Advertisement

ಮೊದಲ ದಿನ ಮೂವರ ನಾಮಪತ್ರ ಸಲ್ಲಿಕೆ

07:23 AM Mar 20, 2019 | Team Udayavani |

ಮೈಸೂರು: ಏ.18ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಮೊದಲ ದಿನವಾದ ಮಂಗಳವಾರವೇ ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಮೂವರು ನಾಮಪತ್ರ ಸಲ್ಲಿಸಿದ್ದಾರೆ.

Advertisement

ನ್ಯೂ ಇಂಡಿಯನ್‌ ಕಾಂಗ್ರೆಸ್‌ ಪಾರ್ಟಿ (ಐಎನ್‌ಸಿಪಿ)ಯಿಂದ ಅಯೂಬ್‌ ಖಾನ್‌, ಸೋಶಿಯಲಿಸ್ಟ್‌ ಯೂನಿಟಿ ಸೆಂಟರ್‌ ಆಫ್ ಇಂಡಿಯಾ (ಕಮ್ಯುನಿಸ್ಟ್‌) ಎಸ್‌ಯುಸಿಐ ಪಕ್ಷದಿಂದ ಸಂಧ್ಯಾ ಪಿ.ಎಸ್‌. ಹಾಗೂ ಕಾಂಗ್ರೆಸ್‌ (ಐ) ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಆನಂದ ಜೆ.ಜೆ. ತಲಾ ಎರಡು ಸೆಟ್‌ ನಾಮಪತ್ರ ಸಲ್ಲಿಸಿದ್ದಾರೆ.

ತಮ್ಮ ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿದ ಮೂವರು ಅಭ್ಯರ್ಥಿಗಳು ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ತೆರಯಲಾಗಿರುವ ಚುನಾವಣಾ ಕಚೇರಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಾದ ಅಭಿರಾಮ್‌ ಜಿ.ಶಂಕರ್‌ ಅವರಿಗೆ ನಾಮಪತ್ರ ಸಲ್ಲಿಸಿದರು.

ಇಂಡಿಯನ್‌ ನ್ಯೂ ಕಾಂಗ್ರೆಸ್‌ ಪಾರ್ಟಿಯ ಅಯೂಬ್‌ಖಾನ್‌, ಕ್ಯಾತಮಾರನಹಳ್ಳಿಯ ಹುಲಿಯಮ್ಮ ದೇವಸ್ಥಾ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ದರ್ಗಾದಲ್ಲಿ ಪೂಜೆ ಸಲ್ಲಿಸಿದ ನಂತರ ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಿದರು. ಈ ವೇಳೆ ಅಯೂಬ್‌ಖಾನ್‌ ಜೊತೆಗೆ ಹಾಜರಿದ್ದ ಜೂನಿಯರ್‌ ವಿಷ್ಣುವರ್ಧನ್‌ ಗಮನ ಸೆಳೆದರು.

ಸೋಷಲಿಸ್ಟ್‌ ಯೂನಿಟ್‌ ಸೆಂಟರ್‌ ಆಫ್ ಇಂಡಿಯಾ (ಕಮ್ಯೂನಿಸ್ಟ್‌)ಪಕ್ಷದ ಕಾ.ಸಂಧ್ಯಾ ಪಿ.ಎಸ್‌.ಅವರು, ರಾಮಸ್ವಾಮಿ ವೃತ್ತದಲ್ಲಿರುವ ಹುತಾತ್ಮ ಸ್ತಂಭಕ್ಕೆ ಮಾಲಾರ್ಪಣೆ ಮಾಡಿ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಎರಡು ಸೆಟ್‌ ನಾಮಪತ್ರ ಸಲ್ಲಿಸಿದರು.

Advertisement

ಕಾಂಗ್ರೆಸ್‌(ಐ) ಪಕ್ಷದಿಂದ ಸ್ಪರ್ಧೆ ಬಯಸಿರುವ ಆನಂದ ಜೆ.ಜೆ. ತಮ್ಮ ಬೆಂಬಲಿಗರೊಂದಿಗೆ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಭಾರೀ ಗಾತ್ರದ ಹೂವಿನ ಹಾರ ಹಾಕಿಕೊಂಡು ಟಾಂಗಾ ಗಾಡಿ ಏರಿ, ಛತ್ರಿ-ಛಾಮರ, ವೀರಗಾಸೆ, ಪಟ ಕುಣಿತ , ಡೊಳ್ಳು, ತಮಟೆ ವಾದನ ಮೊದಲಾದ ಸಾಂಸ್ಕೃತಿಕ ಮತ್ತು ಜಾನಪದ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕಾಂಗ್ರೆಸ್‌ (ಐ) ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ತಲಾ ಒಂದು ಸೆಟ್‌ ನಾಮಪತ್ರ ಸಲ್ಲಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next