Advertisement

ಪರಮಾತ್ಮನ ಪಾದ ಸೇರಿದ ಬೆಟ್ಟದ ಹೂ

05:26 PM Oct 31, 2021 | Team Udayavani |

ಕುದೂರು: ಮಾಗಡಿ ತಾಲೂಕಿನ ಸೋಲೂರು ಆರ್ಯ ಈಡಿಗರ ಮಹಾಸಂಸ್ಥಾನ ಮಠದೊಂದಿಗೆ ಆಗಲಿದ ನಟ ಪುನೀತ್‌ ರಾಜ್‌ಕುಮಾರ್‌ ನಿಕಟ ಸಂಪರ್ಕ ಇಟ್ಟುಕೊಂಡಿದ್ದರು. 2015 ರಲ್ಲಿ ಸೋಲೂರು ಆರ್ಯ ಈಡಿಗರ ಮಠದ ಮೈದಾನದಲ್ಲಿ ಡಾ.ರಾಜ್‌ಕುಮಾರ್‌ ರಂಗಮಂದಿರವನ್ನು ಸ್ವತಃ ಪುನೀತ್‌ ರಾಜ್‌ಕುಮಾರ್‌ ಅವರೇ ಉದ್ಘಾಟಿಸಿದ್ದರು. ತಂದೆಯ ಹೆಸರಿನ ರಂಗಮಂದಿರವನ್ನು ಆರ್ಯ ಈಡಿಗ ಸಂಸ್ಥಾನ ಪೀಠದ ಆಶ್ರಯದಲ್ಲಿ ಉದ್ಘಾಟಿಸುತ್ತಿರುವುದು ನನಗೆ ಸಂತಸ ತಂದಿದೆ. ಇದೊಂದು ಪ್ರಶಾಂತ ವಾತಾವರಣ ಸ್ಥಳ. ಈ ರಂಗಮಂದಿರವನ್ನು ಉತ್ತಮ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳಿ ಎಂದು ಹೇಳಿದ್ದರು. ಈಗ ಅವರು ನಮ್ಮನ್ನು ಅಗಲಿರುವುದು ಅತೀವವಾದ ಸಂಕಟ ತರಿಸಿದೆ ಎಂದು ಆರ್ಯ ಈಡಿಗ ಸಂಘದ ವೆಂಕಟೇಶ್‌ ನೆನೆಪು ಮಾಡಿಕೊಂದು ಕಂಬನಿ ಮಿಡಿದರು.

Advertisement

ಇದನ್ನೂ ಓದಿ:- “ಕೃಷಿ ವಿದ್ಯಾರ್ಥಿಗಳು ಆದರ್ಶ ರೈತರಾಗಬೇಕು’

‘ಸೋಲೂರು ಗ್ರಾಮದಲ್ಲಿ ಆರ್ಯ ಈಡಿಗ ಮಠದ ಉದ್ಘಾಟನೆ ಸಮಾರಂಭಕ್ಕೆ ಬಂದಿದ್ದಾಗ ಡಾ.ರಾಜ್‌ ಕುಮಾರ್‌ ಅವರಲ್ಲಿದ್ದ ವಿನಯತೆಯನ್ನು ಪುನೀತ್‌ ಅವರಲ್ಲಿ ಕಂಡಿದ್ದೆ. ಅವರ ಸರಳ ಗುಣ ಅಚ್ಚರಿ ಮೂಡಿಸಿತು. ಪುನೀತ್‌ ಅವರ ನಡುವಳಿಕೆ ಅನುಕರಣೀಯ. ಅಪ್ಪು ಅಭಿಮಾನಿಗಳಿಗೆ ಮತ್ತು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ.’ ಹೆಚ್‌.ಸಿ.ಬಾಲಕೃಷ್ಣ, ಮಾಜಿ ಶಾಸಕ

‘ಬೆಟ್ಟದ ಹೂವೊಂದು ಪರಮಾತ್ಮನ ಪಾದ ಸೇರಿ ಯುವರತ್ನ ನೀನೇ ವಿನಿಯದ ರಾಜಕುಮಾರ ಎಂದು ಹೇಳಿದಂತಾಗುತ್ತಿದೆ. ಅವರ ಅಗಲಿಕೆಯಿಂದ ನನಗೆ ಅತೀವ ದುಃಖ ತರಿಸಿದೆ.’ –  ಎ.ಮಂಜುನಾಥ್‌, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next