Advertisement

ಜಾತಿಗಳ ಅಸ್ತಿತ್ವ ದೇಶದ ಪ್ರಗತಿಗೆ ಅಡ್ಡಿ

02:27 PM Feb 01, 2018 | Team Udayavani |

ಹೊಸಪೇಟೆ: ಸಮಾಜದ ಕೆಳವರ್ಗದ ಜನರು ಒಗ್ಗೂಡುವ ಮೂಲಕ ಪಟ್ಟಭದ್ರ ಹಿತಾಸಕ್ತಿಗಳ ಅಕ್ರಮಣ ಹಾಗೂ ಮೂಲಭೂತವಾದದ ಅಪಾಯವನ್ನ ತಡೆಗಟ್ಟಬಹುದಾಗಿದೆ ಎಂದು ಖ್ಯಾತ ಕವಿ, ನಾಡೋಜ ಡಾ| ಸಿದ್ಧಲಿಂಗಯ್ಯ ಹೇಳಿದರು.

Advertisement

ನಗರದ ಶ್ರೀಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯುವಕರು ವೈಚಾರಿಕತೆ ಮತ್ತು ಮಾನವೀಯ ಪ್ರೇಮವನ್ನು
ಬೆಳೆಸಿಕೊಳ್ಳುವುದು ವರ್ತಮಾನದ ಅಗತ್ಯವಾಗಿದೆ. ಜಾತಿಗಳ ಅಸ್ತಿತ್ವ ದೇಶದ ಏಳಿಗೆಗೆ ದೊಡ್ಡ ಅಡ್ಡಿಯಾಗಿದೆ. ಈ ಜಾಡ್ಯವನ್ನು ನಿವಾರಿಸುವಲ್ಲಿ ಯುವಜನರ ಪಾತ್ರ ಮಹತ್ವವಾದದ್ದು. ಜ್ಯೋತಿಷ್ಯ, ಜಾತಕದಂತಹ ಅವೈಜ್ಞಾನಿಕ ಸಂಗತಿಗಳು ಸಮಾಜದಲ್ಲಿ ಬೇರು ಬಿಟ್ಟಿವೆ. ಇಂತಹ ಸಂವಿಧಾನ ವಿರೋಧಿ ಸಂಗತಿಗಳನ್ನು ದೂರವಿಟ್ಟು ಮನುಜಮತದ ಕಡೆಗೆ ನಾವು ಹೆಜ್ಜೆ ಹಾಕಬೇಕಾಗಿದೆ ಎಂದರು.

ಸಂವಿಧಾನ ಬದಲಾವಣೆ ಕುರಿತಂತೆ ಜನಪ್ರತಿನಿಧಿಗಳು, ರಾಜಕಾರಣಿಗಳು ಹಗುರವಾಗಿ ಮಾತನಾಡುತ್ತಿರುವುದು ಅಪರಾಧ. ಸಂವಿಧಾನಕ್ಕೆ ಗೌರವ ತೋರಿಸುವುದು ಮಾತ್ರವಲ್ಲ, ಅದನ್ನು ನಮ್ಮ ಬದುಕಿನಲ್ಲಿ ಪಾಲಿಸಿದರೆ ಭಾರತದ ಆತ್ಮಗೌರವ ಹೆಚ್ಚುತ್ತದೆ ಎಂದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೇಳಿದ ಹಲವು ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಪ್ರಾಂಶುಪಾಲ ಡಾ|.ಜಿ.ಕನಕೇಶಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲೂಕು ಘಟಕದ ಖಜಾಂಚಿ ಜಿ.ಲಿಂಗಾರೆಡ್ಡಿ, ಕನ್ನಡ ವಿಭಾಗದ
ಮುಖ್ಯಸ್ಥ ಡಾ| ನಾಗಣ್ಣ ಕಿಲಾರಿ, ಕಸಾಪ ಅಧ್ಯಕ್ಷ ಡಾ| ಟಿ.ಎಚ್‌.ಬಸವರಾಜ್‌, ಡಾ| ಕೆ.ವೆಂಕಟೇಶ್‌ ಇದ್ದರು. ಡಾ| ನಾಗವೇಣಿ
ಸೋಸಲೆ ವಂದಿಸಿದರು. ಇದೇ ಸಂದರ್ಭದಲ್ಲಿ ಡಾ| ಸಿದ್ಧಲಿಂಗಯ್ಯನವರ ಕುರಿತ ಸಾಕ್ಷಚಿತ್ರ ಪ್ರದರ್ಶನ ಮಾಡಲಾಯಿತು.

ಯುವಕರು ವೈಚಾರಿಕತೆ ಮತ್ತು ಮಾನವೀಯ ಪ್ರೇಮವನ್ನು ಬೆಳೆಸಿಕೊಳ್ಳುವುದು ವರ್ತಮಾನದ ಅಗತ್ಯವಾಗಿದೆ. ಜಾತಿಗಳ
ಅಸ್ತಿತ್ವ ದೇಶದ ಏಳಿಗೆಗೆ ದೊಡ್ಡ ಅಡ್ಡಿಯಾಗಿದೆ. ಈ ಜಾಡ್ಯವನ್ನು ನಿವಾರಿಸುವಲ್ಲಿ ಯುವಜನರ ಪಾತ್ರ ಮಹತ್ವವಾದದ್ದು. ಜ್ಯೋತಿಷ್ಯ,
ಜಾತಕದಂತಹ ಅವೈಜ್ಞಾನಿಕ ಸಂಗತಿಗಳು ಸಮಾಜದಲ್ಲಿ ಬೇರು ಬಿಟ್ಟಿವೆ. ಇಂತಹ ಸಂವಿಧಾನ ವಿರೋಧಿ ಸಂಗತಿಗಳನ್ನು ದೂರವಿಟ್ಟು ಮನುಜಮತದ ಕಡೆಗೆ ನಾವು ಹೆಜ್ಜೆ ಹಾಕಬೇಕಾಗಿದೆ. 
ಡಾ| ಸಿದ್ದಲಿಂಗಯ್ಯ, ಸಾಹಿತಿ.

Advertisement

Udayavani is now on Telegram. Click here to join our channel and stay updated with the latest news.

Next