ಪ್ರತಿಭೆಯನ್ನು ಒರೆಗೆ ಹಚ್ಚಲು ಕಿರುಚಿತ್ರಗಳು ಉತ್ತಮ ವೇದಿಕೆಯಾಗುತ್ತಿವೆ. ಇತ್ತೀಚೆಗೆ ಕಿರುಚಿತ್ರದ ಮೂಲಕವೇ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ, ಭರವಸೆ ಮೂಡಿಸಿ ದೊಡ್ಡ ಚಿತ್ರಗಳನ್ನು ನಿರ್ಮಿಸಲು ಮುಂದಾಗಿರುವ ಹೊಸಪ್ರತಿಭೆಗಳ ಉದಾಹರಣೆಗಳು ಚಿತ್ರರಂಗದಲ್ಲಿ ಸಾಕಷ್ಟು ಸಿಗುತ್ತವೆ. ಈ ಸಾಲಿಗೆ ಈಗ ಮತ್ತೂಂದು ಕಿರುಚಿತ್ರ ಸೇರ್ಪಡೆಯಾಗುತ್ತಿದೆ. ಅದರ ಹೆಸರು “ದಿ ಗಿಲ್ಟ್’.
Advertisement
“ಬೆಂದಕಾಳೂರು ಪಿಕ್ಚರ್’ ಎಂಬ ಸಂಸ್ಥೆಯ ಮೂಲಕ ಚಿತ್ರರಂಗದ ಕಡೆಗೆ ಆಸಕ್ತಿಯನ್ನು ಬೆಳೆಸಿಕೊಂಡ, ಸಮಾನ ಮನಸ್ಕರು – ಸಮಾನ ವಯಸ್ಕರು ಸೇರಿಕೊಂಡು “ದಿ ಗಿಲ್ಟ್’ ಕಿರುಚಿತ್ರವನ್ನು ನಿರ್ಮಿಸಿದ್ದಾರೆ. ಸುಮಾರು ಮೂರು ವರ್ಷಗಳ ಹಿಂದೆ ಆರಂಭವಾದ “ಬೆಂದಕಾಳೂರು ಪಿಕ್ಚರ್’ ಸಂಸ್ಥೆ ಪ್ರತಿಭಾವಂತ ಯುವಕರ ತಂಡವನ್ನು ಕಟ್ಟಿಕೊಂಡು, ಕಿರುಚಿತ್ರಗಳು, ವೆಬ್ ಸೀರಿಸ್‌ಗಳ ನಿರ್ಮಾಣದಲ್ಲಿ ತೊಡಗಿಕೊಂಡಿದೆ. ಇದರ ಜತೆಗೆ ಬೇರೆ ಸಂಸ್ಥೆಗಳ, ತಂಡಗಳ ಚಿತ್ರ ನಿರ್ಮಾಣ ಕಾರ್ಯಕ್ಕೂ ಕೈ ಜೋಡಿಸುತ್ತಿದೆ.
ಚಿತ್ರದ ಇತರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಪ್ರಥಮಬಾರಿಗೆ ಮಲ್ಟಿಫ್ಲೆಕ್ಸ್‌ನಲ್ಲಿ ತೆರೆಕಂಡಿದ್ದ “ಇಂಡಿಪೆಂಡೆಂಟ್’, “ನೆವರ್ ಎಂಡ್’ ಮೊದಲಾದ ಕಿರುಚಿತ್ರಗಳನ್ನು ನಿರ್ದೇಶಿಸಿದ್ದ ಧೀರಜ್ ಈ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಕೇವಲ ಒಂದು ದಿನದಲ್ಲಿ ಈ ಕಿರುಚಿತ್ರದ ಚಿತ್ರೀಕರಣ ನಡೆಸಲಾಗಿದ್ದು, ಗುಣಮಟ್ಟದಲ್ಲಿ ಕೊರತೆಯಾಗಬಾರದು ಎಂಬ ಕಾರಣಕ್ಕೆ ಚಿತ್ರ ನಿರ್ಮಾಣದಲ್ಲಿ ಬಳಸುವ ಅತ್ಯಾಧುನಿಕ ಕ್ಯಾಮರ,
ಮತ್ತಿತರ ಪರಿಕರಗಳನ್ನೆ ಇಲ್ಲಿ ಬಳಸಿಕೊಳ್ಳಲಾಗಿದೆ. ಇನ್ನು “ದಿ ಗಿಲ್ಟ್’ ಕಿರುಚಿತ್ರವನ್ನು ನೋಡಿ ಮೆಚ್ಚಿರುವ ನಟ ಶ್ರೀಮುರಳಿ ಇದನ್ನು ತಮ್ಮ ಅಧಿಕೃತ ಯೂ-ಟ್ಯೂಬ್ ಚಾನಲ್ ಮೂಲಕ ಬಿಡುಗಡೆ ಮಾಡಿ, ತಂಡಕ್ಕೆ ಶುಭ ಹಾರೈಸಿದ್ದಾರೆ. ಇನ್ನು “ದಿ ಗಿಲ್ಟ್’ ಕಿರುಚಿತ್ರಕ್ಕೆ ಪ್ರೇಕ್ಷಕರಿಂದ, ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ಖುಷಿಯಲ್ಲಿ ತಂಡ ಶಾರ್ಟ್ ಫಿಲಂನಿಂದ ಫಿಚರ್ ಫಿಲಂನತ್ತ ಗಮನ ಹರಿಸಿದ್ದು, ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳನ್ನು ಆರಂಭಿಸಿದೆ.