Advertisement

ಖಾಲಿಯಿರುವ ಪಶು ವೈದ್ಯ ಹುದ್ದೆ ಭರ್ತಿ: ಸಚಿವ ಕೆ. ರಾಜು

12:14 PM Mar 25, 2017 | Team Udayavani |

ಕಾಸರಗೋಡು: ಜಿಲ್ಲೆಯ ವೆಟರಿನರಿ ವೈದ್ಯರ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪಶು ಸಂಗೋಪನೆ ಖಾತೆ ಸಚಿವ ಕೆ. ರಾಜು ಹೇಳಿದರು.

Advertisement

ಮೊಗ್ರಾಲ್‌ ಪುತ್ತೂರು ಪಶು ಆಸ್ಪತ್ರೆಗೆ ಲಭಿಸಿದ ಐಎಸ್‌ಒ ಮಾನ್ಯತೆ ಸರ್ಟಿಫಿಕೇಟ್‌ ಮೊಗ್ರಾಲ್‌ ಪುತ್ತೂರು ಗ್ರಾ.ಪಂ. ಅಧ್ಯಕ್ಷ ಎ.ಎ. ಜಲೀಲ್‌ ಅವರಿಗೆ ಹಸ್ತಾಂತರಿಸಿ ಮೊಗ್ರಾಲ್‌ ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಪ್ರಥಮ ಬಾರಿಗೆ ಮೃಗಾಸ್ಪತ್ರೆಯೊಂದಕ್ಕೆ ಐಎಸ್‌ಒ ಅಂಗೀಕಾರ ಲಭಿಸುತ್ತಿರುವುದು ಪಶು ಸಂಗೋಪನ ಇಲಾಖೆಗೆ ಅಭಿಮಾನದ ವಿಷಯವಾಗಿದೆ ಎಂದು ಅವರು ಹೇಳಿದರು. 

ಶಾಸಕ ಎನ್‌.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪಶುಸಂಗೋಪನ ಕಚೇರಿ ಅಧಿಕಾರಿ ಡಾ| ವಿ. ಶ್ರೀನಿವಾಸನ್‌ ವರದಿ ಮಂಡಿಸಿದರು. ಜಿ. ಪಂ. ಅಧ್ಯಕ್ಷ ಎ.ಜಿ.ಸಿ. ಬಶೀರ್‌ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾಧಿಕಾರಿ ಕೆ. ಜೀವನ್‌ಬಾಬು ಕೇರಳ್ಳೋತ್ಸವ ವಿಜೇತರಿಗೆ ಸ್ಮರಣಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next