Advertisement

ಮೊದಲ ಹಂತದಲ್ಲಿ 1 ಕೋಟಿ ಮುಂಬಯಿಗರಿಗೆ ಲಸಿಕೆ ನೀಡುವ ಗುರಿ: ಬಿಎಂಸಿ

07:58 PM Dec 06, 2020 | Suhan S |

ಮುಂಬಯಿ, ಡಿ. 5: ಮುಂದಿನ ವರ್ಷದ ಆರಂಭದಲ್ಲಿ ಕೋವಿಡ್‌ ಲಸಿಕೆ ಲಭಿಸುವ ನಿರೀಕ್ಷೆಯಲ್ಲಿರುವ ಮುಂಬಯಿ ಮಹಾನಗರ ಪಾಲಿಕೆಯು ಒಂದು ತಿಂಗ ಳೊಳಗೆ ರೋಗನಿರೋಧಕ ಹಂಚಿಕೆ ಪ್ರಕ್ರಿಯೆಯ ಮೊದಲ ಹಂತ ದಲ್ಲಿ ಸುಮಾರು 1 ಕೋಟಿ ಮುಂಬಯಿ ಗರಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಿದೆ.

Advertisement

ಇಲ್ಲಿಯವರೆಗೆ ಇಂಡಿಯಾ ಕೌನ್ಸಿಲ್‌ ಆಫ್‌ ಮೆಡಿಕಲ್‌ ರಿಸರ್ಚ್‌ (ಐಸಿಎಂಆರ್‌) ಸಾರ್ವಜನಿಕ ಮತ್ತು ಖಾಸಗಿ ವಲಯಗಳಿಂದ ಸುಮಾರು 1.25 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ಅನುಮತಿ ನೀಡಿದೆ. ಇದರೊಂದಿಗೆ ಐಸಿಎಂಆರ್‌ ಅನುಮೋದನೆಯೊಂದಿಗೆ ನಾವು ಮೊದಲ ಹಂತದಲ್ಲಿ ಪೊಲೀಸರು, ಘನತ್ಯಾಜ್ಯ ನಿರ್ವಹಣೆಯ ನೌಕರರು ಮತ್ತು 50 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರನ್ನು ಸೇರಿಸಿಕೊಳ್ಳಲು ಯೋಜಿಸಿದ್ದೇವೆ. ಆದರೆ ನಾವು ಇನ್ನೂ ಐಸಿಎಂಆರ್‌ನಿಂದ ಅಧಿಕೃತ ಅನುಮೋದನೆ ಪಡೆದಿಲ್ಲ ಎಂದು ಬಿಎಂಸಿಯ ಹೆಚ್ಚುವರಿ ಆಯುಕ್ತ ಸುರೇಶ್‌ ಕಾಕಾನಿ ಸ್ಪಷ್ಟಪಡಿಸಿದ್ದಾರೆ.

ಪ್ರತೀ ವಾರ್ಡ್‌ನ ಎರಡು ವ್ಯಾಕ್ಸಿನೇಷನ್‌ ಕೇಂದ್ರ ಸ್ಥಾಪನೆ :

ಈಗಾಗಲೇ ತಮ್ಮ ಮೊದಲ ವ್ಯಾಕ್ಸಿನೇಷನ್‌ ಪ್ರಕ್ರಿಯೆಯ ನೀಲನಕ್ಷೆಯನ್ನು ಸಿದ್ಧವಾಗಿಡಲು ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದೆ. ಈ ಬಗ್ಗೆ ಮುಂಬಯಿ ಮಹಾನಗರ ಪಾಲಿಕೆಯು ವೈದ್ಯಕೀಯ ಕಾಲೇಜುಗಳ ಡೀನ್‌ಗಳು ಸೇರಿದಂತೆ ಹಿರಿಯ ಆರೋಗ್ಯ ಅಧಿಕಾರಿಗಳೊಂದಿಗೆ ನಿಯಮಿತ ವಾಗಿ ಸಭೆ ನಡೆಸುತ್ತಿದೆ.

ನೀಲನಕ್ಷೆಯ ಆರಂಭಿಕ ಯೋಜನೆಯ ಪ್ರಕಾರ ವೈದ್ಯಕೀಯ ಕಾಲೇ ಜು ಗಳನ್ನು ಹೊರತುಪಡಿಸಿ ಮುಂಬಯಿ ಮಹಾನಗರ ಪಾಲಿಕೆಯು ಮಾತೃತ್ವ ಆಸ್ಪತ್ರೆಗಳನ್ನು ಹೊರತುಪಡಿಸಿ ಬಾಹ್ಯ ಆಸ್ಪತ್ರೆಗಳಲ್ಲಿ ವ್ಯಾಕ್ಸಿನೇಷನ್‌ ಪಾಯಿಂಟ್‌ಗಳನ್ನು ಪ್ರಾರಂಭಿಸುತ್ತದೆ. ಅಲ್ಲದೆ ಪ್ರತಿ ನಾಗರಿಕ ವಾರ್ಡ್‌ಗಳಲ್ಲಿ ಎರಡು ವ್ಯಾಕ್ಸಿನೇಷನ್‌ ಕೇಂದ್ರಗಳು ಇರಲಿವೆ.

Advertisement

ಸಯಾನ್‌ ಮತ್ತು ಜೆಜೆ ಆಸ್ಪತ್ರೆಗಳಲ್ಲಿ ಕೊವ್ಯಾಕ್ಸಿನ್‌ ಪ್ರಯೋಗ :

ಪ್ಯಾರೆಲ್‌ನ ಕಿಂಗ್‌ ಎಡ್ವರ್ಡ್‌ ಮೆಮೋರಿಯಲ್‌ (ಕೆಇಎಂ) ಆಸ್ಪತ್ರೆ ಮತ್ತು ಮುಂಬಯಿ ಸೆಂಟ್ರಲ್‌ನ ಬಿವೈಎಲ್‌ ನಾಯರ್‌ ಆಸ್ಪತ್ರೆಗಳಲ್ಲಿ ಆಕ್ಸ್‌ಫರ್ಡ್‌- ಅಸ್ಟ್ರಾಜೆನೆಕಾ ಕೋವಿಶೀಲ್ಡ್ ಲಸಿಕೆಯ ಎರಡನೇ ಮತ್ತು ಮೂರನೇ ಹಂತದ ಕ್ಲಿನಿಕಲ್‌ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಸಯಾನ್‌ ಆಸ್ಪತ್ರೆ ಎಂದು ಕರೆಯಲ್ಪಡುವ ಲೋಕಮಾನ್ಯ ತಿಲಕ್‌ ಜನರಲ್‌ ಆಸ್ಪತ್ರೆ ಮತ್ತು ಸರಕಾರ ನಡೆಸುತ್ತಿರುವ ಜೆಜೆ ಆಸ್ಪತ್ರೆ ಶೀಘ್ರದಲ್ಲೇ ಮೊದಲ ಸ್ಥಳೀಯ ಕೋವಿಡ್‌ ಕೊವಾಕ್ಸಿನ್‌ ಲಸಿಕೆಯ ಕ್ಲಿನಿಕಲ್‌ ಪ್ರಯೋಗಗಳನ್ನು ಪ್ರಾರಂಭಿಸಲಿದೆ. ಪ್ರಸ್ತುತ ಮುಂಬಯಿ ಮಹಾನಗರ ಪಾಲಿಕೆಯು ಕಾಂಜೂರ್‌ಮಾರ್ಗದ ಐದು ಅಂತಸ್ತಿನ ಬಿಎಂಸಿ ಕಟ್ಟಡದಲ್ಲಿ 5,000 ಚದರ ಅಡಿ ಜಾಗವನ್ನು ಕೋಲ್ಡ್ ಸ್ಟೋರೇಜ್‌ ಸೌಲಭ್ಯಕ್ಕಾಗಿ ಗುರುತಿಸಲಾಗಿದೆ.

ತಾಪಮಾನಕ್ಕೆ ಅನುಗುಣವಾಗಿ ಕೋಲ್ಡ್‌ ಸ್ಟೋರೇಜ್‌ ಸ್ಥಾಪನೆ : ಕೋಲ್ಡ್ ಸ್ಟೋರೇಜ್‌ ಸೌಲಭ್ಯದ ತಾಪಮಾನವನ್ನು ಲಸಿಕೆ ಪ್ರಕಾರವನ್ನು ಆಧರಿಸಿ ರಚಿಸಲಾಗುವುದು. ನಗರದಲ್ಲಿ ಎರಡು ಲಸಿಕೆಗಳು ಕ್ಲಿನಿಕಲ್‌ ಪ್ರಯೋಗಗಳಿಗೆ ಒಳಗಾಗುತ್ತಿವೆ. ಒಬ್ಬರಿಗೆ -2 ಮತ್ತು – 8 ಡಿಗ್ರಿಗಳ ನಡುವೆ ತಂಪಾಗಿಸುವ ಉಷ್ಣತೆಯ ಅಗತ್ಯವಿದೆ. ಆದ್ದರಿಂದ ಮೊದಲ ಮೂರು ಹಂತದ ಲಸಿಕೆಗಾಗಿ ಕೋಲ್ಡ್‌ ಸ್ಟೋರೇಜ್‌ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗುವುದು. ಎರಡನೆಯ ಲಸಿಕೆಗೆ ಮತ್ತೂಂದು ತಾಪಮಾನದ ಅಗತ್ಯವಿದೆ. ಎರಡನೇ ಲಸಿಕೆ ಅನುಮೋದನೆ ಪಡೆದ ಅನಂತರ, ನಾವು  ಇತರ ಎರಡು ಮಹಡಿಗಳನ್ನು ಅದರ ಅಗತ್ಯ ತಾಪಮಾನಕ್ಕೆ ಅನುಗುಣವಾಗಿ ಕಸ್ಟಮೈಸ್‌  ಮಾಡುತ್ತೇವೆ ಎಂದು ಬಿಎಂಸಿಯ ಆರೋಗ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಲಸಿಕೆ ವಾಹಕಗಳ ಖರೀದಿಗೆ ಚಿಂತನೆ : ನಾವು ಪ್ರಕ್ರಿಯೆಯನ್ನು ವೇಗಗೊಳಿಸಲು ಸಾಧ್ಯವಾದಷ್ಟು ವ್ಯಾಕ್ಸಿನೇಷನ್‌ ಕೇಂದ್ರಗಳನ್ನು ರಚಿಸಲು ಪ್ರಯತ್ನಿಸುತ್ತಿದ್ದೇವೆ. ಲಸಿಕೆ ಒದಗಿಸುವವರ ತರ ಬೇತಿ ಪ್ರಕ್ರಿಯೆಯ ಬಗ್ಗೆ ನಾವು ನೀಲನಕ್ಷೆಯನ್ನು ರಚಿಸಿ ದ್ದೇವೆ. ಲಸಿಕೆಗಳ ಸಾಗಣೆಗೆ ನಾವು ಸರಕಾರದಿಂದ ತಾಪಮಾನ ದಿಂದ ಕಾಪಾಡಿಕೊಳ್ಳಲು ಸಹಾಯ ಮಾಡುವ ಕೋಲ್ಡ್‌ ಚೈನ್‌ ಬಾಕ್ಸ್‌ಗಳನ್ನೊಳಗೊಂಡ ಲಸಿಕೆ ವಾಹಕಗಳನ್ನು ಖರೀದಿಸ ಬೇಕಾಗಿದೆ ಎಂದು ಮುಂಬಯಿ ಮಹಾಗನರ ಪಾಲಿ ಕೆಯ ಹೆಚ್ಚುವರಿ ಆಯುಕ್ತ ಸುರೇಶ್‌ ಕಾಕಾನಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next