Advertisement

ಆಹಾರ ಪರೀಕ್ಷೆಗೂ ಬಂತು ಸೆನ್ಸಾರ್‌ ತಂತ್ರಜ್ಞಾನ

06:00 AM Jan 21, 2018 | |

ಬೆಂಗಳೂರು: ನೀವು ಸೇವಿಸುತ್ತಿರುವ ಆಹಾರ ಅಪ್ಪಟ ಸಾವಯವ ಹೌದೋ, ಅಲ್ಲವೋ ಎಂಬುದನ್ನು ಪ್ರಮಾಣೀ ಕರಿಸಲಿಕ್ಕೂ ಸೆನ್ಸಾರ್‌ ಆಧರಿತ ತಂತ್ರಜ್ಞಾನ ಬಂದಿದೆ.

Advertisement

ಈ ಸ್ಮಾರ್ಟ್‌ ಅಗ್ರಿಕಲ್ಚರ್‌ ವ್ಯವಸ್ಥೆಯಡಿ ಜಮೀನುಗಳಲ್ಲಿ ಸೆನ್ಸಾರ್‌ಗಳನ್ನು ಅಳವಡಿಸಲಾಗುತ್ತದೆ. ಅದ ಸಹಾಯದಿಂದ ಬಿತ್ತನೆ ಹಂತದಿಂದ ಪ್ಯಾಕಿಂಗ್‌ ಹಂತದವರೆಗೂ ಬೆಳೆಗಳ ಮೇಲೆ ಸಂಪೂರ್ಣ ನಿಗಾ ವಹಿಸಲಾಗುತ್ತದೆ. ಈ ಬೆಳೆಗಳಿಗೆ “ಬಾರ್‌ ಕೋಡ್‌'(ಕ್ಯುಆರ್‌) ನೀಡಲಾಗುತ್ತದೆ.  ಇದರಿಂದ ಉತ್ಪನ್ನದ ಸಮಗ್ರ ಇತಿಹಾಸವೇ ಗ್ರಾಹಕರಿಗೆ ಲಭ್ಯವಾಗಲಿದೆ.

ಚೈನಾ ಮೂಲದ ಸಿಇಎಸ್‌ ಮತ್ತು ನಗರದ ಹನಿವೆಲ್‌ ಕಂಪನಿ ಜಂಟಿಯಾಗಿ ಈ ವ್ಯವಸ್ಥೆಯನ್ನು ರೂಪಿಸಿವೆ. ರಾಜ್ಯ ಸರ್ಕಾರದ ಸಹಯೋಗದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಪ್ರಾಯೋಗಿಕವಾಗಿ ಸಾವಿರ ಎಕರೆ ಪ್ರದೇ ಶದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲು ಉದ್ದೇಶಿಸ ಲಾಗಿದ್ದು, ಭತ್ತ ಮತ್ತು ಕಾಳುಗಳ ಮೇಲೆ ಈ ಪ್ರಯೋಗ ನಡೆಯಲಿದೆ.

ಆದರೆ, ನಿರ್ದಿಷ್ಟ ಪ್ರದೇಶವನ್ನು ಇನ್ನೂ ಗುರುತಿಸಿಲ್ಲ. 2-3 ತಿಂಗಳಲ್ಲಿ ರೈತರ ಜಮೀನಿಗೆ ಈ ತಂತ್ರಜ್ಞಾನ ಬರಲಿದೆ ಎಂದು ಹನಿವೆಲ್‌ ನಿರ್ದೇಶಕ (ಸೆನ್ಸಾರ್‌ ವಿಭಾಗ) ಆನಂದ್‌ ಮಾಹಿತಿ ನೀಡಿದ್ದಾರೆ. ಈಗ ಎಲ್ಲೆಡೆ ಸಾವಯವ ಉತ್ಪನ್ನಗಳ ಟ್ರೆಂಡ್‌ ಇದೆ. ಆದರೆ, ಮಾರುಕಟ್ಟೆಗೆ “ಸಾವಯವ’ ಹೆಸರಿನಲ್ಲಿ ಲಗ್ಗೆ ಇಡುತ್ತಿರುವ ಉತ್ಪನ್ನಗಳನ್ನು ಪತ್ತೆಹಚ್ಚುವುದು ಸವಾಲಾಗಿದೆ. ಒಂದಿಲ್ಲೊಂದು ರೀತಿಯಲ್ಲಿ ರಾಸಾಯನಿಕ ಅಂಶ ನುದೆ. ಈ ನಿಟ್ಟಿನಲ್ಲಿ ಸೆನ್ಸಾರ್‌ ಆಧರಿತ ಪ್ರಮಾ ಣೀ ಕರಿಸುವ”ಸ್ಮಾರ್ಟ್‌ ಕೃಷಿ’ ತಂತ್ರಜ್ಞಾನ ನೆರವಿಗೆ ಬರಲಿದೆ.

ಮುಂದುವರಿದ ಭಾಗ: ಈಗಾಗಲೇ ಸೆನ್ಸಾರ್‌ ಆಧರಿತ ಕೃಷಿ ಚಟುವಟಿಕೆ ಚಾಲ್ತಿಯಲ್ಲಿದೆ. ಇದರಲ್ಲಿ ಸೆನ್ಸಾರ್‌ಗಳನ್ನು ಅಳವಡಿಸಿ, ಅದರ ಸಹಾಯದಿಂದ ಭೂಮಿಯಲ್ಲಿ ತೇವಾಂಶ, ಅಗತ್ಯಕ್ಕೆ ತಕ್ಕಂತೆ ಗಿಡಗಳಿಗೆ ನೀರಿನ ಪೂರೈಕೆ, ಮಣ್ಣಿನ ಗುಣಮಟ್ಟ, ರೋಗಬಾಧೆ ಸೇರಿದಂತೆ ಹಲವು ಅಂಶಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಆದರೆ, ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಆ ಬೆಳೆಗಳಿಗೆ ಬಾರ್‌ಕೋಡ್‌ ಕೊಡಲಾಗುತ್ತದೆ. ಅದರ ಸಹಾಯದಿಂದ ಬೆಳೆಯನ್ನು 
ಸಾವಯವ ಹೌದೋ, ಅಲ್ಲವೋ ಎಂದು ಪ್ರಮಾಣೀಕರಿಸಬಹುದು. ಅಷ್ಟೇ ಅಲ್ಲ, ಉದ್ದೇಶಿತ ಬೆಳೆಯನ್ನು ಯಾರ ಜಮೀನಿನಲ್ಲಿ ಹಾಗೂ ಯಾವಾಗ ಬೆಳೆಯಲಾಗಿದೆ? ಎಂಬುದನ್ನೂ ತಿಳಿಯಬಹುದು.

Advertisement

ಚೈನಾದಲ್ಲಿ 2,500 ಎಕರೆಯಲ್ಲಿ ಅನುಷ್ಠಾನ: 2008ರಲ್ಲೇ ಸಿಇಎಸ್‌ ಕಂಪನಿ ಆರಂಭಗೊಂಡಿದೆ. ಸಾವಿರ
ಎಕರೆಯಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲು ಸುಮಾರು ಒಂದು ಲಕ್ಷ ರೂ.ವರೆಗೂ ಖರ್ಚಾಗುತ್ತದೆ. ಸದ್ಯ ಚೈನಾದಲ್ಲಿ ಸುಮಾರು 2,500 ಎಕರೆ ಜಮೀನಿನಲ್ಲಿ ಈ ತಂತ್ರಜ್ಞಾನ ಅಳವಡಿಸಲಾಗಿದೆ ಎಂದು ಸಿಇಎಸ್‌ನ ಕರೆನ್‌ ಝಾ ತಿಳಿಸಿದರು.

ರಾಜ್ಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸಾವಯವ ಕೃಷಿ ಭೂಮಿ ಇದ್ದು, ವೇಗವಾಗಿ ವಿಸ್ತರಣೆಯೂ ಆಗುತ್ತಿದೆ. ಬೆನ್ನಲ್ಲೇ ಉತ್ಪನ್ನಗಳ ಪ್ರಮಾಣೀಕರಣದ ಬಗ್ಗೆ ಗೊಂದಲ ಗಳೂ ಇವೆ. ಈ ನಿಟ್ಟಿನಲ್ಲಿ ತಂತ್ರಜ್ಞಾನ ನೆರವಿಗೆ ಬರಲಿದೆ ಎನ್ನುತ್ತಾರೆ ಹನಿವೆಲ್‌ನ ಆನಂದ್‌.

– ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next