Advertisement

ರುದ್ರಾಭಿಷೇಕ ಮೂಲಕ ರಾಮಮಂದಿರಕ್ಕೆ ಅಡಿಪಾಯ

02:26 AM Jun 11, 2020 | Sriram |

ಅಯೋಧ್ಯೆ: ಭಾರತೀಯರ ಶತಮಾನಗಳ ಕನಸಿನ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ರಾಮಜನ್ಮಭೂಮಿಯಲ್ಲಿ ಬುಧವಾರ ಚಾಲನೆ ನೀಡಲಾಯಿತು.

Advertisement

ಇಲ್ಲಿನ ಕುಬೇರ ತಿಲ ದಲ್ಲಿ ಬೆಳಗ್ಗೆ ರುದ್ರಾಭಿಷೇಕ, ಇನ್ನಿತರ ಪೂಜಾ ಕೈಂಕರ್ಯ ಗಳನ್ನು ನೆರವೇರಿಸುವ ಮೂಲಕ ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಲಾಯಿತು.

ಈ ಸಂದರ್ಭ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷ ಮಹಾಂತ ಕೆ.ಎನ್‌. ದಾಸ್‌ ಮಾತನಾಡಿ, ಅಡಿಗಲ್ಲು ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಆಗಮಿಸಬೇಕಿತ್ತು. ಆದರೆ ಕೊರೊನಾ ಬಿಕ್ಕಟ್ಟು ಆರಂಭವಾದ ಬಳಿಕ ಅವರು ಯಾವುದೇ ಸಾರ್ವಜನಿಕ ಕಾರ್ಯ ಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ. ಹಾಗಾಗಿ ಈ ಕಾರ್ಯಕ್ರಮಕ್ಕೆ ಅವರು ಬಂದಿಲ್ಲ ಎಂದರು.

ವಿಎಚ್‌ಪಿ ವಿನ್ಯಾಸವೇ ಅಂತಿಮ?
ಮಂದಿರದ ವಿನ್ಯಾಸ ಹೇಗಿರಬೇಕು ಎಂಬ ವಿಚಾರವಾಗಿ ಚರ್ಚೆಗಳು ನಡೆಯುತ್ತಿವೆ. ಈ ಹಿನ್ನೆಲೆ ಯಲ್ಲಿ ನಾನಾ ವಿನ್ಯಾಸಗಳನ್ನು ಪರಿಗಣಿಸಲಾಗುತ್ತಿದೆ. 1992ರಲ್ಲಿ ವಿಶ್ವ ಹಿಂದೂ ಪರಿಷತ್‌ ತನ್ನದೇ ಆದ ಮಂದಿರ ವಿನ್ಯಾಸವೊಂದನ್ನು ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್‌ನ ಮುಂದಿಟ್ಟಿತ್ತು. ಆ ವಿನ್ಯಾಸ ರಚಿಸಿದ್ದು ಹೆಸರಾಂತ ವಾಸ್ತುಶಿಲ್ಪಿ ಚಂದ್ರಕಾಂತ ಸೋಮಪುರ್‌. ಹಾಗಾಗಿ ಆ ವಿನ್ಯಾಸಕ್ಕೆ ಅವರ ಹೆಸರನ್ನೇ ಇಡಲಾಗಿದೆ. ದೇಶದ ತುಂಬೆಲ್ಲ ರಾಮಮಂದಿರ ಆಂದೋಲನ ಪ್ರಖರವಾಗಿ ರೂಪುಗೊಂಡಿದ್ದ ದಿನಗಳಲ್ಲಿ ಅದೇ ವಿನ್ಯಾಸದ ರಾಮಮಂದಿರದ ಚಿತ್ರವನ್ನು ಎಲ್ಲ ಕರಪತ್ರಗಳಲ್ಲಿ, ಕ್ಯಾಲೆಂಡರ್‌ಗಳಲ್ಲಿ ಮುದ್ರಿಸಲಾಗಿತ್ತು. ಜನರೂ ಅದನ್ನು ಮೆಚ್ಚಿಕೊಂಡಿದ್ದರು. ಅದೇ ವಿನ್ಯಾಸದಲ್ಲೇ ರಾಮಮಂದಿರ ಮೂಡಿಬರಲಿ ಎಂಬುದು ಅನೇಕರ ಅಭಿಪ್ರಾಯವಾಗಿದೆ.

“ನಗರ’ ವಿನ್ಯಾಸವೂ ಪರಿಗಣನೆಯಲ್ಲಿ
ಮತ್ತೂಂದು ಮೂಲದ ಪ್ರಕಾರ, ಮಂದಿರಕ್ಕೆ “ನಗರ’ ಎಂಬ ವಿನ್ಯಾಸವನ್ನೂ ಪರಿಗಣಿಸಲಾಗುತ್ತಿದೆ. ಉತ್ತರ ಹಾಗೂ ಪಶ್ಚಿಮ ಭಾರತದಲ್ಲಿ “ನಗರ’ ಮಾದರಿಯ ಕಟ್ಟಡಗಳು ಹೆಚ್ಚು ಪ್ರಸಿದ್ಧಿ. ಅದರಲ್ಲಿ ಉಕ್ಕು, ಸಿಮೆಂಟ್‌ ಬಳಕೆಯಿರುವುದಿಲ್ಲ. ಅಮೃತಶಿಲೆ ಗಳನ್ನೇ ಸ್ಲ್ಯಾಬ್ ಗಳನ್ನಾಗಿ ಪರಿವರ್ತಿಸಿ ಅವುಗಳನ್ನು ಜೋಡಿಸಿ ಮಂದಿರಗಳನ್ನು ನಿರ್ಮಿಸಲಾಗುತ್ತದೆ. ಈ ಶೈಲಿಯೂ ಪರಿಗಣನೆಯಲ್ಲಿದೆ ಎನ್ನಲಾಗಿದೆ.

Advertisement

ಮೋದಿ ನಿರ್ಧರಿಸುತ್ತಾರೆ
ಮೇಲ್ಕಂಡ ಎರಡೂ ಬಗೆಯ ವಿನ್ಯಾಸ ಗಳ ಲ್ಲೊಂ ದರ ಆಯ್ಕೆಯನ್ನು ಮೋದಿ ಅವರ ವಿವೇಚನೆಗೆ ಬಿಡಲಾಗಿದೆ. ಸದ್ಯ ದಲ್ಲೇ ಎರಡೂ ವಿನ್ಯಾಸಗಳನ್ನು ಕೊಂಡೊಯ್ದು ಅವರ ಸಲಹೆ ಕೇಳಲಾಗುತ್ತದೆ. ಭೇಟಿಯ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಮಹಾಂತ ಕೆ.ಎನ್‌. ದಾಸ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next