Advertisement

ನವರಾತ್ರಿ ವೈಭವ

08:42 PM Oct 04, 2019 | Lakshmi GovindaRaju |

ಯಶವಂತಪುರದ ಶ್ರೀ ಮಹಾಯಾಗ ಕ್ಷೇತ್ರ ಶ್ರೀ ಗಾಯತ್ರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ನಡೆಯುತ್ತಲಿದೆ. ನವರಾತ್ರಿ ಪ್ರಯುಕ್ತ, ಶ್ರೀ ಶತ ಚಂಡಿಕಾ ಹೋಮ, ಶ್ರೀ ಚಂಡಿಕಾ ಪಾರಾಯಣ, ದುರ್ಗಾಸಪ್ತಶತಿ ಪಾರಾಯಣ, ಬನ್ನಿವೃಕ್ಷ ಪೂಜೆ, ಶ್ರೀ ಪಂಚಮುಖೀ ಗಾಯತ್ರೀ ದೇವಿಯ ಉತ್ಸವಾದಿ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.

Advertisement

ಪ್ರತಿನಿತ್ಯ ಶ್ರೀ ಗಾಯತ್ರಿ ಮಾತೆ ಹಾಗೂ ಪರಿವಾರ ದೇವತೆಗಳಿಗೆ ಪಂಚಾಮೃತ ಅಭಿಷೇಕ, ಕಾಶಿಲಿಂಗ ದರ್ಶನ, ವಿಶೇಷ ಅಲಂಕಾರ ಸೇವೆ ಏರ್ಪಡಿಸಲಾಗಿದೆ. ಶ್ರೀ ಚಿದಂಬರ ದೀಕ್ಷಿತ್‌ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಪ್ರತಿ ದಿನ ಸಂಜೆ 6 ಗಂಟೆಯಿಂದ, ಸಂಗೀತ, ನೃತ್ಯ ಕಾರ್ಯಕ್ರಮಗಳು ಜರುಗಲಿವೆ.

ಎಲ್ಲಿ?: ಶ್ರೀ ಮಹಾಯಾಗ ಕ್ಷೇತ್ರ ಗಾಯತ್ರಿ ದೇವಸ್ಥಾನ, ಯಶವಂತಪುರ
ಯಾವಾಗ?: ಅ.8ರವರೆಗೆ
ಪ್ರವೇಶ: ಉಚಿತ
ಹೆಚ್ಚಿನ ಮಾಹಿತಿಗೆ: 886862222

Advertisement

Udayavani is now on Telegram. Click here to join our channel and stay updated with the latest news.

Next