ಕೆ.ಎಸ್. ಈಶ್ವರಪ್ಪ, ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಇನ್ನೂ ಆಹ್ವಾನ ಬಂದಿಲ್ಲ. ಬಂದ ನಂತರ ಭಾಗವಹಿಸುವ ಬಗ್ಗೆ
ನಿರ್ಧರಿಸುವುದಾಗಿ ಹೇಳಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ.27ರಂದು ರಾಷ್ಟ್ರೀಯ ಅಧ್ಯಕ್ಷ ಅಮೀತ್ ಶಾ ಭೇಟಿಯಾದಾಗ ಫೆ.10ರೊಳಗೆ ಒಟ್ಟಾಗಿ ಕುಳಿತು ಚರ್ಚಿಸಿ ಎಲ್ಲ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಸೂಚಿಸಿದ್ದರು. ಆದರೆ, ಬಿಎಸ್‌ವೈ ವರಿಷ್ಠರ ಮಾತನ್ನು ಕಡೆಗಣಿಸಿ, ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಮ್ಮದೇ ದಾರಿಯಲ್ಲಿ ಸಾಗಿದ್ದು ಸಮಸ್ಯೆಗೆ ಕಾರಣವಾಗಿದೆ ಎಂದರು.
Advertisement
ಬ್ರಿಗೇಡ್ ನಿಲ್ಲಿಸಲ್ಲ: ಅಮಿತ್ ಶಾ ಅವರು ಬ್ರಿಗೇಡ್ ನಿಲ್ಲಿಸಿ ಎಂದು ಯಾವತ್ತೂ ಹೇಳಿಲ್ಲ. ಆದರೆ ಬಿಎಸ್‌ವೈ ಹಾಗೂರಾಜ್ಯ ಉಸ್ತುವಾರಿ ಮುರುಳೀಧರ್ ರಾವ್ ಬ್ರಿಗೇಡ್ ನಿಲ್ಲಿಸಬೇಕೆಂದು ಹೇಳುತ್ತಿರುವುದು ಏಕೆಂದು ಅರ್ಥವಾಗುತ್ತಿಲ್ಲ. ಏನೇ ಆಗಲಿ ರಾಯಣ್ಣ ಬ್ರಿಗೇಡ್‌ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ರಾಯಚೂರಿನಲ್ಲಿ ನಡೆಯುವ ರಾಯಣ್ಣ
ಬ್ರಿಗೇಡ್ ಪದಾಧಿಕಾರಿಗಳ ಅಭ್ಯಾಸ ವರ್ಗದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಮಾಡಿದ್ದ ರೆಸಾರ್ಟ್ ಸಂಸ್ಕೃತಿಯವರಿಗೆ ಸ್ಥಾನಮಾನ ನೀಡಿದ್ದಾರೆ. ಹೈಕಮಾಂಡ್ ಸಹ ಇದನ್ನು ಗಮನಿಸುತ್ತಿದ್ದು, ಸೂಕ್ತ
ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ. ಮೈಸೂರಿನಲ್ಲಿ ನಡೆಯುವ ಪಕ್ಷದ ಕಾರ್ಯಕಾರಿಣಿ ಸಭೆಗೆ ತಮಗಿನ್ನೂ ಆಹ್ವಾನ ಬಂದಿಲ್ಲ. ಬಂದ ನಂತರ ಭಾಗವಹಿಸುವ ಬಗ್ಗೆ ನಿರ್ಧರಿಸುತ್ತೇನೆ ಎಂದರು. ಪಕ್ಷದ ಸಂಘಟನಾ ಕಾರ್ಯದರ್ಶಿ ಸಂತೋಷ್ ಬಗ್ಗೆ ಯಡಿಯೂರಪ್ಪ ಆರೋಪ ಮಾಡಿರುವುದು ತಪ್ಪು. ಹಗರಿಬೊಮ್ಮನಹಳ್ಳಿಯಲ್ಲಿ ಸಂತೋಷ್ ಗೌಪ್ಯ ಸಭೆ ನಡೆಸಿದ್ದಾರೆಂಬುದು ಸುಳ್ಳು. ಅದರ ಅವಶ್ಯಕತೆ ಯಾರಿಗೂ ಇಲ್ಲ ಎಂದರು.