ಶಹಾಬಾದ: ಬಾಲ್ಯದಿಂದಲೇ ಜಾನಪದದ ಬಗ್ಗೆ ಆಸಕ್ತಿ ಹೊಂದಿದ ಪರಿಣಾಮ ನನ್ನ ಬದುಕಿಗೆ ಜಾನಪದವೇ ಜೀವಾಳ ಮತ್ತು ಜಾನಪದವೇ ಉಸಿರಾಗಿದೆ ಎಂದು ಜಾನಪದ ಕಲಾವಿದ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಗುರುರಾಜ ಹೊಸಕೋಟೆ ಹೇಳಿದರು.
ರವಿವಾರ ಭಂಕೂರ ಗ್ರಾಮದ ಬಸವ ಸಮಿತಿ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ದೇವರು ಜನಪದ ಹಾಡನ್ನು ಬರೆಯುವ ವಿಶೇಷ ಶಕ್ತಿ ನೀಡಿದ್ದಾನೆ. ಇಲ್ಲಿಯ ವರೆಗೆ ಸುಮಾರು 4500 ಹಾಡು ಬರೆದಿದ್ದೇನೆ. 603 ಕ್ಯಾಸೆಟ್‌ಗಳು ಹೊರಬಂದಿವೆ. ಹಲವಾರು ಚಲನಚಿತ್ರ ಹಾಡು ಹಾಡಿದ್ದೇನೆ. ಚಲನಚಿತ್ರಗಳಲ್ಲಿ ನಟಿಸಲು ಅವಕಾಶವೂ ಸಿಕ್ಕಿದೆ. ಆದರೆ ನಾನು ಬರೆದಿರುವ ಹಾಡಿಗೆ ಎಂದೂ ನನ್ನ ಹೆಸರನ್ನು ಹಾಕಿಕೊಂಡಿಲ್ಲ ಎಂದರು.
ಭಂಕೂರ ಗ್ರಾಪಂ ಸದಸ್ಯ ಈರಣ್ಣ ಕಾರ್ಗಿಲ್ ಮಾತನಾಡಿ, ಜಾನಪದ ಗಾರುಡಿಗ ಗುರುರಾಜ ಹೊಸಕೋಟೆ ಅಚ್ಚುಕಟ್ಟಾಗಿ ಹಾಡು ರಚಿಸಿ ಹಾಡುತ್ತಾರೆ ಎಂದು ಹೇಳಿದರು.
ಬಸವ ಸಮಿತಿ ಅಧ್ಯಕ್ಷ ಅಮೃತ ಮಾನಕರ್ ಮಾತನಾಡಿ, ಜಾನಪದ ಮಾಂತ್ರಿಕ ಗುರುರಾಜ ಹೊಸಕೋಟೆ ನಮ್ಮ ಸಂಸ್ಥೆ ಬಂದಿರುವುದು ಸೌಭಾಗ್ಯ ಎಂದರು.
ನಂತರ ಗುರುರಾಜ ಹೊಸಕೋಟೆ ಜಾನಪದ ಹಾಡುಗಳನ್ನುಹಾಡಿನೆರೆದವರ ಗಮನ ಸೆಳೆದರು. ಕಲಾವಿದ ನಾಗಣ್ಣ ಹಳ್ಳಿ, ಭಂಕೂರ ಗ್ರಾಂದ ಗಣ್ಯರಾದ ಚನ್ನವೀರಪ್ಪ ಪಾಟೀಲ, ಭಂಕೂರ ಗ್ರಾಪಂ ಸದಸ್ಯ ಲಕ್ಷ್ಮೀಕಾಂತ ಕಂದಗೂಳ ವೇದಿಕೆ ಮೇಲಿದ್ದರು.
ಅಮರಪ್ಪ ಹೀರಾಳ, ಶಾಂತಪ್ಪ ಬಸಪಟ್ಟಣ, ಹಣವಂತ ರಾವ್ ದೇಸಾಯಿ, ಚಂದ್ರಕಾಂತ ಅಲಮಾ, ಮಹಾದೇವ ಮಾನಕರ್, ವೀರಭದ್ರಪ್ಪ ಕಲಶೆಟ್ಟಿ, ಶಿವರಾಜ ಹಡಪದ, ಯಲ್ಲಾಲಿಂಗ ನಾಗೂರೆ, ಮಲ್ಲಿಕಾರ್ಜುನ ಘಾಲಿ, ವೀಣಾ ನಾರಾಯಣ, ರಮೇಶ ಅಳ್ಳೊಳ್ಳಿ, ದತ್ತಾತ್ರೇಯ ಕುಲಕರ್ಣಿ ಹಾಗೂ ಶಿಕ್ಷಕರು ಇದ್ದರು.