Advertisement
ಅವರು ಕಿರಿಮಂಜೇಶ್ವರ ಅಗಸ್ತೆÂà ಶÌರ ದೇವಸ್ಥಾನದಲ್ಲಿ ಉಳ್ಳೂರು ಮೂಕಜ್ಜಿ ವೇದಿಕೆಯಲ್ಲಿ ಫೆ. 23 ರಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕುಂದಾಪುರ ತಾಲೂಕು ಘಟಕದ ಆಶ್ರಯದಲ್ಲಿ ನಡೆದ 15ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಈ ಸಂದರ್ಭದಲ್ಲಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ| ಕನರಾಡಿ ವಾದಿರಾಜ ಭಟ್, ಜಿ.ಪಂ. ಸದಸ್ಯೆ ಗೌರಿ ದೇವಾಡಿಗ, ಕಿರಿಮಂಜೇಶ್ವರ ಅಗಸ್ತೆÂàಶ್ವರ ದೇಗುಲದ ಮಾಜಿ ಆಡಳಿತ ಧರ್ಮ ದರ್ಶಿ ಕೆ. ಉಮೇಶ ಶ್ಯಾನುಭೋಗ್, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾ.ಯೋಜನಾಧಿಕಾರಿ ಅಮರಪ್ರಸಾದ್ ಶೆಟ್ಟಿ, ಅಗಸ್ತೆÂàಶÌರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪರುಶುರಾಮ, ಬೈಂದೂರು ಹೋಬಳಿ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ. ಉಪ್ಪುಂದ, ಜಿಲ್ಲಾ ಕಾರ್ಯದರ್ಶಿ ಸೂರುಲು ನಾರಾಯಣ, ಅಶೋಕ ತೆಕ್ಕಟ್ಟೆ ಉಪಸ್ಥಿತರಿದ್ದರು.
ಕುಂದಾಪುರ ತಾಲೂಕು ಕಸಾಪ ಅಧ್ಯಕ್ಷ ಬೈಂದೂರು ಡಾ| ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು, ಗಣಪತಿ ಹೋಬಳಿದಾರ ಮತ್ತು ವಿಶ್ವನಾಥ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು, ನಾರಾಯಣ ಐತಾಳ ನಿರ್ವಹಿಸಿದರು, ರವೀಂದ್ರ ಎಚ್ ವಂದಿಸಿದರು.
ಧ್ವಜಾರೋಹಣ: ಬೆಳಗ್ಗೆ ಕುಂದಾಪುರ ತಾ.ಪಂ. ಅಧ್ಯಕ್ಷೆ ಜಯಶ್ರೀ ಎಸ್. ಮೊಗವೀರ ರಾಷ್ಟ್ರ ಧ್ವಜಾರೋಹಣ ನಡೆಸಿ ದರು. ಖಂಬದಕೋಣೆ ರೈತ ಸೇ.ಸ. ಸಂಘ ಉಪ್ಪುಂದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಕನ್ನಡ ತಾಯಿ ಭುವನೇಶ್ವರಿ ದಿಬ್ಬಣದ ಮೆರವಣಿಗೆಯನ್ನು ಉದ್ಘಾಟಿಸಿದರು.
ಇಂಗ್ಲಿಷ್ ಮೋಹದಿಂದ ಕನ್ನಡದ ಸೊಬಗು ಕನ್ನಡಿಗರಿಗೇ ಅರಿವಾಗತ್ತಾ ಇಲ್ಲ, ಸರಕಾರಿ ಶಾಲೆಗಳನ್ನು ಉಳಿಸುವುದೆಂದರೆ ಆಂಗ್ಲ ಮಾಧ್ಯಮವನ್ನು ಆರಂಭಿಸುವುದಲ್ಲ, ಕನ್ನಡವನ್ನು ಪರಿಣಾಮಕಾರಿಯಾಗಿ ಬೋಧನೆ ಮಾಡಲು ಕ್ರಮ ಕೈಗೊಳ್ಳಬೇಕು. ಇದು ಸಾಧ್ಯವಾಗದೇ ಕನ್ನಡ ಶಾಲೆಗಳನ್ನು ಆಂಗ್ಲ ಮಾಧ್ಯಮವನ್ನಾಗಿ ಮಾಡುವ ಪ್ರಯತ್ನ ಮುಂದುವರಿದರೆ ಹೋರಾಟದ ಜೊತೆಗೆ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿ ಕನ್ನಡದ ಉಳಿವಿಗಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಗುಡುಗಿದರು.-ನೀಲಾವರ ಸುರೇಂದ್ರ ಅಡಿಗ, ಅಧ್ಯಕ್ಷರು ಜಿಲ್ಲಾ ಕ.ಸಾಪ.