫ್ಘಾನಿಸ್ಥಾನದಲ್ಲಿನ ಪರಿಸ್ಥಿತಿ ಹಿನ್ನೆಲೆಯಲ್ಲಿ ಪಂಜಾಬ್‌ನ ಅಟ್ಟಾರಿಯಲ್ಲಿರುವ ಭಾರತ-ಪಾಕ್‌ ಗಡಿಯಲ್ಲಿ ದೇಶದ ಮೊದಲ ವಿಕಿರಣ ವ್ಯವಸ್ಥೆ ಮೂಲಕ ವಾಹನ ತಪಾಸಣೆ (ರೇಡಿಯೇಶನ್‌ ಡಿಟೆಕ್ಷನ್‌ ಇಕ್ವಿಪ್‌ಮೆಂಟ್‌) ಅಳವಡಿಸಲಾಗಿದೆ. ಆ ವ್ಯವಸ್ಥೆಯ ಮೂಲಕವೇ ಅಫ್ಘಾನಿಸ್ಥಾನದಿಂದ ರಸ್ತೆ ಮಾರ್ಗದ ಮೂಲಕ ಬರುವ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next