Advertisement
ಪಂಚಭೂತಗಳು ವಿಶ್ವವನ್ನೇ ರೂಪಿಸಿವೆ. ನಮ್ಮಬಾಹ್ಯ ಹಾಗೂ ಅಂತರ್ಯದ ಸೂಕ್ಷ್ಮ ಕಣಗಳು ಕೋಶಗಳು ಚೈತನ್ಯವನ್ನು ಪಡೆಯುವ ಪಡೆಯಲು ನಿಷ್ಕ್ರಿಯಗೊಳ್ಳುವ ವಿಚಾರಗಳು ಪಂಚಭೂತಗಳಿಂದಲೇ ಚಾಲನೆ ಪಡೆಯುತ್ತದೆ. ನಿಮ್ಮ ಸುತ್ತಲೂ ಅಲೌಕಿಕವಾದ ಒಂದು ಪ್ರಭಾವಳಿ ಇದೆ. ಅದು ನಮ್ಮ ವ್ಯಕ್ತಿತ್ವ, ವರ್ಚಸ್ಸು, ಶಕ್ತಿ, ಲವಲವಿಕೆಗಳನ್ನು ಕೊಡುವ, ಕಳೆಯುವ ಮೂಲಕ ನಿಯಂತ್ರಿಸುತ್ತದೆ. ಕುಶಲಮತಿಯಾದವವನು ತನ್ನ ಜ್ಞಾನದಿಂದ ತನ್ನ ಮತ್ತು ಸುತ್ತಲಿನ ಒಳಿತುಗಳಿಗೆ ಕಾರಣವಾಗಬಹುದು.
Related Articles
Advertisement
ಈ ನಮ್ಮ ಪ್ರಭಾವಳಿಯು ಪ್ರತಿಯೊಬ್ಬನಲ್ಲೂ ಪರಿಶುದ್ಧವಾಗಿಯೇ ಇದ್ದು ಅರಿಷಡ್ವರ್ಗಗಳು ಪ್ರಭಾವಳಿಯನ್ನು ಕೆಡಿಸುತ್ತ ವ್ಯಕ್ತಿಯ ವ್ಯಕ್ತಿತ್ವವನ್ನು ಛಿದ್ರಗೊಳಿಸುತ್ತವೆ. ಮನೆಯ ವಾಸ್ತುದೋಷ ನಮ್ಮ ನಾಶಕ್ಕೆ ಪ್ರಧಾನವಾದ ವಂತಿಗೆಯನ್ನು ಕೊಡಲಾರದು. ನೈತಿಕವಾದ ಎತ್ತರವನ್ನು ನಾವು ಸ್ಪಷ್ಟವಾಗಿ ತಡೆದೆವಾದರೆ ವಾಸ್ತುವಿನ ದೋಷ ಗೌಣವಾಗುತ್ತದೆ. ಆದರೆ ಮನೆಯ ಸ್ವತ್ಛತೆ ಪರಿಶುದ್ಧತೆ ವಸ್ತುಗಳ ಚೆಲ್ಲಾಪಿಲ್ಲಿತನವನ್ನು ತಡೆಯಿರಿ.
ಬೆಳಕೇ ಇರದಿದ್ದಲ್ಲಿ ಸೂಕ್ತವಾದ ಬಲುºಗಳನ್ನು ಉರಿಸಿ. ಉರಿಬಿಸಿಲು ಪೂರ್ವದಿಂದ ಕಣ್ಣು ಕುಕ್ಕುವ ಹಾಗೆ ಬರುವಂತಿದ್ದರೂ, ಪೂರ್ವದ ಬಾಗಿಲು ಶುಭಕರವಾಗಿರುವುದಿಲ್ಲ. ಸಂಡಾಸು ಸ್ನಾನಗೃಹ ಶುಚಿಯಾಗಿರಲಿ. ಅಡುಗೆ ಮನೆ ಸರಳವಾಗಿ ಶುದ್ಧವಾಗಿರಲಿ. ಮನಸ್ಸು ನಿರಾಳವಾಗಿರಲು ಬಿಡಿ. ನಿಮ್ಮ ಸುತ್ತಲಿನ ಪ್ರಭಾವಳಿಗೆ ಆಗ ತ್ರಿಮೂರ್ತಿಗಳ ತತ್ವಗಳು ಒಗ್ಗೂಡಿ ಪಂಚಭೂತಗಳನ್ನು ನಿಮ್ಮ ಪಾಳಿನ ಕಾಯುವ ಶಕ್ತಿಯನ್ನಾಗಿಸುತ್ತಾ, ಮನೆಯೊಳಗಡಯೇ ಒಂದು ಪ್ರಭಾವಳಿಯನ್ನು ನಿರ್ಮಿಸುತ್ತವೆ.
ನಿಮ್ಮ ಸುತ್ತಲಿನ ಪ್ರಭಾವಳಿಯ ಜೊತೆಗೆ ಅದು ಕೊಂಡಿ ಕೂಡಿಸಿದಾಗ ಜೀವನದ ಸಾಫಲ್ಯತೆಗೆ ದಾರಿ ತಂತಾನೆ ಸಿಗಲು ಅವಕಾಶವಾಗುತ್ತದೆ. ಮನೆಯ ಅತಿ ಸೂಕ್ಷ್ಮ ಸಂವೇದನಾಶೀಲ ಸ್ಥಳ ಗುರುತಿಸಕೊಳ್ಳಿ. ಅದು ನಿಮ್ಮ ಮೇಧಾ ಶಕ್ತಿಯನ್ನು ಸಂವರ್ಧನೆಗಳಿಗೆ ಕಾರಣ ಮಾಡಿಕೊಡುತ್ತದೆ. ಮುಖ್ಯವಾದುದನ್ನು ಅಲ್ಲಿಯೇ ನಿಷ್ಕರ್ಷಿಸಿ ಆ ಸ್ಥಳದಲ್ಲೇ ಮನೆ ಮಂದಿಯೊಂದಿಗೆ ಒಳಿತು ಕೆಡಕುಗಳ ಬಗ್ಗೆ ಚರ್ಚಿಸಿ. ನಿಮ್ಮ ಒತ್ತಡವನ್ನು ಒಮ್ಮೆಗೇ ಕಡಿಮೆಗೊಳಿಸಿಕೊಳ್ಳಿ.
ಚರ್ಚಿಸಬೇಕಾದ ಒತ್ತಡದ ವಿಚಾರಗಳನ್ನು ಒಂದೆಡೆ ಪಟ್ಟಿ ಮಾಡಿಕೊಳ್ಳಿ. ಸಂಬಂಧಿಸಿದವರ ಜೊತೆ ಅವರೂ ನಿರಾಳರಾಗಿರುವಾಗ ಚರ್ಚಿಸಿ. ಇದರಿಂದ ನಿಮ್ಮ ಕೆಲಸಗಳು ಹಗುರವಾಗುತ್ತವೆ.
* ಅನಂತಶಾಸ್ತ್ರಿ