Advertisement
ಪ್ರತಿ ವರ್ಷವೂ ಹೊಸ ತಿರುಗಾಟ ಆರಂಭ ವಾಗುವ ಹೊತ್ತಿಗೆ ಯಕ್ಷಗಾನ ಪ್ರೇಮಿಗಳಲ್ಲಿ ಈ ಬಾರಿಯ ಹೊಸ ಪ್ರಸಂಗಗಳು ಯಾವುವು? ಕಲಾವಿದರು ಅದೇ ಮೇಳದಲ್ಲಿದ್ದಾರಾ? ಬೇರೆ ಮೇಳಗಳಿಗೆ ಸೇರಿದ್ದಾರೆಯೇ ಎಂಬ ಕುತೂಹಲಗಳು ಗರಿಗೆದರುತ್ತವೆ.
ಧರ್ಮಸ್ಥಳ ಮೇಳ ನ.3ರಿಂದ ಕ್ಷೇತ್ರದಲ್ಲಿ ಸೇವೆಯಾಟ ಆರಂಭಿಸಿದ್ದು, ನ.21ರಿಂದ ಕ್ಷೇತ್ರದ ಹೊರಗಡೆಗೆ ತಿರುಗಾಟ ಹೊರಡಲಿದೆ. ಕಮಲಶಿಲೆ ಮೇಳ ನ.5ರಂದು ಸೇವೆಯಾಟ ಆರಂಭಿಸಿದ್ದು ಬೆಂಗಳೂರಿನಲ್ಲಿ ನ. 17ರ ವರೆಗೆ ಬೆಂಗಳೂರಿನಲ್ಲಿ ಪ್ರದರ್ಶನ ನೀಡಲಿದೆ. ನ. 5ರಂದು ಹಟ್ಟಿಯಂಗಡಿ, ಪಾವಂಜೆ ಮೇಳ ನ.13, ಕೋಟ ಮೇಳ ನ.17, ಮಾರಣಕಟ್ಟೆ ಮೇಳ ನ.18ರಿಂದ, ಸಾಲಿಗ್ರಾಮ ನ. 18ರಿಂದ, ಹನುಮಗಿರಿ ಮೇಳ ನ.20ರಿಂದ, ಪೆರ್ಡೂರು ನ.20ರಿಂದ ತಿರುಗಾಟ ಶುರು ಮಾಡಲಿದೆ.
ಗೆಜ್ಜೆಗಿರಿ ಮೇಳ ನ.22ರಂದು ಸೇವೆಯಾಟ ಮಾಡಿ ಡಿ.25ರ ವರೆಗೆ ಗೋವಾ, ಗುಜರಾತ್, ಮುಂಬಯಿ ಮೊದಲಾದೆಡೆ ಪ್ರದರ್ಶನ ನೀಡಲಿದೆ.
Related Articles
ಈ ಬಾರಿ ದೇವದಾಸ ಈಶ್ವರಮಂಗಲ ಅವರು ರಚಿಸಿರುವ ಪ್ರಶ್ನಾರ್ಥಕ ಚಿಹ್ನೆ (?) ಪ್ರಸಂಗವೂ ಪ್ರದರ್ಶನವಾಗಲಿದ್ದು, ಕುತೂಹಲ ಮೂಡಿಸಿದೆ.
Advertisement
ಈ ವರ್ಷದ ಹೊಸ ಪ್ರಸಂಗಗಳು-ಧರ್ಮಸ್ಥಳ: ವಿಶ್ವವಂದ್ಯ ವಿನಾಯಕ, ಗಂಧರ್ವ ಕನ್ಯೆ
– ಸಾಲಿಗ್ರಾಮ: ಸಾಹಿತಿ ಪನ್ನಾಲಾಲ್ ಪಠೇಲರ ಗುಜರಾತಿ ಕಾದಂಬರಿ ಆಧಾರಿತ, ದೇವದಾಸ ಈಶ್ವರ ಮಂಗಲ ಅವರ ಶುಭಲಕ್ಷಣ -ಹನುಮಗಿರಿ: ವಾಸುದೇವ ರಂಗಾ ಭಟ್ ಕಥಾ ಸಂಯೋಜನೆ, ಪ್ರಸಾದ್ ಮೊಗೆಬೆಟ್ಟು ಪದ್ಯ ರಚನೆಯ ಸಾಕೇತ ಸಾಮ್ರಾ
-ಪೆರ್ಡೂರು: ಪ್ರೊ| ಪವನ್ ಕಿರಣ್ಕೆರೆ ಅವರ ಪರ್ಣಕುಟೀರ
-ಪಾವಂಜೆ: ಭಾರತ ವರ್ಷಿಣಿ
– ಹಿರಿಯಡಕ: ದೇವದಾಸ ಈಶ್ವರ ಮಂಗಲ ಅವರ ಜಾಜಿ ಮಲ್ಲಿಗೆ, ಪ್ರಶಾಂತ್ ಸಿ.ಕೆ. ರಚನೆ, ದಯಾನಂದ ಕೋಡಿಕಲ್ ಪದ್ಯ ರಚನೆಯ ಮಣಿ ಮಂಚೊದ ಮಂತ್ರಮೂರ್ತಿ
-ಸೌಕೂರು: ಕೊಕ್ಕರ್ಣೆ ಸದಾಶಿವ ಅಮೀನ್ ರಚನೆಯ ಭಗವತಿ ಭೈರವಿ, ಕೌಲಾಳಿ ಚಂದ್ರಶೇಖರ ಶೆಟ್ಟಿ ರಚನೆಯ ಮಂಗಳ ತರಂಗಿಣಿ, ಪ್ರಮೋದ್ ಪೂಜಾರಿ ಬೆಳ್ವೆ ರಚನೆಯ ಚಿತ್ತೇರಿ ಶ್ರೀವನದುರ್ಗೆ
-ಕಳವಾಡಿ: ಡಾ| ಬಸವರಾಜ ಶೆಟ್ಟಿಗಾರ್ ಅವರ ಕಳವಾಡಿ ಮಾರಿಕಾಂಬಾ ಕ್ಷೇತ್ರ ಮಹಾತೆ¾, ಯಕ್ಷಾನಂದ ಕುತ್ಪಾಡಿ ಅವರ ಕಾರುಣ್ಯ ಸ್ವಾಮಿ ಕೊರಗಜ್ಜ, ಶುಭಾಶಯ ಜೈನ್ ರಚನೆಯ ಕೆಂಪುಕೊಳ, ವಿದ್ಯಾಶ್ರೀ ಆಚಾರ್ಯ ಯಳಜಿತ್ ಅವರ ನಾಗ ನಿರ್ಮಲೆ
-ಸಸಿಹಿತ್ಲು: ದೇವದಾಸ ಈಶ್ವರ ಮಂಗಲ ಅವರ ಪೊರ್ಲುದ ಮರ್ಲೆದಿ, ವಸಂತ ಬಂಟ್ವಾಳ ರಚನೆ, ಕುಳಾಯಿ ಮಾಧವ ಭಂಡಾರಿ ಪದ್ಯ ರಚನೆಯ ಕಲ್ಜಿಗದ ಸತ್ಯ
-ನೀಲಾವರ: ಎಂ.ಕೆ. ರಮೇಶ ಆಚಾರ್ಯರ ಕನ್ನಡ ಕುಲರತ್ನ, ರಾಘವೇಂದ್ರ ಪೂಜಾರಿ ಗಿಳಿಯಾರು ರಚನೆಯ ಕಡಲ ಕಣ್ಮಣಿ -ಗೋಳಿಗರಡಿ: ಸುರೇಶ್ ಕುಲಾಲ್ ಹಂದಿಗದ್ದೆ ರಚನೆಯ ಶುಭ ಸಂಭ್ರಮ, ಶಿವಶಕ್ತಿ ಗುಳಿಗ, ಬಿ.ಕೆ. ಶ್ರೀನಿವಾಸ ಸಾಲಿಯಾನ್ ಬೋಂದೆಲ್ ರಚನೆಯ ಕಾರ್ಣಿಕದ ಕೊರಗಜ್ಜ, ಡಾ| ಬಸವರಾಜ್ ಶೆಟ್ಟಿಗಾರ್ ರಚನೆಯ ಜೋಗಿ ಜೆಡ್ಡು ಜಟ್ಟಿಗೇಶ್ವರ ಕ್ಷೇತ್ರ ಮಹಾತ್ಮೆ
-ಸಿಗಂದೂರು: ಪ್ರೊ| ಪವನ್ ಕಿರಣ್ಕೆರೆ ಅವರ ರಾಗ ಚಂದ್ರಿಕೆ
-ಗೆಜ್ಜೆಗಿರಿ: ದೇವದಾಸ ಈಶ್ವರ ಮಂಗಲ ಅವರ ಕಾಲ ಕಲ್ಜಿಗ, ನಿತಿನ್ ಕುಮಾರ್ ತೆಂಕಕಾರಂದೂರು ರಚನೆ, ಯೋಗೀಶ್ ರಾವ್ ಚಿಗುರುಪಾದೆ ಪದ್ಯರಚನೆಯ ಕುಲದೈವೊ ಬ್ರಹ್ಮ, ನಿತಿನ್ ಕುಮಾರ್ ತೆಂಕಕಾರಂದೂರು ರಚನೆ, ಮಾಧವ ಭಂಡಾರಿ ಕುಳಾಯಿ ಪದ್ಯರಚನೆಯ ಎಡೂ¾ರ ಮೊಗೇರ ಸತ್ಯೊಲು -ಹಾಲಾಡಿ: ಪ್ರೊ| ಪವನ್ ಕಿರಣ್ಕೆರೆ ರಚನೆಯ ಶುಭ ನಕ್ಷತ್ರ
-ಮೆಕ್ಕೆಕಟ್ಟು ಮೇಳ: ದೇವದಾಸ ಈಶ್ವರ ಮಂಗಲ ಅವರ ಪ್ರಶ್ನಾರ್ಥಕ ಚಿಹ್ನೆ, ಅಂಬಿಕಾ ವಕ್ವಾಡಿ ಕಥೆ, ಬೇಳೂರು ವಿಷ್ಣುಮೂರ್ತಿ ನಾಯಕ್ ಪದ್ಯ ರಚನೆಯ ಪ್ರೇಮ ಪಂಜರ ಇನ್ನೊಂದು ಡೇರೆ ಮೇಳ ಆರಂಭ
ತೆಂಕುತಿಟ್ಟಿನಲ್ಲಿ ಪ್ರಸ್ತುತ ಯಾವುದೇ ಡೇರೆ ಮೇಳ ಇಲ್ಲ. ಬಡಗುತಿಟ್ಟಿನಲ್ಲಿ ಪೆರ್ಡೂರು ಹಾಗೂ ಸಾಲಿಗ್ರಾಮ ಡೇರೆ ಮೇಳಗಳಿದ್ದು, ಕಳೆದ ಬಾರಿ ಬಯಲಾಟ ಮೇಳವಾಗಿದ್ದ ಮೆಕ್ಕೆಕಟ್ಟು ಮೇಳ ಈ ಬಾರಿ ಡೇರೆ ಮೇಳವಾಗಲಿದೆ. ಬೈಂದೂರಿನ ಕಳವಾಡಿಯಿಂದ ನೂತನ ಮೇಳವೊಂದು ಆರಂಭವಾಗಲಿದೆ. ಪಾವಂಜೆ ಎರಡನೆ ಮೇಳ ಆರಂಭವಾಗುವ ಪ್ರಸ್ತಾವನೆ ಇದೆಯಾದರೂ ಇನ್ನೂ ಅಧಿಕೃತ ತೀರ್ಮಾನ ನಡೆದಿಲ್ಲ. 7,200 ಆಟ,
ದೇವಿ ಮಹಾತ್ಮೆಯೇ 1,000!
ಕರಾವಳಿಯಲ್ಲಿ 40ಕ್ಕೂ ಅಧಿಕ ಮೇಳ ಗಳಿದ್ದು, ಪ್ರತಿ ವರ್ಷ 7,200ಕ್ಕೂ ಅಧಿಕ ಆಟಗಳ ಪ್ರದರ್ಶನ ನಡೆಯುತ್ತದೆ. ಪೌರಾಣಿಕ, ಕ್ಷೇತ್ರ ಮಹಾತ್ಮೆಗಳ ಜತೆ, ಸಾಮಾಜಿಕ ಕಥಾ ಹಂದರದ ಪ್ರಸಂಗಗಳು ಮೇಳೈಸುತ್ತವೆ. 7,200ಕ್ಕೂ ಅಧಿಕ ಪ್ರದರ್ಶ ನಗಳಲ್ಲಿ 1,000ಕ್ಕೂ ಅಧಿಕ ಶ್ರೀ ದೇವಿ ಮಹಾತ್ಮೆಯೇ ಇರುತ್ತದೆ. ಕಟೀಲಿನ 6 ಮೇಳಗಳು ತಲಾ 100ರಂತೆ 600 ಪ್ರದ ರ್ಶನ ನೀಡಿದರೆ, ಮಂದಾರ್ತಿ, ಪಾವಂಜೆ, ಹನುಮಗಿರಿ ಸಹಿತ ಇತರ ಮೇಳಗಳು 400ಕ್ಕೂ ಅಧಿಕ ಪ್ರದರ್ಶನ ನೀಡುತ್ತವೆ.