ಶರೀರವನ್ನು ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಸಚಿವರು, ಶಾಸಕರು, ಸಂಸದರು,
ಮಠಾಧೀಶರು ಸೇರಿದಂತೆ ಗಣ್ಯರು ಆಗಮಿಸಿ ಅವರ ಅಂತಿಮ ದರ್ಶನ ಪಡೆದರು. ಈ ಮಧ್ಯೆ, ಅಂತ್ಯಸಂಸ್ಕಾರಕ್ಕೆ ಜಿಲ್ಲಾಡಳಿತ
ನಗರ ಸಮೀಪವೇ ಎರಡು ಮೂರು ಕಡೆ ಜಾಗ ತೋರಿಸಿತಾದರೂ ಕುಟುಂಬ ಸದಸ್ಯರು ಒಪ್ಪಲಿಲ್ಲ. ಹೀಗಾಗಿ, ಬುಧವಾರ ಮಧ್ಯಾಹ್ನ 2 ಗಂಟೆಯಾದರೂ ಜಾಗದ ಸಮಸ್ಯೆ ಬಗೆಹರಿಯಲಿಲ್ಲ. ನರಸಮ್ಮ ಕುಟುಂಬ ಸದಸ್ಯರು ನಗರದ ಹತ್ತಿರದಲ್ಲಿಯೇ ಅಂತಿಮ
ಸಂಸ್ಕಾರ ಮಾಡಬೇಕು. ಇದಕ್ಕಾಗಿ ಒಂದು ಎಕರೆ ಜಾಗ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಕೊನೆಗೆ ನಗರ ಸಮೀಪದ ಗಂಗಸಂದ್ರ ಸ್ಮಶಾನದ ಸಮೀಪ ಒಂದು ಎಕರೆ ಜಾಗ ನೀಡಲು ಜಿಲ್ಲಾಡಳಿತ ನಿರ್ಧರಿಸಿತು. ಕುಟುಂಬದವರು ಒಪ್ಪಿಗೆ ಸೂಚಿಸಿದ್ದರಿಂದ ಸರಕಾರಿ ಗೌರವಗಳೊಂದಿಗೆ ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
Advertisement