Advertisement

KRS ಈಗಲೂ ಭರ್ತಿ: 30 ವರ್ಷಗಳ ದಾಖಲೆ

01:45 AM Dec 29, 2024 | Team Udayavani |

ಮಂಡ್ಯ: ಜಿಲ್ಲೆಯ ಜೀವನಾಡಿಯಾಗಿ ರುವ ಕೃಷ್ಣರಾಜ ಸಾಗರ ಜಲಾಶಯ 30 ವರ್ಷಗಳ ಬಳಿಕ ಡಿಸೆಂಬರ್‌ನಲ್ಲೂ ಗರಿಷ್ಠ ಮಟ್ಟ ಕಾಯ್ದುಕೊಳ್ಳುವ ಮೂಲಕ ದಾಖಲೆ ಬರೆದಿದೆ. 5 ತಿಂಗಳುಗಳಿಂದ ನಿರಂತರ ವಾಗಿ ಜಲಾಶಯ ತುಂಬಿಯೇ ಇದೆ. ಕಳೆದ ವರ್ಷ ಮಳೆ ಕೊರತೆಯಿಂದ ಜಲಾಶಯ ತುಂಬಿರ ಲಿಲ್ಲ. ಇದ ರಿಂದ ಜಿಲ್ಲೆಯ ಜನ ಭೀಕರ ಬರ ಎದು ರಿಸುವಂತಾಗಿತ್ತು. ಆದರೆ ಪ್ರಸ್ತುತ ವರ್ಷ ವರುಣನ ಕೃಪೆಯಿಂದ ಜಲಾ ಶಯ ಭರ್ತಿಯಾಗಿದ್ದು, ರೈತ ಸಮೃದ್ಧ ಬೆಳೆ ಬೆಳೆಯಲು ಸಾಧ್ಯವಾಗಿದೆ.

Advertisement

ಪ್ರಸ್ತುತ ವರ್ಷ ಜು. 25ರಂದು ಜಲಾಶಯ ಮೊದಲ ಬಾರಿ ಭರ್ತಿ ಯಾಗಿತ್ತು. ಅಂದಿನಿಂದ ಇಂದಿನವರೆಗೆ 157 ದಿನಗಳ ಕಾಲ ನಿರಂತರವಾಗಿ ಗರಿಷ್ಠ ಮಟ್ಟ ಕಾಯ್ದುಕೊಂಡಿದೆ. 2022 ರಲ್ಲಿ 114 ದಿನ ಹಾಗೂ 2009 ರಲ್ಲಿ 146 ದಿನ ಗರಿಷ್ಠ ಮಟ್ಟ ಕಾಯ್ದು ಕೊಂಡಿತ್ತು. 2021ರಲ್ಲೂ ನಿರಂತರ ವಾಗಿ ಭರ್ತಿಯಾಗಿದ್ದರೂ ಡಿಸೆಂಬರ್‌ ವೇಳೆಗೆ 124 ಅಡಿಗೆ ಇಳಿದಿತ್ತು. ಮುಂಗಾರು, ಹಿಂಗಾರು ಮಳೆ ಉತ್ತಮ ಕಾವೇರಿ ನದಿ ವ್ಯಾಪ್ತಿಯಲ್ಲಿ ಈ ಬಾರಿ ನಿರಂತರವಾಗಿ ಮಳೆ ಸುರಿದಿತ್ತು.

ಇದರಿಂದ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದಿತ್ತು. ಸಾಮಾನ್ಯವಾಗಿ ನವೆಂಬರ್‌ ವೇಳೆಗೆ ಮುಂಗಾರು, ಹಿಂಗಾರು ಮಳೆ ಕಡಿಮೆಯಾಗುತ್ತಿತ್ತು. ಆದರೆ ಈ ಬಾರಿ ಮುಂಗಾರು ಮಳೆ ಅಬ್ಬರಿಸಿದ್ದು, ಹಿಂಗಾರು ಕೂಡ ಉತ್ತಮವಾಗಿದೆ. ಇದರಿಂದ ಒಳಹರಿವು ನಿರಂತರವಾಗಿ ಹರಿದು ಬಂದಿದ್ದರಿಂದ ಜಲಾಶಯ ಭರ್ತಿಯಾಗಿದೆ.

ಕೆರೆಕಟ್ಟೆಗಳು ಭರ್ತಿ
ಜಲಾಶಯ ತುಂಬಿದ್ದರಿಂದ ಜಿಲ್ಲೆಯ ಕೆರೆಕಟ್ಟೆ ಗಳಿಗೆ ನಾಲೆಗಳ ಮೂಲಕ ನೀರು ಹರಿಸಲಾಗಿದೆ. ರೈತರ ಬೆಳೆಗೆ ಹಾಗೂ ಜನ-ಜಾನುವಾರುಗಳ ಕುಡಿಯುವ ನೀರಿಗೂ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಕಾವೇರಿ ನೀರಾವರಿ ನಿಗಮ, ಸಣ್ಣ ನೀರಾವರಿ ಇಲಾಖೆ ಹಾಗೂ ಜಿ.ಪಂ. ವ್ಯಾಪ್ತಿಯ ಎಲ್ಲ ಕೆರೆಕಟ್ಟೆಗಳು ಶೇಕಡಾವಾರು ಭರ್ತಿಯಾಗಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ತಮಿಳುನಾಡಿಗೆ 280 ಟಿಎಂಸಿ ನೀರು
ಜಲಾಶಯ ನಿರಂತರವಾಗಿ ಗರಿಷ್ಠ ಮಟ್ಟ ಕಾಯ್ದುಕೊಂಡ ಹಿನ್ನೆಲೆಯಲ್ಲಿ ನದಿಗೆ ನೀರು ಹರಿಸಲಾಗಿತ್ತು. ಇದರಿಂದ ತಮಿಳುನಾಡಿಗೆ 280 ಟಿಎಂಸಿ ನೀರು ಹರಿದಿದೆ. ತಮಿಳುನಾಡಿಗೆ ನೀರು ಹಂಚಿಕೆ ಆಧಾರದ ಮೇಲೆ 177.25 ಹರಿಸಬೇಕಿತ್ತು. ಆದರೆ 102.75 ಟಿಎಂಸಿ ಹೆಚ್ಚುವರಿ ನೀರು ಹರಿದು ಹೋಗಿದೆ. ಜಿಲ್ಲೆಯ ರೈತರ ಬೆಳೆಗಳಿಗೆ ವಿಶ್ವೇಶ್ವರಯ್ಯ ಹಾಗೂ ಇತರ ನಾಲೆಗಳ ಮೂಲಕ ನೀರು ಹರಿಸಲಾಗಿದೆ.

Advertisement

ಈ ಬಾರಿ ಉತ್ತಮ ಮಳೆಯಾದದ್ದರಿಂದ ಜಲಾಶಯ ಭರ್ತಿಯಾಗಿದೆ. ಬೇಸಗೆಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ರೈತರ ಬೇಸಗೆ ಬೆಳೆಗೆ ನೀರು ಬಿಡುವ ಬಗ್ಗೆ ಐಸಿಸಿ ಸಭೆ ನಿರ್ಣಯ ಕೈಗೊಳ್ಳಲಿದೆ. ಶೇ. 99ರಷ್ಟು ಬೇಸಗೆ ಬೆಳೆಗೆ ನೀರು ಸಿಗುವ ಸಾಧ್ಯತೆ ಇದೆ. ಒಟ್ಟಾರೆ ಈ ಬಾರಿ ನೀರಿಗೆ ಸಮಸ್ಯೆ ಯಾಗುವುದಿಲ್ಲ.
-ಕಿಶೋರ್‌, ಕಾರ್ಯಪಾಲಕ ಇಂಜಿನಿಯರ್‌, ಕೆಆರ್‌ಎಸ್‌

ಎಚ್‌. ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next