Advertisement
24 ಗಂಟೆಗಳಲ್ಲಿ ಬೆಳಕಿರುವ ಹೊತ್ತಿನ ಗಾತ್ರ ಕಡಿಮೆ ಆಗುತ್ತ ಕತ್ತಲೆಯ ಹೊತ್ತು ದಿನೇ ದಿನೇ ಹೆಚ್ಚಾಗುತ್ತಿದೆ. ಕತ್ತಲೆ ಹೆಚ್ಚುತ್ತಿರುವಾಗಲೇ ಬೆಳಕು ಬೇಕು ಎನಿಸುವುದು. ಮತ್ತೆ ಪ್ರತಿವರ್ಷವೂ ಚಳಿ ಮತ್ತು ಕತ್ತಲೆ ಎರಡೂ ಜೊತೆಯಾಗುವ ಹೊತ್ತÇÉೇ ದೀಪಾವಳಿ ಹಬ್ಬ ಬರುವುದು. ದೀಪಾವಳಿ ಎಂದರೆ ಬ್ರಿಟಿಷರಿಗೆ ತಿಳಿಯುವುದಿಲ್ಲ. ಬದಲಿಗೆ ನೀವು ಈಜಿಡಿಚlಜಿ ಎಂದರೆ “ಬೆಳಕಿನ ಹಬ್ಬವಲ್ಲವೇ’ ಎಂದು ಅವರೇ ಉದ್ಗರಿಸುತ್ತಾರೆ. ಭಾರತದ ಬೆಳಕಿನ ಹಬ್ಬದ ಬಗ್ಗೆ ತಿಳಿದ ಆಂಗ್ಲರು ಬಹಳ ಜನರಿ¨ªಾರೆ. ತಮ್ಮ ಬಾಲ್ಯದ ಶಾಲಾ ದಿನಗಳಿಂದಲೇ ಇಲ್ಲಿನ ಮಕ್ಕಳು ದೀಪಾವಳಿಯ ಬಗ್ಗೆ ತಿಳಿದಿರುತ್ತಾರೆ ಅಥವಾ ತಮ್ಮ ಭಾರತೀಯ ಸಹಪಾಠಿಗಳಿಂದ ಕೇಳಿರುತ್ತಾರೆ. ಬೇರೆ ಬೇರೆ ದೇಶದ, ಧರ್ಮದ ಸಂಸ್ಕೃತಿಗಳ ಕಿರುಓದು ಇಲ್ಲಿನ ಪ್ರಾಥಮಿಕ ಪಠ್ಯದ ಭಾಗವೇ ಆಗಿದೆ.
Related Articles
Advertisement
ಬ್ರಿಟನ್ನಿನಲ್ಲಿ ಕತ್ತಲೆ, ಚಳಿಯ ವಾತಾವರಣದಲ್ಲಿ ಜಡತ್ವ ಮೂಡಿಸುವ ಸಮಯದಲ್ಲಿ ಬರುವ ದೀಪಾವಳಿ ಹಬ್ಬ ಭಾರತೀಯರ ಉತ್ಸಾಹ ಹೆಚ್ಚಿಸಿದರೂ ಇಂತಹದೇ ಸಮಯದಲ್ಲಿ ಕೆಲವು ಅಹಿತಕರ ಅನುಭವಗಳೂ ಆಗುವ ಸಾಧ್ಯತೆಗಳಿವೆ. ಕತ್ತಲೆ, ಚಳಿ ಎಂದು ನಾವು ಗೊಣಗುತ್ತಿರುವಾಗ ಈ ದೇಶದ ಕಳ್ಳರು ಚುರುಕಾಗುತ್ತಾರೆ. ಕಳೆದೆರಡು ವರ್ಷಗಳಿಂದ ಬ್ರಿಸ್ಟಲ್‌ನಲ್ಲಿ ಚಳಿಗಾಲದಲ್ಲಿ ನಡೆಯುತ್ತಿರುವ ಕಳ್ಳತನಗಳ ಸಂಖ್ಯೆ ಹೆಚ್ಚುತ್ತಿದೆ. ಇಲ್ಲಿನ ಚಳಿಗಾಲ ಎಂದರೆ ಬೇಗ ಕತ್ತಲಾಗುತ್ತದೆ. ಜನರು ಕಚೇರಿ ಮುಗಿಸಿ ಮನೆಗೆ ಬರುವ ಮೊದಲೇ ಕತ್ತಲಾಗಿರುವುದು ಕಳ್ಳರಿಗೆ ಅನುಕೂಲಕರವಾಗಿರುತ್ತದೆ. ಈ ದೇಶದಲ್ಲಿ ವಿಧವಿಧದ ಕಳ್ಳರಿ¨ªಾರೆ. ವಿದ್ಯುನ್ಮಾನ ಗ್ಯಾಜೆಟ…ಗಳನ್ನು ಕದಿಯುವ ತಂಡ ಬೇರೆ, ಚಿನ್ನ ಕದಿಯುವವರು ಬೇರೆ. ಗ್ಯಾಜೆಟ… ಕಳ್ಳರಿಗೆ ಯಾವ, ಯಾರ ಮನೆಯಾದರೂ ಆದೀತು. ಆದರೆ ಚಿನ್ನದ ಕಳ್ಳರು ಬ್ರಿಸ್ಟಲ್‌ನಲ್ಲಿ ಭಾರತೀಯ ಮನೆಗಳನ್ನೇ ಗುರಿಯಾಗಿಸಿ ಚಿನ್ನ ಕದಿಯುವುದು ಹೆಚ್ಚುತ್ತಿದೆ. ಈ ದೇಶದಲ್ಲಿ ಸಿಗುವ ಅಥವಾ ಆಂಗ್ಲರು ಬಳಸುವ ಚಿನ್ನ ಎಂಟೋ, ಹತ್ತೋ ಕ್ಯಾರೆಟ…ನ¨ªಾಗಿರುತ್ತದೆ. ಭಾರತೀಯರು ಧರಿಸುವ ಅಥವಾ ಮನೆಯಲ್ಲಿ ಇಟ್ಟಿರುವ ಚಿನ್ನ ಬಹುಮೂಲ್ಯದ 18-20 ಕಾರಟ…ನ¨ªಾಗಿರುತ್ತದೆ. ಇದನ್ನು ಅರಿತಿರುವ ಇಲ್ಲಿನ ಕಳ್ಳರು ಯಾವುದು ಭಾರತೀಯ ಅಥವಾ ಏಷಿಯಾ ಮೂಲದವರ ಮನೆ ಎಂದು ಮೊದಲೇ ಗುರುತಿಸಿ ಯಾವಾಗ ಮನೆಯಲ್ಲಿ ಯಾರೂ ಇರುವುದಿಲ್ಲ ಎಂದು ನೋಡಿ ನುಗ್ಗಿ ಚಿನ್ನ ಇದ್ದರೆ ಕದ್ದು ಪರಾರಿ ಆಗುತ್ತಾರೆ. ಸಣ್ಣ ಅಪರಾಧಗಳನ್ನು ಲಘುವಾಗಿ ನೋಡುವ ಮತ್ತು ಅಂತಹ ಅಪರಾಧ ಎಸಗಿದವರನ್ನು ಸಾಕ್ಷ ಇದ್ದರೆ ಮಾತ್ರ ಬಂಧಿಸುವ ಕಾನೂನಿನ ಈ ದೇಶದಲ್ಲಿ ಕಳ್ಳರು ಸುಖವಾಗಿ¨ªಾರೆ ಮತ್ತು ಬೇಗ ಕತ್ತಲಾಗುವ ಚಳಿಗಾಲ ಎಂದು ಬರುತ್ತದೋ ಎಂದು ಕಾಯುತ್ತಿರುತ್ತಾರೆ! ಪೊಲೀಸರೇ ಹೇಳುವ ಪ್ರಕಾರ, ಈ ಕಳ್ಳರು ಎಲ್ಲೂ ತಮ್ಮ ಬೆರಳಚ್ಚು , ಪಾದರಕ್ಷೆಗಳ ಗುರುತು ಬಿಡುವವರಲ್ಲ, ಮತ್ತೆ ತಾವು ಕದ್ದ ಚಿನ್ನವನ್ನು ನಿಮಿಷಗಳಲ್ಲಿ ಇನ್ಯಾರದೋ ಕೈಗೆ ವರ್ಗಾಯಿಸಿ ಅದನ್ನು ಕರಗಿಸಿ ಬಿಡುತ್ತಾರೆ. ಸೂಕ್ತ ಆಧಾರ ಇಲ್ಲದೆ ಯಾರನ್ನೂ ಬಂಧಿಸಬಾರದೆನ್ನುವ ಸಣ್ಣ ಅಪರಾಧಗಳ ಸಡಿಲ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಬ್ರಿಸ್ಟಲ…ನ ಪೊಲೀಸರು ದೀಪಾವಳಿ ಹಬ್ಬದ ಆಚರಣೆ ಶುರು ಆಗುವ ಹೊತ್ತಲ್ಲಿ ಭಾರತೀಯರನ್ನು ಉದ್ದೇಶಿಸಿ ಒಂದು ಸೂಚನೆ ಹೊರಡಿಸಿದ್ದರು. “ಕಳ್ಳರಿಗೆ ದೀಪಾವಳಿ ಭಾರತೀಯರ ಹಬ್ಬ ಎಂದು ಚೆನ್ನಾಗಿ ಗೊತ್ತು. ಯಾರ ಮನೆಯಲ್ಲಿ ದೀಪದ ಅಲಂಕಾರ ಮಾಡಿದ್ದರೋ, ಪಟಾಕಿ ಹಚ್ಚುತ್ತಾರೋ ಅಂತಹ ಮನೆಗಳಲ್ಲಿ ಚಿನ್ನ ಸಿಕ್ಕೀತು ಎಂದು ಊಹಿಸಿ, ಅಲ್ಲಿಗೆ ಕಳ್ಳರು ಸಮಯ ನೋಡಿ ದಾಳಿ ಇಡಬಹುದು, ಅನುಮಾನಾಸ್ಪದ ವ್ಯಕ್ತಿಗಳು ನಿಮ್ಮ ಬೀದಿಯಲ್ಲಿ ಕಂಡುಬಂದರೆ ತಮಗೆ ತಿಳಿಸಿ’ ಎಂದಿದ್ದರು.
ಬ್ರಿಟನ್ನಿನ ಊರೂರುಗಳಲ್ಲಿ ಭಾರತೀಯ ಮನೆಗಳಲ್ಲಿ ದೀಪಾವಳಿಯ ತಯಾರಿ ನಡೆದಿದೆ. ಲಂಡನ್‌ನ ಟ್ರಫಾಲ್ಗರ್ ಚೌಕದಲ್ಲಿ ಕಳೆದ 16 ವರ್ಷಗಳಿಂದ ದೀಪಾವಳಿ ಬೃಹತ್ ಆಚರಣೆ ನಡೆಯುತ್ತಿದೆ. ಸುಮಾರು 35,000 ಜನರು ಪಾಲ್ಗೊಳ್ಳುವ ಹಬ್ಬದ ವಿವರಗಳು ಲಂಡನ್ ನಗರಸಭೆಯ ಅಂತರ್ಜಾಲ ಪುಟವನ್ನೂ ಸೇರಿವೆ. ದಿನಾಂಕದ ಲೆಕ್ಕದಲ್ಲಿ ಈ ವರ್ಷದ ದೀಪಾವಳಿ ಮುಗಿದಿದ್ದರೂ ಬ್ರಿಟನ್ನಿನ ಬೇರೆ ಬೇರೆ ದಿಕ್ಕು, ಊರುಗಳಲ್ಲಿ ಬೆಳಕು ಕಾಣಿಸುತ್ತಿದೆ, ಹಬ್ಬ ಪ್ರತಿಧ್ವನಿಸುತ್ತಿದೆ. ಹೀಗಿದೆ ನೋಡಿ, ನಮ್ಮೂರ ದೀಪಾವಳಿ.
– ಯೋಗೀಂದ್ರ ಮರವಂತೆ ಬ್ರಿಸ್ಟಲ್, ಇಂಗ್ಲೆಂಡ್