Advertisement

ದ.ಕ.ದ ಮೊದಲ ಸ್ಟಾರ್ಟಪ್‌ ಕಂಪೆನಿಗೆ 50 ಲ.ರೂ.

03:45 AM Jul 06, 2017 | Team Udayavani |

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಸ್ಟಾರ್ಟಪ್‌ ಕಂಪೆನಿಗೆ ರಾಜ್ಯ ಸರಕಾರದಿಂದ 50 ಲಕ್ಷ ರೂ. ಅನುದಾನ ದೊರೆತಿದೆ.

Advertisement

ಕೃಷಿ ಮತ್ತು ಕೃಷಿಕರ ಸಮಸ್ಯೆಗಳು ಕೃಷಿಕರಿಗೆ ಅಥವಾ ಅವರ ಮಕ್ಕಳಿಗಷ್ಟೇ ಗೊತ್ತು. ಹಾಗಾಗಿ ಇದಕ್ಕೆ ಪರಿಹಾರ ವನ್ನೂ ಅವರೇ ಹುಡುಕಿದಾಗ ಅದು ಸಮರ್ಪಕವಾಗಿರುತ್ತದೆ. ಕೃಷಿ ಕಾರ್ಮಿಕರ ಲಭ್ಯತೆ ಕಡಿಮೆಯಾಗಿರುವ ಈ ಹೊತ್ತಿನಲ್ಲಿ ಕೃಷಿಯ ಸಮಸ್ಯೆಗಳಿಗೂ ಮಾಹಿತಿ ತಂತ್ರಜ್ಞಾನದ ಮೂಲಕ ಪರಿ ಹಾರ ಪಡೆಯಬೇಕಾದ ಅಗತ್ಯ ಇದೆ. ಇಂತಹುದೇ ಒಂದು ಪ್ರಯತ್ನ ನಡೆ ದಿದೆ. ಅದು ಸಫಲವೂ ಆಗಿ ಈಗ ಅದಕ್ಕೆ ರಾಜ್ಯ ಸರಕಾರದ ವತಿಯಿಂದ ಅನುದಾನವೂ ದೊರೆತಿದೆ.

ರಾಜ್ಯ ಮಾಹಿತಿ ತಂತ್ರಜ್ಞಾನ ಇಲಾಖೆಯ ಸ್ಟಾರ್ಟಪ್‌ ಸೆಲ್‌ ಜಾರಿ ಗೊಳಿಸಿರುವ “ಐಡಿಯಾ2ಪಿಒಸಿ’ ಎಂಬ ಯೋಜನೆ ಅಡಿಯಲ್ಲಿ ನೀಡ ಲಾಗುವ ಅನುದಾನವನ್ನು ದ.ಕ. ಮೂಲದ ಇಸ್‌³ ಆಗ್ರೋ ರೋಬೊಟಿಕ್ಸ್‌ ಪೆೆÅ„ವೇಟ್‌ ಲಿಮಿಟೆಡ್‌ ಕಂಪೆನಿಯು ಸಚಿವ ಪ್ರಿಯಾಂಕ್‌ ಖರ್ಗೆ ಅವರಿಂದ 50 ಲಕ್ಷ ರೂ. ಅನು ದಾನ ಪಡೆದುಕೊಂಡಿದೆ. ಈ ಕಂಪೆನಿಯು ಅಡಿಕೆಗೆ ಬರುವ ಕೊಳೆ ರೋಗ ವನ್ನು ನಿವಾರಿಸಲು ಮದ್ದನ್ನು ಸಿಂಪಡಿ ಸಲು ಡ್ರೋನ್‌ ಮಾದರಿಯ ಒಂದು ಯಂತ್ರವನ್ನು ಸಿದ್ಧಪಡಿಸಿದೆ.

ಎಸ್‌ಡಿಎಂ ತಂಡ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳ ತಂಡ ತಮ್ಮ ಊರಿನ, ತಾವು ನೋಡಿದ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಬೇಕೆಂದು ಯೋಚಿಸಿ ಈ ಡ್ರೋನ್‌ ಅನ್ನು ಸಿದ್ಧಪಡಿಸಿದೆ. 2015 ರಲ್ಲಿ ಆರಂಭವಾದ ಇಸ್‌³ ಆಗ್ರೋ ರೋಬೊಟಿಕ್ಸ್‌ ಕಂಪೆನಿಯ ರೂವಾರಿ ನಿಡ್ಲೆಯ ಲಕ್ಷ್ಮೀಶ್‌ ರಾವ್‌ ಮತ್ತು ಲಲಿತಾ ಅವರ ಪುತ್ರ ಅವಿನಾಶ್‌ ರಾವ್‌ ಅವರು ಧಾರವಾಡದ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಿಂದ 2004ರಲ್ಲಿ ಪದವಿ ಪಡೆದಿದ್ದಾರೆ. ಕಳೆದ 12 ವರ್ಷಗಳಿಂದ ಬೆಂಗಳೂರಿನ ಬಹು ರಾಷ್ಟ್ರೀಯ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಜತೆಗೆ ಚೇತನಾ ಹಾಗೂ ಮಣಿ ಪಾಲ ಎಂಐಟಿಯ ಸಹಾಯಕ ಪ್ರಾಧ್ಯಾ ಪಕ ಕಮಲೇಶ್‌ ಕುಮಾರ್‌ ಕಾರ್ಯ ನಿರ್ವಹಿಸುತ್ತಿದ್ದಾರೆ.

ದ.ಕ.ದ ಮೊದಲ ಸ್ಟಾರ್ಟಪ್‌
ಈ ಕಂಪೆನಿಯು ಕೇಂದ್ರ ಸರಕಾರ ಮತ್ತು ಕರ್ನಾಟಕ ಸರಕಾರದ ಅಡಿ ಯಲ್ಲಿ ಬರುವ ದಕ್ಷಿಣ ಕನ್ನಡದ ಮೊದಲ ಸ್ಟಾರ್ಟಪ್‌ ಕಂಪೆನಿ ಆಗಿದೆ. ಇದರ ಜತೆಗೆ ಭಾರತ ಸರ ಕಾರದ ಡಿಐಪಿಪಿ 173 ಅಡಿಯಲ್ಲಿ ನೋಂದಾ ಯಿತವಾದ ಮೊದಲ ಕೃಷಿ ಮತ್ತು ಏರೋಸ್ಪೇಸ್‌ ಕಂಪೆನಿ ಕೂಡ ಇದುವೇ ಆಗಿದೆ.

Advertisement

ಪ್ರಾತ್ಯಕ್ಷಿಕೆ
ಈಗಾಗಲೇ ಈ ಡ್ರೋನ್‌ನ ಪ್ರಾತ್ಯಕ್ಷಿಕೆ ಯನ್ನು ಶ್ರೀ ಕ್ಷೇತ್ರ ಧರ್ಮ ಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ, ಎಆರ್‌ಡಿಎಫ್‌ (ಅಡಿಕೆ ಅಭಿವೃದ್ಧಿ ಸಂಶೋಧನಾ ಸಂಸ್ಥೆ), ಕ್ಯಾಂಪ್ಕೋದ ಅಧ್ಯಕ್ಷ ಸತೀಶ್‌ಚಂದ್ರ, ಅಖೀಲ ಭಾರತ ಅಡಿಕೆ ಬೆಳೆ ಗಾರರ ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸ್‌ ಆಚಾರ್‌ ಅವರ ಮುಂದೆ ನೀಡ ಲಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರ ವಾಗಿದೆ. ಇದರ ಜತೆಗೆ ಕೇಂದ್ರ ತೋಟ ಗಾರಿಕೆ ಮತ್ತು ಬೆಳೆ ಸಂಶೋ ಧನಾ ಸಂಸ್ಥೆಯ ನಿರ್ದೇಶಕರಾದ ಚೌಡಪ್ಪ ಅವರೂ ಈ ಯಂತ್ರದ ಕಾರ್ಯ ನಿರ್ವಹಣೆಯನ್ನು ಪರಿಶೀಲಿ ಸಿದ್ದು ಇಸ್‌³ ಆಗ್ರೋ ರೋಬೊಟಿಕ್ಸ್‌ ಕಂಪೆನಿಯ ಜತೆಗೆ ಸಹಯೋಗದ ಬಗ್ಗೆ ಮಾತುಕತೆಗಳು ಜಾರಿಯಲ್ಲಿವೆ.

ಎಪ್ರಿಲ್‌ನಲ್ಲಿ  ಮಾರುಕಟ್ಟೆಗೆ
2018ರ ಎಪ್ರಿಲ್‌ ಒಳಗೆ ನಿಗದಿತ ಸಂಖ್ಯೆಯಲ್ಲಿ ಈ ಯಂತ್ರಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ತಯಾರಿ ನಡೆದಿದೆ. ಧರ್ಮಸ್ಥಳದಿಂದ 5 ಕಿ.ಮೀ. ದೂರದ ನಿಡ್ಲೆ ಪಂಚಾಯತ್‌ ವ್ಯಾಪ್ತಿಯ ಬರಂಗಾಯದಲ್ಲಿ ಒಂದು ಉದ್ಯಮ ಸಂಕೀರ್ಣವನ್ನು ಆರಂಭಿಸುವ ಯೋಜನೆಯನ್ನೂ ಕಂಪೆನಿ ಹಾಕಿಕೊಂಡಿದೆ. ಉತ್ಪಾದನೆ ಯನ್ನು ಮಾರುಕಟ್ಟೆಗೆ ಬಿಟ್ಟು ಕೃಷಿಕರಿಗೆ ಅನುಕೂಲವಾಗಲು ಯಂತ್ರದ ಜತೆಗೆ ತರಬೇತುದಾರರನ್ನು ಕೂಡ ಸಂಸ್ಥೆಯೇ ನೇಮಿಸುವ ಯೋಜನೆ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next