Advertisement

ಮತ್ತೆ  ಹಾರಾಟಕ್ಕೆ ಸಾರಸ್‌; ಎನ್‌ಎಎಲ್‌ ಕನಸು

03:45 AM Feb 17, 2017 | Harsha Rao |

ಬೆಂಗಳೂರು: ತಾಂತ್ರಿಕ ದೋಷದಿಂದಾಗಿ ಎಂಟು ವರ್ಷಗಳ ಹಿಂದೆ ಅಪಘಾತಕ್ಕೀಡಾಗಿ ಸೇವೆ ಸ್ಥಗಿತಗೊಳಿಸಿದ “ಸಾರಸ್‌’ ಯುದ್ಧ ವಿಮಾನ ಒಂದೂವರೆ ತಿಂಗಳಲ್ಲಿ ಮತ್ತೆ ಹಾರಾಟ ಆರಂಭಿಸಲಿದೆ.

Advertisement

ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಹರ್ಷವರ್ಧನ್‌ ಮತ್ತು ನ್ಯಾಷನಲ್‌ ಏರೋಸ್ಪೇಸ್‌ ಲಿಮಿಟೆಡ್‌
(ಎನ್‌ಎಎಲ್‌) ನಿರ್ದೇಶಕ ಜಿತೇಂದ್ರ ಯಾದವ್‌ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ.  ಏರೋ ಇಂಡಿಯಾ ಪ್ರದರ್ಶನದಲ್ಲಿ ಗುರುವಾರ ಮಾತನಾಡಿದ ಅವರು, 2009ರಲ್ಲಿ ನಗರದ ಬಿಡದಿ ಬಳಿ ಅಪಘಾತಕ್ಕೊಳಗಾಗಿ ಮೂವರನ್ನು ಬಲಿ ತೆಗೆದುಕೊಂಡ ಬಳಿಕ ಸಾರಸ್‌ ವಿಮಾನದ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು.

ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ತೂಕ ಹಾಗೂ ವಿಮಾನ ರೆಕ್ಕೆಗೆ ಸಂಬಂಧಪಟ್ಟ ಲೋಪಗಳನ್ನು ಸರಿಪಡಿಸಿಕೊಂಡು
ಅಭಿವೃದ್ಧಿಯಾದ “ಸಾರಸ್‌’ ಎರಡನೇ ಮಾದರಿಯ ಒಟ್ಟಾರೆ ತೂಕ ಮೊದಲ ಮಾದರಿಗಿಂತ 400 ಕೆ.ಜಿ. ಇಳಿಕೆಯಾಗಿತ್ತು. ಬಳಿಕ ಈ ವಿಮಾನವನ್ನು ರಕ್ಷಣಾ ಕಾರ್ಯದಲ್ಲೂ ಬಳಸುವ ಬಗ್ಗೆ ಚಿಂತನೆ ಆರಂಭವಾಯಿತು.

ಅಪಘಾತಕ್ಕೆ ಕಾರಣಗಳೇನು ಎಂಬುದರ ಬಗ್ಗೆ ವಿಸ್ತೃತವಾದ ವರದಿಯನ್ನು ಪಡೆದು ವಿಮರ್ಶೆ ಮಾಡಲಾಗಿದೆ. ಅಪಘಾತಕ್ಕೆ ಕಾರಣವಾಗಿರುವ ದೋಷಗಳನ್ನು ಸರಿಪಡಿಸಿ ನವೀಕರಣ ಮಾಡಲಾಗಿದೆ. ಮುಂದಿನ ಒಂದೂವರೆ ತಿಂಗಳಲ್ಲಿ ಸಾರಸ್‌ ವಿಮಾನ ಹಾರಾಟ ಆರಂಭವಾಗಲಿದೆ. ಸದ್ಯಕ್ಕೆ 14 ಸೀಟುಗಳೊಂದಿಗೆ ಹಾರಾಟ ನಡೆಸಲಾಗುವುದು. ಒಂದು ವರ್ಷದ ಬಳಿಕ 14 ಸೀಟುಗಳನ್ನು 19 ಸೀಟಿಗೆ ಏರಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

 ಸಿಎಸ್‌ಐಆರ್‌ ರಾಷ್ಟ್ರೀಯ ಏರೋಸ್ಪೇಸ್‌ ಪ್ರಯೋಗಾಲಯ ಸಿದ್ಧಪಡಿಸಿರುವ ನೂತನ ಸಾರಸ್‌ನ ಇಂಜಿನ್‌ ಸಾಮರ್ಥ್ಯ
ಹಿಂದಿಗಿಂತಲೂ ಉತ್ತಮಪಡಿಸಲಾಗಿದೆ.ಎಂಜಿನ್‌ ಸಾಮರ್ಥಯ ಹೆಚ್ಚಿಸಲಾಗಿದೆ. ವಿಮಾನದ ರೆಕ್ಕೆ ಸೇರಿದಂತೆ ವಿನ್ಯಾಸ ಬದಲಿಸಲಾಗಿದೆ. ಪೈಲಟ್‌ ಮತ್ತು ವಿನ್ಯಾಸದ ನಡುವೆ ಸಮನ್ವಯ ಕಾಯ್ದುಕೊಳ್ಳುವಂತೆ ರೂಪಿಸಲಾಗಿದೆ. ಹಲವು ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಯಶಸ್ವಿಯಾಗಿದೆ. ಸಾರಸ್‌ ವಿಮಾನವನ್ನು ಭವಿಷ್ಯದಲ್ಲಿ ಮತ್ತೆ ನಾಗರಿಕ ವಿಮಾನವನ್ನಾಗಿ ಪರಿವರ್ತಿಸುವ ಉದ್ದೇಶ ಹೊಂದಲಾಗಿದೆ ಎಂದು ವಿವರಿಸಿದರು. 

Advertisement

ಎನ್‌ಎಎಲ್‌ ಕನಸು
ಎಂಬತ್ತರ ದಶಕದ ಮಧ್ಯಭಾಗದಲ್ಲಿ ಮೂಡಿದ ಚಿಂತನೆಯಂತೆ ಎನ್‌ಎಎಲ್‌ 1991ರಿಂದ ಬಹುಪಯೋಗಿ ನಾಗರಿಕ ಬಳಕೆ ವಿಮಾನದ ಮಾದರಿ ಸಿದ್ಧಪಡಿಸುವ ಕಾರ್ಯ ಆರಂಭಿಸಿತ್ತು. ಇ¨ಕ್ಕೆ ರಷ್ಯಾ ಸಹಭಾಗಿತ್ವ ನೀಡಿತ್ತು. ಬಳಿಕ ರಷ್ಯಾ ಯೋಜನೆಯಿಂದ ಹಿಂದೆ ಸರಿದಿತ್ತು. 1999ರಲ್ಲಿ ಯೋಜನೆಗೆ ಮತ್ತೆ ಚಾಲನೆ ದೊರಕಿತ್ತು. ಅದರಂತೆ ರೂಪುಗೊಂಡ “ಸಾರಸ್‌’ ಎಚ್‌ಎಎಲ್‌ ವಿಮಾನನಿಲ್ದಾಣದಲ್ಲಿ 2004ರ ಮೇ 29ರಂದು ಮೊಟ್ಟ ಮೊದಲ ಹಾರಾಟ ನಡೆಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next