Advertisement

ಕೊಪ್ಪಳದಲ್ಲಿ ಜಿಲ್ಲಾಆಸ್ಪತ್ರೆ ಡಿ-ದರ್ಜೆ ನೌಕರನಿಗೆ ಮೊದಲ ಲಸಿಕೆ

11:52 AM Jan 16, 2021 | Team Udayavani |

ಕೊಪ್ಪಳ: ಕೊಪ್ಪಳ ಜಿಲ್ಲಾ ಆಸ್ಪತ್ರೆಯ ಡಿ ದರ್ಜೆ ಸಿಬ್ಬಂದಿ ಬಸವರಾಜ ಬಿ ಎಲ್ ಅವರಿಗೆ ಶನಿವಾರ ಮೊದಲ ಕೊವಿಶಿಲ್ಡ್ ಲಸಿಕೆ ಹಾಕುವ ಮೂಲಕ ಲಸಿಕಾ ಕಾರ್ಯಕ್ಕೆ ಚಾಲನೆ ನೀಡಲಾಯಿತು.

Advertisement

ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 11700 ಆರೋಗ್ಯ ಕಾರ್ಯಕರ್ತರಿಗೆ ಗೆ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಶನಿವಾರ ಜಿಲ್ಲಾ ಆಸ್ಪತ್ರೆಯ ಹಿಂಭಾಗದಲ್ಲಿ ಆರಂಭಿಕ 100 ಜನರಿಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ನಾಲ್ಕು ತಾಲೂಕಿನಲ್ಲಿ ಲಸಿಕೆ ಹಾಕುವ ಕಾರ್ಯಕ್ರಮ ಆರಂಭವಾದೆ.

ಜಿಲ್ಲಾಸ್ಪತ್ರೆಯ ಲಸಿಕಾ ವಿತರಣಾ ಕಾರ್ಯಕ್ರಮದಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ, ಡಿಸಿ ವಿಕಾಸ ಕಿಶೋರ್ ಹಾಗೂ ಡಿಎಚ್ ಒ ಡಾ ಲಿಂಗರಾಜ ಸೇರಿ  ಇತರರು ಪಾಲ್ಗೊಂಡಿದ್ದರು.

ಇದನ್ನೂ ಓದಿ: ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಲಸಿಕೆ ವಿತರಣೆ ಅಭಿಯಾನಕ್ಕೆ ಡಿ.ಸಿ ಆರ್.ಲತಾ ಚಾಲನೆ

Advertisement

ಇದನ್ನೂ ಓದಿ: LIVE Update: ರಾಜ್ಯಾದ್ಯಂತ ಕೋವಿಡ್ ಲಸಿಕೆ ವಿತರಣೆ ಅಭಿಯಾನಕ್ಕೆ ಚಾಲನೆ

Advertisement

Udayavani is now on Telegram. Click here to join our channel and stay updated with the latest news.

Next