ಈ ಮೂಲಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ತಮ್ಮ ಪ್ರತಿಭೆ ಅನಾವರಣ ಮಾಡಬೇಕೆಂದು ಜಿಲ್ಲಾಧಿಕಾರಿ ಡಾ| ರಾಮ್ ಪ್ರಸಾತ್ ಮನೋಹರ್ ಕಿವಿಮಾತು ಹೇಳಿದರು.
Advertisement
ನಗರದ ಜಿಲ್ಲಾ ಕ್ರೀಡಾಂಗಣದ ಕ್ರೀಡಾ ಸಂಕೀರ್ಣದಲ್ಲಿರುವ ಒಳಾಂಗಣ ಬ್ಯಾಡ್ಮಿಂಟನ್ ಅಂಕಣದಲ್ಲಿ ಬುಧವಾರ ಬಳ್ಳಾರಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್, ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್, ಜಿಲ್ಲಾಡಳಿತ, ಪೊಲೀಸ್ ಜಿಂಖಾನಾಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ ಯೋನೆಕ್ಸ್ ಸನ್‌ರೈಸ್ ಕರ್ನಾಟಕ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಚಾಂಪೀಯನ್‌ಶಿಪ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು. ಉನ್ನತ ಮಟ್ಟದ ಪಂದ್ಯಾವಳಿಗಳಿಂದ ಕ್ರೀಡಾಪಟುಗಳಿಗೆ ಸವಾಲುಗಳನ್ನು ಎದುರಿಸುವ ಅವಕಾಶ ದೊರೆತು ಅವರಿಗೆ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ವೇದಿಕೆಯಾಗುತ್ತದೆ. ಸ್ಥಳೀಯ ಕ್ರೀಡಾ ಪ್ರೇಮಿಗಳಿಗೆ ಇಂತಹ ರಾಜ್ಯ ಮಟ್ಟದಕ್ರೀಡಾಪಟುಗಳ ಕ್ರೀಡಾಕೌಶಲ್ಯ ನೋಡಲು ಕ್ರೀಡಾಪಟುಗಳಿಗೆ ಬ್ಯಾಡ್ಮಿಂಟನ್ ಕ್ರೀಡಾ ಕೌಶಲ್ಯ ನೇರವಾಗಿ ಕಲಿಯಬಹುದಾದ ಹಾಗೂ ಕ್ರೀಡಾಕಾರರೊಂದಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕೀಡಾಕೂಟಗಳ ಕುರಿತು ಚರ್ಚಿಸಲು ಇದು ಉತ್ತಮ ವೇದಿಕೆಯಾಗಿದೆ ಎಂದರು.
ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ವೇದಿಕೆ ಒದಗಿಸಲು ಪೊಲೀಸ್ ಜಿಂಖಾನಾಗೆ ಸಂತಸವೆನಿಸಿದೆ. ಹೈದ್ರಾಬಾದ್ ಕರ್ನಾಟಕ
ಪ್ರದೇಶದಲ್ಲಿ ಇಂತಹ ಕ್ರೀಡಾಕೂಟಗಳು ನಡೆಯುವುದು ಅಪರೂಪ. ಸ್ಥಳೀಯ ಕ್ರೀಡಾಪಟುಗಳು ರಾಜ್ಯ ಮಟ್ಟದ
ಕ್ರೀಡಾಪಟುಗಳೊಂದಿಗೆ ಬೆರೆತು ಅವರಿಂದ ಸಲಹೆ, ಕ್ರೀಡಾಕೌಶಲ್ಯ ಕಲಿಯುವ ಉತ್ಸಾಹ ತೋರಬೇಕು ಎಂದು ಸಲಹೆ ನೀಡಿದರು. ಉದ್ಯಮಿ ಡಾ| ಡಿ.ಎಲ್.ರಮೇಶ್‌ಗೋಪಾಲ್ ಮಾತನಾಡಿ, ಉತ್ತಮ ಜೀವನ ನಡೆಸಲು ಕ್ರೀಡೆಗಳು ಸಹಕಾರಿಯಾಗಿವೆ. ಜಿಲ್ಲೆಯಲ್ಲಿ ಆಯೋಜನೆಯಾಗುವ ಇಂತಹ ಕ್ರೀಡಾಕೂಟಗಳಿಗೆ ತಾವು ಸದಾ ಬೆಂಬಲಿಸುವುದಾಗಿ ತಿಳಿಸಿದರು. ಹಿರಿಯ ಲೆಕ್ಕಪರಿಶೋಧಕ ಜಯಪ್ರಕಾಶ್ ಜೆ.ಗುಪ್ತ ಮಾತನಾಡಿ, 1999ರ ನಂತರ ಬಳ್ಳಾರಿಯಲ್ಲಿ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಪಂದ್ಯಾವಳಿ ನಡೆಯುತ್ತಿದೆ. ನಗರದಲ್ಲಿ ಕ್ರೀಡಾ ಚಟುವಟಿಕೆ ನಡೆಸಲು ಅತ್ಯುತ್ತಮ ಮೂಲ ಸೌಕರ್ಯ ಹೆಚ್ಚಿದ್ದು, ಭವಿಷ್ಯದಲ್ಲಿ ರಾಷ್ಟ್ರ ಮಟ್ಟದ ಕ್ರೀಡೆಗಳನ್ನು ಬಿಡಿಎಎ ಆಯೋಜಿಸುವಂತಾಗಬೇಕೆಂದರು. ಉದ್ಯಮಿ ಗೋವಿಂದ ನಾರಾಯಣ ಸರಡಾ ಮಾತನಾಡಿ, ಪೊಲೀಸ್ ಜಿಂಖಾನಾದ ಕ್ರೀಡಾ ಸೌಲಭ್ಯಗಳಿಂದ ತಾವು ಟ್ ಆಗಿದ್ದೇನೆ. ಇದರಿಂದ ಸೂರ್ತಿಗೊಂಡು ಈ ಪಂದ್ಯಾವಳಿಗೆ ಪ್ರಾಯೋಜಕತ್ವ ನೀಡಿದ್ದೇನೆ. ಇಂತಹ ಕ್ರೀಡಾ ಸೌಲಭ್ಯ ಕಲ್ಪಿಸಿರುವ ಪೊಲೀಸ್ ಜಿಂಖಾನಾ ಹಾಗೂ ಬಿಡಿಎಎಗೆ ಋಣಿಯಾಗಿದ್ದೇನೆ ಎಂದರು.
Related Articles
ಡಾ| ಅನೂರಾಧಾ ಪ್ರಾರ್ಥಿಸಿದರು. ಬಿಡಿಎಎ ಕಾರ್ಯದರ್ಶಿ ಡಾ| ರಾ ಕಾ ಆಚಾರ್ಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪಂದ್ಯಾವಳಿಯ ಸಂಚಾಲಕ ಎಂ.ಅಹಿರಾಜ್ ವಂದಿಸಿದರು.
Advertisement