Advertisement
ನಗರದ ಪಾಲಿಕೆ ಸಭಾಂಗಣದಲ್ಲಿ ಮಹಾಪೌರ ಸೈಯದ್ ಅಹ್ಮದ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಮನರಂಜನಾ ವಲಯದಲ್ಲಿ ಅಮ್ಯೂಜಮೆಂಟ್ ಪಾರ್ಕ್ ನಿರ್ಮಿಸುವುದು, ಜಲವಿಹಾರ ನಿರ್ಮಿಸುವುದು, ಈಜುಕೋಳ ಸೇರಿದಂತೆ ಇತರ ಮನರಂಜನಾ ಕಾರ್ಯಚಟುವಟಿಕೆಗಳನ್ನು ಸ್ಥಾಪನೆ ಕುರಿತು ವಿವರವಾಗಿ ಚರ್ಚೆ ನಡೆಸಲಾಯಿತು.
Related Articles
Advertisement
ನಿರ್ವಹಣೆ ಖಾಸಗಿಯವರಿಗೆ: ನಗರದ ವಿವಿಧ ಸ್ಥಳಗಳಲ್ಲಿ ಉದ್ಯಾನವನ, ವೃತ್ತ, ರಸ್ತೆ ವಿಭಜನೆಗಳ ನಿರ್ವಹಣೆಯನ್ನು ಸ್ಥಳೀಯ ಬಿಲ್ಡರ್ಸ್, ಕಾರ್ಖಾನೆಗಳು ಹಾಗೂ ಇತರ ಕಂಪನಿಗಳಿಗೆ ನೀಡಲು ಉದ್ದೇಶಿಸಲಾಗಿದೆ ಎಂದು ಆಯುಕ್ತರು ಸಭೆ ಗಮನಕ್ಕೆ ತಂದರು. ಈಗಾಗಲೇ ಜೇವರ್ಗಿ ರಸ್ತೆಯ ರಾಷ್ಟ್ರಪತಿ ಚೌಕ್‌ದಿಂದ ರಾಮ ಮಂದಿರ ವೃತ್ತದವರೆಗೆ ಮಾದರಿಯಲ್ಲಿ ರಸ್ತೆ ವಿಭಜಕ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಅದೇ ರೀತಿ ಇತರ ವಿಭಜಕಗಳನ್ನು ನೀಡಲು ಮುಂದಾಗಲಾಗಿದೆ ಎಂದರು.
ಹರಿಜನ ಪದ: ಕೇಂದ್ರ ಸರ್ಕಾರದ ಸುತ್ತೋಲೆಯಂತೆ ಹರಿಜನ ಎಂಬ ಪದವನ್ನು ಕಚೇರಿ ಕಡತಗಳಲ್ಲಿ ಹಾಗೂ ಜಾಹೀರಾತು ಮತ್ತು ಮುಂತಾದವುಗಳಲ್ಲಿ ಉಪಯೋಗಿಸುವುದನ್ನು ನಿಷೇಧಿಸಲಾಗಿದ್ದು, ಅದನ್ನು ಆಡಳಿತದಲ್ಲಿ ಪಾಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಪಾಲಿಕೆ ಸುಪರ್ಧಿಗೆ ಜಾಗ: ಹೀರಾಪುರ ಸರ್ವೆ ನಂಬರವೊಂದರಲ್ಲಿ ಪಾಲಿಕೆಗೆ ಸೇರಿದ್ದ 3.20 ಎಕರೆ ಜಾಗ ಅತಿಕ್ರಮಣವಾಗಿದ್ದನ್ನು ತೆರವುಗೊಳಿಸಿ ಪಾಲಿಕೆ ಸುಪರ್ದಿಗೆ ತೆಗೆದುಕೊಂಡಿರುವುದನ್ನು ಮಹಾಪೌರರು ಸಭೆ ಗಮನಕ್ಕೆ ತಂದರು. ಇದಕ್ಕೆ ಸದಸ್ಯರೆಲ್ಲರೂ ಮೇಜು ಕುಟ್ಟಿ ಸ್ವಾಗತಿಸಿದರು. ಈ ಜಾಗವನ್ನು ಸದಸ್ಯರೆಲ್ಲರೂ ಖುದ್ದಾಗಿ ನೋಡಿ ಈ ಸ್ಥಳದಲ್ಲಿ ಏನೇನು ಕಾರ್ಯಗಳು ಮಾಡಬೇಕು ಎಂಬುದರ ಕುರಿತು ನಿರ್ಣಯಿಸಲಾಯಿತು.
ಸಭೆ ಸುಸೂತ್ರ: ಪಾಲಿಕೆ ಸಾಮಾನ್ಯ ಸಭೆ ಎಂದರೆ ಸದಾ ಗದ್ದಲ-ಗೊಂದಲಗಳಿಂದ ಕೂಡಿರುತ್ತದೆ. ಆದರೆ ಶುಕ್ರವಾರ ನಡೆದ ಸಾಮಾನ್ಯ ಸಭೆ ಸುಸೂತ್ರವಾಗಿ ನಡಾವಳಿ ಪ್ರಕಾರ ನಡೆದು ವಿವರವಾದ ಚರ್ಚೆ ಮಾಡಲಾಯಿತು. ದಿನದಲ್ಲಿ ಎರಡೂರು ಗಂಟೆ ಸಭೆ ನಡೆದು ಪಾಸ್-ಪಾಸ್ ಎನ್ನುತ್ತಿದ್ದ ಸಂಸ್ಕೃತಿಗೆ ತೀಲಾಂಜಲಿ ಹಾಡಲಾಯಿತು.
ಅಲ್ಲದೇ ಸಭೆಯನ್ನು ಮತ್ತೂಂದು ದಿನಕ್ಕೆ ಮುಂದುವರಿಸಲು ನಿರ್ಧರಿಸಲಾಯಿತು. ವಾರ್ಡುಗಳು ಪುನರ್ ವಿಂಗಣಡೆ ಕುರಿತಾಗಿ ಸರ್ಕಾರ ಅಧಿಸೂಚನೆ ಹೊರಡಿಸಿದ್ದನ್ನು ಸಭೆಯಲ್ಲಿ ವಿವರವಾಗಿ ಪ್ರಸ್ತಾಪಿಸಲಾಯಿತು. 2011ರ ಜನಗಣತಿಯಂತೆ ವಾರ್ಡುಗಳು ವಿಂಗಣಡೆಯಾಗಲಿವೆ ಎಂದು ಅಧಿಕಾರಿಗಳು ವಿವರಣೆ ನೀಡಿದರು.