Advertisement
ಶ್ರೀಕೃಷ್ಣ ಮಠದಲ್ಲಿ ವಾರ್ಷಿಕ ಸಪ್ತೂತ್ಸವ ಆರಂಭಗೊಳ್ಳುವುದೇ ಮಕರಸಂಕ್ರಾಂತಿ ಸಂದರ್ಭ. ಈ ಬಾರಿ ವಾಡಿಕೆಯ ಸಪ್ತೂತ್ಸವದ ಜತೆಗೆ 14 ಸೇವಾ ದಾರರ ಸಪ್ತೂತ್ಸವಗಳಿದ್ದವು. ಎರಡು ವರ್ಷಗಳ ಪರ್ಯಾಯದಲ್ಲಿ 119 ಸೇವಾದಾರರ ಮತ್ತು ಎರಡು ವಾಡಿಕೆಯ ಒಟ್ಟು 121 ಸಪ್ತೂತ್ಸವ ನಡೆದಂತಾಯಿತು. ಇದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ 5ನೇ ಪರ್ಯಾಯದ ಕೊನೆಯ ಮಕರಸಂಕ್ರಾಂತಿ, ಚೂರ್ಣೋತ್ಸವವಾಗಿದೆ.
ಗೊಂಡಿತು. ಬ್ರಹ್ಮರಥದಲ್ಲಿ ಶ್ರೀಕೃಷ್ಣ ಮತ್ತು ಮುಖ್ಯಪ್ರಾಣ ದೇವರ ಉತ್ಸವಮೂರ್ತಿಗಳನ್ನು ಇರಿಸಿ ಪೂಜೆ ಸಲ್ಲಿಸಿದ ಬಳಿಕ ರಥಬೀದಿಗೆ ಸಾವಿರಾರು ಭಕ್ತರ ಸಮ್ಮುಖ ಪ್ರದಕ್ಷಿಣೆ ಬಂದು ವಸಂತ ಮಹಲ್‌ನಲ್ಲಿ ಅಷ್ಟಾವಧಾನ, ಓಲಗಮಂಟಪ ಪೂಜೆ ನಡೆಯಿತು. ಅನಂತರ ಮಧ್ವ ಸರೋವರದಲ್ಲಿ ಉತ್ಸವಮೂರ್ತಿ ಸಹಿತವಾಗಿ ಎಲ್ಲ ಮಠಾಧೀಶರು ಅವಭೃಥಸ್ನಾನ ಮಾಡಿ ಸಪೊ¤àತ್ಸವವನ್ನು ಕೃಷ್ಣಾರ್ಪಣಗೈದರು. ಪರ್ಯಾಯ ಪೇಜಾವರ ಹಿರಿಯ, ಕಿರಿಯ, ಕೃಷ್ಣಾಪುರ, ಶೀರೂರು, ಅದಮಾರು ಹಿರಿಯ, ಕಿರಿಯ, ಪಲಿಮಾರು, ಕಾಣಿಯೂರು, ಸೋದೆ, ಮಂತ್ರಾಲಯ, ಪ್ರಯಾಗ, ಬೆಂಗಳೂರು ರಾಮೋಹಳ್ಳಿ ಸ್ವಾಮೀಜಿ ಮಠಾಧೀಶರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಗರುಡಾಗಮನ
ಚೂರ್ಣೋತ್ಸವದ ಸಂದರ್ಭ ಗರುಡ ಆಗಸದಲ್ಲಿ ಬಂದು ರಥಕ್ಕೆ ಸುತ್ತು ಹೊಡೆಯುತ್ತದೆ ಎಂಬ ನಂಬಿಕೆ ಇದ್ದು, ಸೋಮವಾರವೂ ಇದು ಸಂಭವಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.