Advertisement
ಹತ್ತಾರು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಇಲ್ಲಿನ ಜೆಸಿಐ ಸಂಸ್ಥೆ ಈ ಬಾರಿ ಜೆಸಿರೇಟ್‌ಗಳು ಯಕ್ಷಗಾನ ಪ್ರದರ್ಶಿಸುವ ದೈರ್ಯ ಮಾಡಿತ್ತು.ಬಹುತೇಕವಾಗಿ ಕಲೆಯಲ್ಲಿ ಅಷ್ಟೇನೂ ತೊಡಗಿಸಿಕೊಳ್ಳದೆ ಬೇರೆ ಬೇರೆ ಉದ್ಯೋಗದಲ್ಲಿರುವ ಇಲ್ಲಿನ ಸ್ತ್ರೀಯರು ಇತ್ತೀಚಿನ ಯಕ್ಷಗಾನದ ಹೊಸತನಗಳ ಆಸಕ್ತಿಯಿಂದ ಈ ಪ್ರದರ್ಶನದ ಮನಸ್ಸು ಮಾಡಿದ್ದರು.ಗುರುಗಳಾದ ಶ್ರೀಧರ ದೇವಾಡಿಗ ಬಿಜೂರು ತರಬೇತಿ ನೀಡಿದ್ದರು.ಮಾಯಾಪುರಿ ಪ್ರಸಂಗ ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿತ್ತು. ಬಾಲ ಕಲಾವಿದರಾದ ನಿರ್ಮಿತ್, ಸಮೃದ್ದ, ಲೋಹಿತ್, ನಿಶ್ಚಿತ್‌ರ ಸಮಯ ಪ್ರಜ್ಞೆಯ ಅಭಿನಯ ಆಸಕ್ತಿ ಭವಿಷ್ಯದಲ್ಲಿ ಉತ್ತಮವಾಗಿ ಮೂಡಿಬರುವಂತಿತ್ತು.ರಂಗದ ಚೌಕಟ್ಟಿಗೆ ಕಿಂಚಿತ್ತು ಲೋಪ ಬರದಂತೆ ಪ್ರದರ್ಶನ ನೀಡಿದ್ದರು.
Advertisement
ಗ್ರಾಮೀಣ ಭಾಗದಲ್ಲಿ ಮೇಳೈಸಿದ ಮಹಿಳೆಯರ ಯಕ್ಷ ವೈಭವ
12:30 AM Mar 22, 2019 | |
Advertisement
Udayavani is now on Telegram. Click here to join our channel and stay updated with the latest news.