Advertisement

ಚಾಂಗದೇವರ ಜಾತ್ರೆಗೆ ಬರದ ಛಾಯೆ

01:10 PM Mar 17, 2017 | |

ನವಲಗುಂದ: ಈ ಭಾಗದ ಇತಿಹಾಸ ಪ್ರಸಿದ್ಧ ಮತ್ತು ಹಿಂದೂ-ಮುಸ್ಲಿಂ ಬಾಂಧವರ ಆರಾಧ್ಯದೈವ ಯಮನೂರಿನ ಚಾಂಗದೇವರ ಜಾತ್ರೆಗೆ ಬರದ ಬಿಸಿ ತಟ್ಟಿದ್ದು, ಇದಕ್ಕೆ ನಿದರ್ಶನವೆಂಬಂತೆ ಆಗಮಿಸುವ ಭಕ್ತರು ಮತ್ತು ವ್ಯಾಪಾರದಲ್ಲಿ ಇಳಿಮುಖವಾಗಿದೆ. ಈ ಮೊದಲು ಪ್ರವಾಹದೋಪಾದಿಯಲ್ಲಿ ಕಾಣಿಸುತ್ತಿದ್ದ ಜನಸಾಗರದಲ್ಲಿ ಪಾರಾಗಿ ಬರುವುದೇ ಪವಾಡ ಎಂಬಂತಾಗಿತ್ತು. 

Advertisement

ಆದರೆ ಈಗ ಪರಂಪರಾಗತ ಪದ್ಧತಿ ಕೈಬಿಡಬಾರದೆನ್ನುವ ಅನಿವಾರ್ಯತೆಯಲ್ಲಿ ಮನೆಗೊಬ್ಬರಂತೆ ಭಕ್ತರು ಬಂದರೂ ಅವರ ಮುಖದಲ್ಲಿಯೂ ಹೇಳಿಕೊಳ್ಳವಂತಹ ಕಳೆ ಇರಲಿಲ್ಲ. “ಬರ’ದ ಪರಿಣಾಮದಿಂದ ಜಾತ್ರೆಗೂ ಒಂದು ರೀತಿಯ ಮಂಕು ಕವಿದಿತ್ತು. ಇದರ ಮಧ್ಯೆಯೂ ಭಕ್ತರು ರಾಜಾಭಾಗ ಸವಾರ ಊಫ ಚಾಂಗದೇವರು ನಮಗೆ ಒಳ್ಳೆಯದನ್ನು ಮಾಡಲಿ.

ನಮ್ಮ ಕಷ್ಟಗಳನ್ನು ದೂರ ಮಾಡಲಿ. ಈ ವರ್ಷ ಮಳೆ-ಬೆಳೆ ಚೆನ್ನಾಗಿ ಬರಲಿ. ಎಲ್ಲರೂ ಸುಖವಾಗಿರಲಿ ಎಂದು ನೆರೆದಿದ್ದ ಭಕ್ತರು ದೇವರನ್ನು ಪ್ರಾರ್ಥಿಸಿದರು. ರಾಜಾ ಭûಾರಕಿ ದೋಸ್ತರ ಹೋದಿನ… ಚಾಂಗದೇವ ಮಹಾರಾಜಕೀ ಜೈ ಹೋ. ಎನ್ನುವ ಜಯ ಘೋಷ ಮೊಳಗಿಸಿದರು. 

ಇದಕ್ಕೂ ಮೊದಲು ಗಂಧಾಭಿಷೇಕ (ಸಂದಲ) ಸಂಬಂಧಿಸಿದಂತೆ ಬರ್ಗೆ ಮನೆತನದ ಸಂತರು ಚಾಂಗದೇವನಿಗೆ ದೀಪ ಹಚ್ಚಲು ಬೆಣ್ಣಿ ಹಳ್ಳಕ್ಕೆ ನೀರು ತರಲು ಹೊರಡುವ ಸಮಯದಲ್ಲಿ ರಸ್ತೆಯ ಮೇಲೆಭಕ್ತರು ಬೆನ್ನು ಮೇಲಾಗಿ ಮಲಗಿದರು. ಸಂತರ ಪಾದಸ್ಪರ್ಶದಿಂದ ಪುಣ್ಯಗಳಿಸಿದಂತೆ ಎಂಬ ನಂಬಿಕೆ ಅವರದಾಗಿತ್ತು.

ಗದ್ದಲ ಹೆಚ್ಚಾದಾಗ ಪೊಲೀಸರು ಲಾಠಿ ರುಚಿ ತೋರಿಸಲು ಮುಂದಾದರು. ಆಗ ನಿರಾಶೆ ಹೊಂದಿದ ಭಕ್ತರು ಪಕ್ಕಕ್ಕೆ ಸರಿದರು. ಆದರೆ ಬೆಣ್ಣಿಹಳ್ಳದಿಂದ ತಂದ ನೀರಿನಿಂದ ಗರ್ಭಗುಡಿಯಲ್ಲಿ ಸಂತರು ದೀಪ ಹಚ್ಚುತ್ತಿದಂತೆ ಭಕ್ತರು ಬೆರಗುಗೊಂಡರು. 

Advertisement

ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಚಾಂಗದೇವರ ದೇವಸ್ಥಾನದಲ್ಲಿ ಪೂಜೆ ಹಾಗೂ ಪಾತಿಹಾ(ಓದಿಕೆ) ಗಂಧಾಭಿಷೇಕ ದಿನದಂದು ಏಕಕಾಲಕ್ಕೆ ನಡೆದು ಹಿಂದೂ-ಮುಸ್ಲಿಂರಲ್ಲಿ ಸಂತೃಪ್ತ  ಭಾವ ಮೂಡಿಸಿತು. ದೇವರ ದರ್ಶಕ್ಕೆ ಮೊದಲು ಇಲ್ಲಿಯ ಬೆಣ್ಣಿ ಹಳ್ಳದಲ್ಲಿ ಸ್ನಾನ ಮಾಡುವುದು ವಾಡಿಕೆ. ಹಳ್ಳದಲ್ಲಿ ಸ್ನಾನ ಮಾಡಿದರೆ ಚರ್ಮ ರೋಗಳು ವಾಸಿಯಾಗುತ್ತವೆ ಎನ್ನುವುದು ಭಕ್ತರ ನಂಬಿಕೆ. 

ಆದರೆ ಕಳೆದ ಬಾರಿಯಂತೆ ಈ ಬಾರಿಯೂ ಹಳ್ಳದಲ್ಲಿ ಸರಿಯಾಗಿ ನೀರಿನ ಸಂಗ್ರಹ ಇಲ್ಲದೆ ಭಕ್ತರು ಸ್ನಾನಕ್ಕೆ ಪರದಾಡಬೇಕಾಯಿತು. ಸ್ಥಳೀಯ ಶಾಸಕ ಎನ್‌.ಎಚ್‌. ಕೋನರಡ್ಡಿ ಅವರು ಸಂತರೊಂದಿಗೆ ಸುಮಾರು ಮೂರು ಕಿ.ಮೀ.ವರೆಗೆ ಬೆಣ್ಣಿ ಹಳ್ಳಕ್ಕೆ ನಡೆದುಕೊಂಡು ಬಂದು ಗಂಧಾಭಿಷೇಕದಲ್ಲಿ ಪಾಲ್ಗೊಂಡು ದೇವರ ಆರ್ಶೀವಾದ ಪಡೆದರು. 

Advertisement

Udayavani is now on Telegram. Click here to join our channel and stay updated with the latest news.

Next