Advertisement
ಶನಿವಾರ ಉಪ್ಪಿನಂಗಡಿ- ಮಂಗಳೂರು ಮಾರ್ಗದಲ್ಲಿ ಈ ಹೊಸ ಬಸ್ ಓಡಾಟ ಆರಂಭಿಸಿದೆ. ಟಾಟಾ ಮೋಟಾರ್ಸ್ ಕಂಪೆನಿಯು ತಯಾರಿಸಿದ ಬಸ್ ಇದಾಗಿದೆ. ಅವಿಭಜಿತ ದಕ್ಷಿಣ ಕನ್ನಡದಲ್ಲಿ ಸಿಎನ್‌ಜಿ ಆಧಾರಿತ ಮೊದಲ ಬಸ್ ಇದು ಎಂದು ಖಾಸಗಿ ಬಸ್ ಮಾಲಕರ ಸಂಘದವರು ತಿಳಿಸಿದ್ದಾರೆ.
ಕಂಪೆನಿಯವರ ಮಾಹಿತಿ ಪ್ರಕಾರ ಬಸ್ ಡೀಸೆಲ್‌ಗಿಂತ ಕೊಂಚ ಹೆಚ್ಚು ಮೈಲೇಜ್ ಕೊಡುತ್ತದೆ. ಆದರೆ ಓಡಾಟ ಈಗಷ್ಟೇ ಆರಂಭಗೊಂಡಿರುವುದರಿಂದ ಮೈಲೇಜ್‌ನ ನಿಖರತೆ ಸಿಕ್ಕಿಲ್ಲ ಎಂದು ಮಾಲಕರು ಹೇಳಿದ್ದಾರೆ. ನೋಂದಣಿ ಸೇರಿ ಈ ಬಸ್‌ಗೆ ಸುಮಾರು 30 ಲಕ್ಷ ರೂ. ತಗಲುತ್ತಿದ್ದು, ಡೀಸೆಲ್ ಬಸ್‌ಗಳಿಗಿಂತ 3.5 ಲಕ್ಷ ರೂ.ಗಳಷ್ಟು ದುಬಾರಿಯಾಗಿದೆ ಎಂದಿದ್ದಾರೆ. ಇದನ್ನೂ ಓದಿ:ಯಾವುದೇ ಕ್ರೀಡೆಯಲ್ಲಿ ಆಡುವಾಗ ಗೆಲ್ಲಲೆಂದೇ ಆಡಬೇಕು : ಮುಖ್ಯಮಂತ್ರಿ ಬೊಮ್ಮಾಯಿ
Related Articles
ಕಾರುಗಳಿಗೆ ಸಿಎನ್‌ಜಿ ಇಂಧನ ಬಳಕೆ ಮಾಡುವುದಾದರೆ ಇಂಧನ ತೀರಿದ ಬಳಿಕ ಪೆಟ್ರೋಲ್ ಮೂಲಕವೂ ಪ್ರಯಾಣ ಮುಂದುವರಿಸಬಹುದಾಗಿದೆ. ಆದರೆ ಸಿಎನ್‌ಜಿ ಬಸ್ಸಿನಲ್ಲಿ ಡೀಸೆಲ್ ಬಳಕೆಗೆ ಅವಕಾಶವಿಲ್ಲ. ಬಸ್ಸಿನ ಸಿಎನ್‌ಜಿ ಟ್ಯಾಂಕ್ ಸಾಮರ್ಥ್ಯ 80 ಕೆಜಿ. ಸದ್ಯ ಕೊಳ್ನಾಡು, ಕಾವೂರು, ಹೊಸಬೆಟ್ಟುಗಳಲ್ಲಿ ಮಾತ್ರ ಸಿಎನ್‌ಜಿ ಮರು ಪೂರಣ ವ್ಯವಸ್ಥೆ ಇದೆ. ಈ ಬಸ್ಸಿನ ರೂಟ್ ಉಪ್ಪಿನಂಗಡಿ-ಮಂಗಳೂರು ಆಗಿರುವುದರಿಂದ ಇಂಧನ ಮುಗಿದ ಬಳಿಕ ಮರುಪೂರಣಕ್ಕಾಗಿ ದೂರದ ಈ ಮೂರು ಸ್ಥಳಗಳಲ್ಲಿ ಯಾವುದಾದ ರೊಂದಕ್ಕೆ ತೆರಬೇಕು. ಆದ್ದರಿಂದ ಪ್ರಸ್ತುತ ಬಸ್ಸಿನ ನಿರ್ವಹಣೆ ಸವಾಲಿನ ವಿಚಾರವಾಗಿದೆ.
Advertisement
ಮೊದಲ ದಿನ ಚಾಲಕರಾಗಿ ಸಂತೋಷ್ ಪೂಜಾರಿ ಹಾಗೂ ನಿರ್ವಾಹಕರಾಗಿ ರಾಜೇಶ್ ರೈ ಅವರು ಈ ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸಿದ್ದು, ಸಿಎನ್‌ಜಿ ಬಸ್ಸಿನ ಓಡಾಟ ಉತ್ತಮ ಅನುಭವ ನೀಡಿದೆ ಎಂದು ತಿಳಿಸಿದ್ದಾರೆ.
ಮಾಲಕರ ಕುತೂಹಲಇದೇ ವೇಳೆ ಪರಿಸರಕ್ಕೆ ಪೂರಕವೂ, ಅಧಿಕ ಮೈಲೇಜ್ ನೀಡಬಹುದಾದ ಸಿಎನ್‌ಜಿ ಆಧಾರಿತ ಬಸ್‌ಗಳ ಬಗ್ಗೆ ಇತರ ಖಾಸಗಿ ಬಸ್ ಗಳ ಮಾಲಕರೂ ಆಸಕ್ತರಾಗಿದ್ದು, ಈ ಬಸ್ಸಿನ ಸಾಧಕ- ಬಾಧಕಗಳನ್ನು ನೋಡಿಕೊಂಡು ತಾವೂ ಖರೀದಿಸುವ ಚಿಂತನೆಯಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಸಿಎನ್‌ಜಿ ಹೊಂದಾಣಿಕೆ ಮಾಡಿಕೊಂಡು ಪ್ರಾಯೋಗಿಕವಾಗಿ ಬಸ್ಸನ್ನು ಓಡಿಸು ತ್ತಿದ್ದೇವೆ. ಶನಿವಾರ ಮೊದಲ ಬಾರಿಗೆ ಪ್ರಯಾಣಿಕರನ್ನು ಕರೆದೊಯ್ದಿದ್ದೇವೆ. ಸಾಧಕ-ಬಾಧಕ ಇನ್ನಷ್ಟೇ ಗೊತ್ತಾಗಬೇಕಿದೆ ಎಂದು ಮಾಲಕ ಅಡ್ಯಾರಿನ ಸಾರಿಗೆ ಉದ್ಯಮಿ ರೊನಾಲ್ಡ್ ಡಿ’ಸೋಜಾ “ಉದಯವಾಣಿ’ಗೆ ತಿಳಿಸಿದ್ದಾರೆ.