Advertisement
ಭಾನುವಾರ ತಾಲೂಕಿನ ನಂಜನಗೂಡು ತಾಲೂಕಿನ ದೇವನೂರಿನಲ್ಲಿ ನಂಜನಗೂಡು ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ್ ಪ್ರಸಾದರ ಪರ ಚುನಾವಣೆ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರ ಸರ್ಕಾರ ಅಭಿವೃದ್ಧಿ ಮರೆತು ಕೇವಲ ಭ್ರಷ್ಟಾಚಾರ ನಡೆಸಿ ಖಜಾನೆ ಲೂಟಿಯಲ್ಲಿ ತೊಡಿಗಿದೆ. ಈ ಕುರಿತು ಸಿಬಿಐ ತನಿಖೆ ಆರಂಭವಾದರೆ ತಕ್ಷಣ ರಾಜ್ಯ ಸರ್ಕಾರ ಕುಸಿದು ಬೀಳಲಿದೆ. ಹಾಗಾ ದರೆ ಆರೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ಎದುರಿಸ ಬೇಕಾಗುತ್ತದೆ ಎಂದು ಹೇಳಿದರು.
Related Articles
Advertisement
90000 ಕೋಟಿ ಸಾಲವೇ ಸಿದ್ದು ಸಾಧನೆ: ಸಿದ್ದರಾಮಯ್ಯನವರ ಸರ್ಕಾರದ ಸಾಧನೆ ಎಂದರೆ 90 ಸಾವಿರ ಕೋಟಿ ರೂ. ಸಾಲ ಮಾಡಿರುವುದು. ಇನ್ನಾರು ತಿಂಗಳಲ್ಲಿ ಆ ಸಾಲ ಲಕ್ಷ ಕೋಟಿ ರೂ. ಆಗುತ್ತದೆ. ಅದೇ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದ ಮಹಾಸಾಧನೆ ಎಂದು ಟೀಕಿಸಿದ ಯಡಿಯೂರಪ್ಪ, ನಾಲ್ಕು ವರ್ಷದಲ್ಲಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ಬರ ಪರಿಹಾರವಾಗಿ ನೀಡಿದ 4068 ಕೋಟಿ ರೂ. ಏನಾಯಿತು ಮುಖ್ಯಮಂತ್ರಿಗಳೇ,
ಯಾವ ರೈತರಿಗೆ ಬರ ಪರಿಹಾರ ನೀಡಿದ್ದೀರಿ ಎಂದು ಪ್ರಶ್ನಿಸಿದ ಅವರು, ತಮ್ಮ ಅವಧಿಯಲ್ಲಿ ಅಂದಿನ ಕೇಂದ್ರ ಸರ್ಕಾರ ಕೇವಲ 970 ಕೋಟಿ ರೂ. ಮಾತ್ರ ಬರಪರಿಹಾರ ನೀಡಿತ್ತು. ಆದರೂ ನಾವು ರೈತರ ಸಾಲ ಮನ್ನಾ ಮಾಡಲಿಲ್ಲವೇ? ನೀವೇಕೆ ಮಾಡುತ್ತಿಲ್ಲ. ರಾಜ್ಯ ಸರ್ಕಾರ ರೈತರ ಸಹಕಾರಿ ಸಾಲ ಮನ್ನಾ ಮಾಡದಿದ್ದರೆ ಬರುವ ವಿಧಾನಸಭಾ ಅಧಿವೇಶನ ನಡೆಸಲು ಬಿಡುವುದಿಲ್ಲ ಎಂದು ಯಡಯೂರಪ್ಪ ಎಚ್ಚರಿಕೆ ನೀಡಿದರು.
ರಕ್ತದಲ್ಲಿ ಬರೆದುಕೊಡುವೆ: ತಾವು ನಂಬಿಕೆ ದ್ರೋಹಿ ಅಲ್ಲಾ, ಯಾವುದೇ ಕಾರಣಕ್ಕೂ ಶ್ರೀನಿವಾಸಪ್ರಸಾದರ ಗೌರವ, ಹಿರಿತನಕ್ಕೆ ಬಿಜೆಪಿಯಲ್ಲಿ ದಕ್ಕೆಯಾಗುವುದಿಲ್ಲ ಎಂದು ಇಲ್ಲಿಯೇ ರಕ್ತದಲ್ಲಿ ಬರೆದು ಕೊಡುವುದಾಗಿ ಘೋಷಿಸಿದ ಯಡಿಯೂರಪ್ಪ, ಪ್ರಸಾದರನ್ನು ಗೆಲ್ಲಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂಬುದನ್ನು ಮರೆಯದೇ ಕಮಲದ ಗುರುತಿಗೆ ಮತ ನೀಡಬೇಕು. ಈ ಎರಡು ಉಪಚುನಾವಣೆಗೆ ಉಸ್ತುವಾರಿಗಳಾಗಿ ಮಾಜಿ ಸಚಿವರಾದ ವಿ. ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆಯವರನ್ನು ನೇಮಿಸಿರುವುದಾಗಿ ಘೋಷಿಸಿದರು.